Headlines

ಬೆಂಗಳೂರಿನ ನಿಗೂಢ ಗ್ಯಾಸ್ ಸ್ಫೋಟದ ಬಗ್ಗೆ ಡಿಸಿಎಂ ಹೇಳಿದ್ದೇನು?

ಬೆಂಗಳೂರು, ಆಗಸ್ಟ್ 15: ನಗರದ ವಿಲ್ಸನ್ ಗಾರ್ಡನ್ ಪ್ರದೇಶದ ಚಿನ್ನಯ್ಯನಪಾಳ್ಯದಲ್ಲಿ ಸಂಭವಿಸಿದ್ದ ನಿಗೂಢ ಸ್ಫೋಟದಲ್ಲಿ ಓರ್ವ ಬಾಲಕ ಮೃತಪಟ್ಟು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಜೊತೆಗೆ ಈ ಅವಘಡದಲ್ಲಿ ಸುಮಾರು 8 ಮನೆಗಳಿಗೆ ಹಾನಿಯಾಗಿವೆ. ಈ ನಿಗೂಢ ಸ್ಫೋಟ ಸಂಭವಿಸಿದ ಸ್ಥಳಕ್ಕೆ ನಿನ್ನೆ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಪ್ರಿಯಾಂಕ್​ ಖರ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಈ ನಿಗೂಢ ಸ್ಫೋಟಕ್ಕೆ ಮನೆಯ ಅಡುಗೆ ಗ್ಯಾಸ್ ಲೀಕ್ ಆಗಿದ್ದೇ ಕಾರಣ ಎಂದು ಪೊಲೀಸರು ನನಗೆ ತಿಳಿಸಿದ್ದಾರೆ. ಆದರೆ ಈ ಗ್ಯಾಸ್ ಲೀಕೇಜ್ ಹೇಗಾಯ್ತು? ಎಂಬುದರ ನಿಖರ ಸತ್ಯಾಂಶ ಪೊಲೀಸರ ತನಿಖೆ ಬಳಿಕ ತಿಳಿಯಲಿದೆ. ಆದರೆ ಚಿನ್ನಯ್ಯನಪಾಳ್ಯದ ಮನೆಯೊಂದರ ಗ್ಯಾಸ್ ಬ್ಲಾಸ್ಟ್ ನಲ್ಲಿ ಸತ್ತ ಬಾಲಕನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ವಿತರಿಸಲಾಗುತ್ತದೆ. ಜೊತೆಗೆ ಈ ಗ್ಯಾಸ್ ಬ್ಲಾಸ್ಟ್ ನಲ್ಲಿ ಗಾಯಗೊಂಡ ಎಲ್ಲರಿಗೂ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆಯಿಂದ ಚೇತರಿಕೆ ಕಾಣುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಗ್ಯಾಸ್ ಬ್ಲಾಸ್ಟ್ ನಲ್ಲಿ ಅನೇಕ ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಹಾನಿಗೊಳಗಾದ ಮನೆಗಳ ದುರಸ್ತಿ ಕಾರ್ಯಕ್ಕೆ ಕೂಡ ಸರ್ಕಾರ ಪರಿಹಾರ ವಿತರಿಸಲಿದೆ. ಒಟ್ಟಾರೆ ಈ ನಿಗೂಢ ಗ್ಯಾಸ್ ಬ್ಲಾಸ್ಟ್ ಹೇಗಾಯ್ತು? ಎಂಬ ಅಸಲಿ ಸತ್ಯ ಪೊಲೀಸರ ತನಿಖೆಯಿಂದ ಇನ್ನೂ ತಿಳಿಯಬೇಕಿದೆ’ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!