Headlines

ಚಂದನ್ ಆತ್ಮಹತ್ಯೆ ಬೆದರಿಕೆಯ ಹಿಂದಿನ ರಹಸ್ಯವೇನು!?

ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ

ಚಾಮರಾಜನಗರ : ನನ್ನ ಸಾವಿಗೆ ಸೆನ್ ಡಿವೈಸ್ಪಿ ಪವನ್ ಕುಮಾರ್ ಕಾರಣ ಎಂದು ಆರೋಪಿಸಿ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾನೆ. ಬೆಂಗಳೂರು ಮೂಲದ ಬ್ಯಾಡ್ಮಿಂಟನ್ ಕೋಚ್ ಆಗಿರುವ ಚಂದನ್ ಗಂಭೀರ ಆರೋಪ ಮಾಡಿ ವಿಡಿಯೊ ಹರಿಯಬಿಟ್ಟಿದ್ದು ಇದರ ರಹಸ್ಯವೆ ಮಾನವೀಯತೆಗೆ ಬೆಂಕಿ ಇಟ್ಟ ಕಥೆಯಾಗಿದೆ.

ಕೋಚರ್ ಚಂದನ್ ಹೇಳುವಂತೆ, ನಾನು ಅವರಿಗೆ ಫ್ರೀ ಕೋಚಿಂಗ್ ಕೊಟ್ಟಿದ್ದೇನೆ, ಅವರ ಬಳಿ ಸಾಲವಾಗಿ ಹಣ ಕೂಡ ಪಡೆದಿದ್ದೇನೆ. ಇದೀಗ ನನಗೆ ತುಂಬಾ ಕಿರುಕುಳ ಕೊಡ್ತಿದ್ದಾರೆ, ನಾನು ಸತ್ತ ಮೇಲೆ ನಮ್ಮ ತಾಯಿನಾ ನೀವೆ ನೊಡ್ಕೊಳ್ಳಿ. ನನ್ನ ಬಿಟ್ಟರೆ ಯಾರೂ ನೋಡಿಕೊಳ್ಳುವವರು ಇಲ್ಲ, ಮುಂದಿನ ಜನ್ಮದಲ್ಲಿ ನಾನು ನಿಮ್ಮ ಸಾಲ ತಿರೀಸ್ತಿನಿ ಎಂದು ಯುವಕ ಹೇಳಿದ್ದಾನೆ.

ನಮ್ಮ ಅತ್ತೆ ಮನೆಗೆ ಹೇಳ್ತೀನಿ ಅಂತೀರಾ, ಇದೆಲ್ಲಾ ಬೇಡ ಸರ್. ನಾನು ಸತ್ತರೆ ಹೆಂಡ್ತಿ ಮಕ್ಕಳನ್ನು ನೀವು ಸಾಕುತ್ತಿರಾ, 23 ಜನರ ಪೊಲೀಸರಿಗೆ ಒಂದು ರೂಪಾಯಿ ಪಡೆಯದೆ ಕೋಚಿಂಗ್ ಕೊಟ್ಟಿದ್ದೇನೆ ಎಂದು ಬೆಂಗಳೂರು ಮೂಲದ ಬ್ಯಾಡ್ಮಿಂಟನ್ ಕೋಚ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾನೆ. ನಿಗದಿತ ಅವಧಿಯೊಳಗೆ ಕೊಡುತ್ತೇನೆಂದು ಹಣ ಪಡೆದು ಕೊಡದೆ ಸತಾಯಿಸುತ್ತಿರೋದು ನೋಡಿದರೆ ಕೊಟ್ಟ ಹಣ ವಾಪಸ್ ಕೇಳೊದ್ ತಪ್ಪಾ ಎಂಬಂತೆ ಈಗ ಅಧಿಕಾರಿಗೆ ತಲೆ ನೋವಾಗಿ ಪರಿಣಮಿಸಿದ್ದು ಎಷ್ಟರ ಮಟ್ಟಿಗೆ ಪ್ರಕರಣ ಸುಖಾಂತ್ಯಗೊಳ್ಳಲಿದೆ ಎಂಬುದು ಕಾದು ನೋಡಬೇಕಾಗಿದೆ

Leave a Reply

Your email address will not be published. Required fields are marked *

error: Content is protected !!