ಅಕ್ರಮ ಬಾಂಗ್ಲಾದೇಶಿಗರಿಗೆ ಇಲ್ಲ ಪರ್ಯಾಯ ವಸತಿ: ಪತ್ತೆಯಾದಲ್ಲಿ ತಕ್ಷಣ ಗಡಿಪಾರು – ಗೃಹ ಸಚಿವ ಡಾ. ಜಿ. ಪರಮೇಶ್ವರ್ ಎಚ್ಚರಿಕೆ
ಬೆಂಗಳೂರು: ರಾಜಧಾನಿಯ ಯಲಹಂಕದ ಕೋಗಿಲು ಕ್ರಾಸ್ ಬಳಿ ನಡೆದ ತೆರವು ಕಾರ್ಯಾಚರಣೆಯ ಬೆನ್ನಲ್ಲೇ ತೀವ್ರಗೊಂಡಿರುವ ‘ಅಕ್ರಮ ವಲಸಿಗರ’ ವಿವಾದಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ. ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ಪ್ರಜೆಗಳಿಗೆ ಯಾವುದೇ ಕಾರಣಕ್ಕೂ ಸರ್ಕಾರದಿಂದ ಪರ್ಯಾಯ ವಸತಿ ಸೌಲಭ್ಯ ನೀಡುವುದಿಲ್ಲ ಮತ್ತು ಪತ್ತೆಯಾದ ತಕ್ಷಣವೇ ಅವರನ್ನು ಗಡಿಪಾರು ಮಾಡಲಾಗುವುದು ಎಂದು ಅವರು ಕಡಕ್ ಸಂದೇಶ ರವಾನಿಸಿದ್ದಾರೆ. ಪೊಲೀಸ್ ತಪಾಸಣೆ ಮತ್ತು ಬಿಗುವಿನ ಕ್ರಮ ಯಲಹಂಕದ ಫಕೀರ್ ಬಡಾವಣೆಯಲ್ಲಿ ತೆರವುಗೊಂಡ ನಿರಾಶ್ರಿತರ ಪಟ್ಟಿಯನ್ನು…

