Headlines

newsfilemagazine

ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಬ್ರೇಕ್!

ಬೆಳ್ತಂಗಡಿ, ಸೆ.15 : ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ಹೊಸ ಬೆಳವಣಿಗೆ ನಡೆದಿದೆ. ನೇತ್ರಾವತಿ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಶೋಧ ಕಾರ್ಯಾಚರಣೆ ನಡೆಯುವ ಸಾಧ್ಯತೆ ಏರ್ಪಟ್ಟಿದ್ದರೂ, ಕೊನೆಯ ಕ್ಷಣದಲ್ಲಿ ಅದನ್ನು ಮುಂದೂಡಲಾಗಿದೆ. ಶೋಧ ಕಾರ್ಯಾಚರಣೆ ಸುತ್ತಮುತ್ತ ಬೆಳವಣಿಗೆ ಎಸ್ಐಟಿ ತೀರ್ಮಾನ ಶೋಧದ ಹಿಂದಿನ ಕಾರಣ ಹಿನ್ನಲೆ ಮಾಹಿತಿ ಈ ಹಿನ್ನೆಲೆಯಲ್ಲಿ ಬಂಗ್ಲೆಗುಡ್ಡೆ ಕಾಡು ಪ್ರಕರಣದಲ್ಲಿ ಶೋಧ ಕೈಗೊಳ್ಳುವ ವಿಷಯ ಇನ್ನೂ ಅನಿಶ್ಚಿತವಾಗಿದ್ದು, ಅಧಿಕೃತ ನಿರ್ಧಾರಕ್ಕಾಗಿ ಎಸ್ಐಟಿ ಕಾಯುತ್ತಿದೆ.

Read More

“ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿರುದ್ಧದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ “

ಮೈಸೂರು, ಸೆಪ್ಟೆಂಬರ್ 15: ಮೈಸೂರಿನ ದಸರಾ ಉದ್ಘಾಟನೆಯಲ್ಲಿ ಬೂಕರ್ ಪ್ರಶಸ್ತಿ ವಿಜೇತೆ ಖ್ಯಾತ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ ಸರ್ಕಾರದ ನಿರ್ಧಾರದ ವಿರುದ್ಧ ಬಿಜೆಪಿ ನಾಯಕ ಪ್ರತಾಪ್ ಸಿಂಹ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾಯಮೂರ್ತಿ ಸಿಎಂ ಜೋಶಿ ಅವರಿದ್ದ ವಿಭಾಗೀಯ ಪೀಠ, “ದಸರಾ ಉದ್ಘಾಟನೆ ಸಂಬಂಧ ಯಾವುದೇ ಹಕ್ಕು ಉಲ್ಲಂಘನೆ ಆಗಿರುವುದು ಕಂಡುಬಂದಿಲ್ಲ….

Read More

ಕರ್ನಾಟಕದಲ್ಲಿ ಮತ್ತೆ‌ ಸರ್ಕಾರದಿಂದ ಕರೆಂಟ್ ಶಾಕ್ ಸಾಧ್ಯತೆ!

ಬೆಂಗಳೂರು, ಸೆ.14: ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಶೀಘ್ರವೇ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಇದೆ. ವಿದ್ಯುತ್ ದರ ಏರಿಕೆ ಮಾಡುವಂತೆ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ. ಪ್ರತಿ ಯೂನಿಟ್ ಗೆ 1 ರೂಪಾಯಿಯಂತೆ ವಿದ್ಯುತ್ ದರ ಏರಿಕೆ ಮಾಡಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ. ಈಗಾಗಲೇ ವಾಣಿಜ್ಯ, ಕೈಗಾರಿಕಾ ವಲಯಕ್ಕೆ ವಿದ್ಯುತ್ ದರ ಏರಿಕೆ ಮಾಡಿ ಶಾಕ್ ಕೊಟ್ಟಿರುವ ಬೆಸ್ಕಾಂ, ಇದೀಗ ಮತ್ತೆ ವಿದ್ಯುತ್ ದರ ಹೆಚ್ಚಳ…

Read More

ಚಂದನ್ ಆತ್ಮಹತ್ಯೆ ಬೆದರಿಕೆಯ ಹಿಂದಿನ ರಹಸ್ಯವೇನು!?

ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ ಚಾಮರಾಜನಗರ : ನನ್ನ ಸಾವಿಗೆ ಸೆನ್ ಡಿವೈಸ್ಪಿ ಪವನ್ ಕುಮಾರ್ ಕಾರಣ ಎಂದು ಆರೋಪಿಸಿ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾನೆ. ಬೆಂಗಳೂರು ಮೂಲದ ಬ್ಯಾಡ್ಮಿಂಟನ್ ಕೋಚ್ ಆಗಿರುವ ಚಂದನ್ ಗಂಭೀರ ಆರೋಪ ಮಾಡಿ ವಿಡಿಯೊ ಹರಿಯಬಿಟ್ಟಿದ್ದು ಇದರ ರಹಸ್ಯವೆ ಮಾನವೀಯತೆಗೆ ಬೆಂಕಿ ಇಟ್ಟ ಕಥೆಯಾಗಿದೆ. ಕೋಚರ್ ಚಂದನ್ ಹೇಳುವಂತೆ, ನಾನು ಅವರಿಗೆ ಫ್ರೀ ಕೋಚಿಂಗ್ ಕೊಟ್ಟಿದ್ದೇನೆ, ಅವರ ಬಳಿ ಸಾಲವಾಗಿ ಹಣ ಕೂಡ ಪಡೆದಿದ್ದೇನೆ. ಇದೀಗ ನನಗೆ ತುಂಬಾ ಕಿರುಕುಳ…

Read More

ಹಾಸನ‌ ಬಳಿ ಟ್ರಕ್ ಹರಿದು ದುರಂತ: ಸಾವಿನ ಸಂಖ್ಯೆ 10 ಕ್ಕೆ ಏರಿಕೆ!

ಹಾಸನ, ಸೆ.13: ಹಾಸನ ಜಿಲ್ಲೆಯ ಮೊಸಳೆ ಹೊಸಹಳ್ಳಿ ಗ್ರಾಮದ ಬಳಿ ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಟ್ರಕ್ ಹರಿದು ನಡೆದಿದ್ದ ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ. ಇಂದು ಶನಿವಾರ ಈ ದುರಂತದಲ್ಲಿ ಬೆಳಿಗ್ಗೆಯವರೆಗೂ 9 ಮಂದಿ ಸಾವನ್ನಪ್ಪಿದ್ದರು.ಇದೇ ದುರಂತದಲ್ಲಿ ಹಾಸನ ತಾಲ್ಲೂಕಿನ ಶಿವಯ್ಯನ ಕೊಪ್ಪಲು ಗ್ರಾಮದ ಯುವಕ 26 ವರ್ಷದ ಚಂದನ್ ಗಂಭೀರ ಸ್ಥಿತಿಯಲ್ಲಿ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ. ದುರಾದೃಷ್ಟವಶಾತ್ ಟ್ರಕ್ ಹರಿದಿದ್ದರಿಂದ ಚಂದನ್ ಬ್ರೇನ್ ಡೆಡ್ ಸ್ಥಿತಿಯಲ್ಲಿತ್ತು. ಹೀಗಾಗಿ ಚಂದನ್ ನನ್ನು…

Read More

ಏಷ್ಯಾ ಕಪ್ ಮಹಿಳಾ ಹಾಕಿ‌: ಫೈನಲ್ ತಲುಪಿದ ಭಾರತ

ಬೀಜಿಂಗ್, ಸೆ.13: ಹಾಕಿ ಏಷ್ಯಾಕಪ್‌ ಸೂಪರ್-4 ಸುತ್ತಿನಲ್ಲಿ ಜಪಾನ್ ವಿರುದ್ಧದ ಪಂದ್ಯವನ್ನು 1-1 ಗೋಲುಗಳಿಂದ ಡ್ರಾದಲ್ಲಿ ಅಂತ್ಯಗೊಳಿಸಿರುವ ಭಾರತೀಯ ಮಹಿಳಾ ಹಾಕಿ ತಂಡ ಟೂರ್ನಿಯಲ್ಲಿ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತವು ಬ್ಯೂಟಿ ಡಂಗ್‌ಡಂಗ್ (7 ನೇ ನಿಮಿಷ) ಅವರ ಅದ್ಭುತ ಗೋಲಿನೊಂದಿಗೆ ಆರಂಭಿಕ ಮುನ್ನಡೆ ಸಾಧಿಸಿತು, ಆದರೆ ಜಪಾನ್‌ನ ಶಿಹೋ ಕೊಬಯಕಾವಾ (58 ನೇ ನಿಮಿಷ) ಕೊನೆಯ ಕ್ಷಣಗಳಲ್ಲಿ ಗೋಲು ಗಳಿಸಿ ಸ್ಕೋರ್ ಅನ್ನು ಸಮಬಲಗೊಳಿಸಿದರು. ಈ ಡ್ರಾದೊಂದಿಗೆ, ಭಾರತ…

Read More

ಹಾಸನ ದುರಂತ: ಹಿಮ್ಸ್ ಗೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ, ಜೆಡಿಎಸ್ ನಿಂದ ತಲಾ 1 ಲಕ್ಷ ರೂ. ಪರಿಹಾರ ಘೋಷಣೆ

ಹಾಸನ ತಾಲ್ಲೂಕಿನ ಮೊಸಳೆ ಹೊಸಹಳ್ಳಿ ಗ್ರಾಮದ ಬಳಿ ಗಣೇಶೋತ್ಸವ ಮೆರವಣಿಗೆ ವೇಳೆ ಟ್ರಕ್ ನುಗ್ಗಿ ಸಂಭವಿಸಿದ ಭೀಕರ ಅಪಘಾತದಲ್ಲಿ 10 ಜನ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡ ಇಂದು ಶನಿವಾರ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಹಾಸನದ ಹಿಮ್ಸ್ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿ ನೀಡಿದರು. ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಜೆಡಿಎಸ್ ಪಕ್ಷದ ವತಿಯಿಂದ ತಲಾ 1 ಲಕ್ಷ ರೂ. ಪರಿಹಾರ ನೀಡುವುದಾಗಿ ದೇವೇಗೌಡ ಘೋಷಣೆ ಮಾಡಿದರು. ಗಂಭೀರವಾಗಿ ಗಾಯಗೊಂಡವರಿಗೆ 25 ಸಾವಿರ ರೂ., ಸ್ವಲ್ಪ…

Read More

ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಹರಿದ ಟ್ರಕ್: 8 ಗಣೇಶ ಭಕ್ತರು ದುರ್ಮರಣ!

ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಮೇಲೆ ವೇಗವಾಗಿ ಬಂದ ಟ್ರಕ್ ಹರಿದು 8 ಮಂದಿ ಗಣೇಶ ಭಕ್ತರು ಸಾವನ್ನಪ್ಪಿದ ದುರ್ಘಟನೆ ಹಾಸನ ತಾಲ್ಲೂಕಿನ ಮೊಸಳೆಹೊಸಹಳ್ಳಿ ಗ್ರಾಮದ ಬಳಿ ನಡೆದಿದೆ. ಇಂದು ಶುಕ್ರವಾರ ರಾತ್ರಿ ಈ ದುರಂತ ಘಟಿಸಿದೆ. ಈ ಭೀಕರ ರಸ್ತೆ ಅಪಘಾತದಲ್ಲಿ 20 ಕ್ಕೂ ಹೆಚ್ಚಿನ ಗಣೇಶ ಭಕ್ತರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.ಗಾಯಾಳುಗಳನ್ನು ಹಾಸನ ಜಿಲ್ಲಾಸ್ಪತ್ರೆ ಮತ್ತು ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಭೀಕರ ಅಪಘಾತದ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ…

Read More

ನೇಪಾಳದ ಹೊಸ ಪ್ರಧಾನಿಯಾಗಿ ಸುಶೀಲಾ ಕರ್ಕಿ ಆಯ್ಕೆ!

ನೇಪಾಳ ದೇಶದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ಮಾಡಿದ್ದಕ್ಕೆ ಉದ್ರಿಕ್ತ ಯುವ ನೇಪಾಳ ಯುವ ಸಮುದಾಯ ರಾಜಧಾನಿ ಕಠ್ಮಂಡುವಿನಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಕಾರಣಕ್ಕೆ ಪ್ರಧಾನಿಯಾಗಿದ್ದ ಕೆ.ಪಿ‌ ಶರ್ಮಾ ಓಲಿ ರಾಜೀನಾಮೆ ನೀಡಿದ್ದರು.ಇದರಿಂದ ನೇಪಾಳ ಗಲಭೆಯಲ್ಲಿ ಅಲ್ಲಿನ ಸರ್ಕಾರವೇ ಸಂಪೂರ್ಣವಾಗಿ ಪತನವಾಗಿತ್ತು‌. ಆನಂತರ ಬಹಳ ಯೋಚನೆ ಮಾಡಿ ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ನೇಪಾಳದ ಹೊಸ ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಗಿದೆ.ಸುಶೀಲಾ ಕರ್ಕಿ ಅವರು ಇಂದು ಶುಕ್ರವಾರ ಸೆಪ್ಟೆಂಬರ್ 12 ರ ರಾತ್ರಿ 9:15 ಕ್ಕೆ…

Read More

ನನಗೆ ಮನೆಯೇ ಇಲ್ಲ, ಸಮೀರ್ ಎಂ.ಡಿ ಅಂದ್ರೆ ಬಾಡಿಗೆಗೆ ಮನೆ ಕೊಡ್ತಿಲ್ಲ!

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಎಸ್ಐಟಿ ತನಿಖೆಗೆ ಒಳಗಾಗಿರುವ ಸಮೀರ್ ಎಂ.ಡಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಯೂಟ್ಯೂಬ್ ವಿಡಿಯೋದಲ್ಲಿ ಮಾತನಾಡಿರುವ ಸಮೀರ್​.. ನನಗೆ ವಿದೇಶದಿಂದ ಫಂಡ್​ ಬಂದಿದೆ ಎಂದು ಆರೋಪ ಮಾಡುತ್ತಿದ್ದಾರೆ. ನನಗೆ ಯಾವುದೇ ಫಂಡ್ ಬಂದಿಲ್ಲ. ಹಣ ತಗೊಂಡಿದ್ದಿದ್ರೆ ತನಿಖೆಯಿಂದ ಎಲ್ಲಾ ಹೊರಗೆ ಬರ್ತಿತ್ತು. ಪೊಲೀಸರಿಗೆ ಎಲ್ಲಾ ಬ್ಯಾಂಕ್ ದಾಖಲೆ ನೀಡಿದ್ದೇನೆ. ಪೊಲೀಸರು ತನಿಖೆ ಮಾಡಲಿ, ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡುವವರನ್ನ ಯಾರೂ ಪ್ರಶ್ನೆ ಮಾಡಲ್ಲ ಎಂದು ಆಕ್ರೋಶ…

Read More
error: Content is protected !!