ಭಟ್ಕಳದ ಕಾಡಿನಲ್ಲಿ ಸಿಕ್ಕಿದ್ದ ದನಗಳ ಅಸ್ಥಿಪಂಜರಗಳ ಕೇಸ್ ಭೇದಿಸಿದ ಪೊಲೀಸರು
ಕಾರವಾರ, ಸೆ.18: ಉತ್ತರಕನ್ನಡ ಜಿಲ್ಲೆಯ ಭಟ್ಕಳ ಅರಣ್ಯ ಪ್ರದೇಶದಲ್ಲಿ ದನಗಳ ರಾಶಿ ರಾಶಿ ಅಸ್ಥಿಪಂಜರಗಳು ಸಿಕ್ಕಿದ್ದ ಪ್ರಕರಣವನ್ನು ಕೊನೆಗೂ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವು ಊರುಗಳಲ್ಲಿ ಕದ್ದ ಗೋವುಗಳನ್ನು ಭಟ್ಕಳಕ್ಕೆ ತಂದು ಮಾಂಸಕ್ಕಾಗಿ ಕಡಿದ ನಂತರ ಉಳಿದ ಮೂಳೆಗಳನ್ನು ಅರಣ್ಯದಲ್ಲಿ ಹಾಕಿ ಪರಾರಿಯಾಗುತಿದ್ದರು ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಿರುವ ಪೊಲೀಸರು, ಇತರ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಭಟ್ಕಳದ ಮಗ್ದೂಂ ಕಾಲೂನಿ ಬಳಿಯ ಬೆಳ್ನೆ ಗ್ರಾಮದ ಸರ್ವೆ ನಂಬರ್ 74 ರ ಭಾಗದಲ್ಲಿ…

