ಸಿಸಿಟಿವಿ ಫೂಟೇಜ್ ನೀಡದ PSIಗಳ ವಿರುದ್ಧ ಕಠಿಣ ಶಿಸ್ತುಕ್ರಮಕ್ಕೆ ಆಯೋಗ ಆದೇಶ
ಮಾಹಿತಿ ಹಕ್ಕು ಕಾಯ್ದೆಯಡಿ (RTI) ಕೋರಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸಲು ವಿಫಲವಾದ ಹಾಗೂ ಅವುಗಳನ್ನು ಸಂರಕ್ಷಿಸಿಡದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳ (PSI) ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಕರ್ನಾಟಕ ಮಾಹಿತಿ ಆಯೋಗವು ಶಿಫಾರಸು ಮಾಡಿದೆ. ಪೊಲೀಸ್ ಠಾಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಅಥವಾ ಕಿರುಕುಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರೊಬ್ಬರು ಸಿಸಿಟಿವಿ ಫೂಟೇಜ್ ನೀಡುವಂತೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರು. ಆದರೆ, “ಸಿಸ್ಟಮ್‌ನಲ್ಲಿ ಡಾಟಾ ಆಟೋ-ಡಿಲೀಟ್ ಆಗಿದೆ”, “ವಿದ್ಯುತ್ ವ್ಯತ್ಯಯದಿಂದ ಧ್ವಂಸಗೊಂಡಿದೆ” ಅಥವಾ “ಸ್ಟೋರೇಜ್ ಸಮಸ್ಯೆಯಿಂದ ದೃಶ್ಯಾವಳಿ ಲಭ್ಯವಿಲ್ಲ” ಎಂಬಿತ್ಯಾದಿ…

