Headlines

newsfilemagazine

ಕೆ.ಎನ್. ರಾಜಣ್ಣ ಬಿಜೆಪಿ ಸೇರ್ಪಡೆಗೆ ಪ್ರಯತ್ನ: ಕಾಂಗ್ರೆಸ್ ಶಾಸಕರೊಬ್ಬರ ಸ್ಫೋಟಕ ಆರೋಪ

ಕಾರಣವಿಲ್ಲದೆ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ವಜಾಗೊಂಡ ಮಧುಗಿರಿ ಕ್ಷೇತ್ರದ ಹಾಲಿ ಹಿರಿಯ ಶಾಸಕ ಕೆ.ಎನ್ ರಾಜಣ್ಣ ಬಗ್ಗೆ ಕಾಂಗ್ರೆಸ್ ಶಾಸಕರೊಬ್ಬರು ಸ್ಫೋಟಕ ಸುದ್ದಿ ನೀಡಿದ್ದಾರೆ. ರಾಜ್ಯದ ಕೈ ಸರ್ಕಾರದಿಂದ ವಜಾಗೊಂಡ ಶಾಸಕ ಕೆ.ಎನ್ ರಾಜಣ್ಣ ಅವರು ಇದೀಗ ಬಿಜೆಪಿಗೆ ಸೇರಲು ಅರ್ಜಿ ಹಾಕಿಕೊಂಡಿದ್ದಾರೆ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಬಗ್ಗೆ ಇಂದು ಹೇಳಿಕೆ ನೀಡಿದ ಮಾಗಡಿ ಶಾಸಕ ಎಚ್.ಸಿ ಬಾಲಕೃಷ್ಣ ಹೇಳಿದ್ದಿಷ್ಟು: “ಕೆ.ಎನ್ ರಾಜಣ್ಣ ತಮ್ಮ ಮಾತಿನಿಂದಲೇ…

Read More

ರೇಣುಕಾಸ್ವಾಮಿ ಕೊಲೆ ಕೇಸ್: ಬಂಧಿತ ಪವಿತ್ರಾಗೌಡ ಜಾಮೀನು ಅರ್ಜಿ‌ ವಜಾ!

ಬೆಂಗಳೂರು, ಸೆಪ್ಟೆಂಬರ್ 2: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟಿ ಪವಿತ್ರಾಗೌಡ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ವಜಾ ಮಾಡಿದ ಕಾರಣ 7 ಮಂದಿ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತ್ತೀಚೆಗಷ್ಟೆ ಪ್ರಕರಣದ ನಂಬರ್ 1 ಆರೋಪಿ ಪವಿತ್ರಾಗೌಡ ಜಾಮೀನು ಕೋರಿ ಅರ್ಜಿ ಹಾಕಿದ್ದರು. ಆದರೆ ಪವಿತ್ರಾಗೌಡ ಜಾಮೀನು ಅರ್ಜಿ ವಜಾ ಆಗಿದೆ….

Read More

ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ಬಿಜೆಪಿ ಒತ್ತಾಯ

ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆದಿರುವ ವ್ಯವಸ್ಥಿತ ಷಡ್ಯಂತ್ರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ(ಎನ್‌ಐಎ) ವಹಿಸಬೇಕೆಂದು ಒತ್ತಾಯಿಸಿ ಬಿಜೆಪಿ ವತಿಯಿದ ಬೃಹತ್‌ ಧರ್ಮಸ್ಥಳ ಚಲೋ ಅಭಿಯಾನವನ್ನು ನಡೆಸಲಾಯಿತು. ಎಸ್‌‍ಐಟಿ ಬದಲಿಗೆ ರಾಜ್ಯ ಸರ್ಕಾರ ತಕ್ಷಣವೇ ಪ್ರಕರಣವನ್ನು ಎನ್‌ಐಎಗೆ ವಹಿಸಿ ಈ ಷಡ್ಯಂತ್ರ ಮಾಡಿರುವ ದುಷ್ಟಶಕ್ತಿಗಳನ್ನು ಕಾನೂನು ಪ್ರಕಾರ ಶಿಕ್ಷೆಗೊಳಪಡಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುತ್ತೇವೆ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.ಮಂಜುನಾಥಸ್ವಾಮಿ ಸನ್ನಿಧಿಗೆ ಹೊಂದಿಕೊಂಡಿರುವ ಮೈದಾನದಲ್ಲಿ ನಡೆದ ಧರ್ಮಸ್ಥಳ ಅಭಿಯಾನಕ್ಕೆ ನಿರೀಕ್ಷೆಗೂ ಮೀರಿದ ಸ್ಪಂದನೆ ಹಿಂದೂ ಕಾರ್ಯಕರ್ತರಿಂದ…

Read More

ರಷ್ಯಾ, ಚೀನಾ ಅಧ್ಯಕ್ಷರಿಗೆ ಮೋದಿ ಹಸ್ತಲಾಘವ, ಅಪ್ಪುಗೆ, ತಮಾಷೆ

ಬೀಜಿಂಗ್, ಸೆಪ್ಟೆಂಬರ್ 1: ಚೀನಾದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯು ಜಗತ್ತಿನ 3 ಪ್ರಮುಖ ಯುರೇಷಿಯನ್ ಶಕ್ತಿಗಳಾದ ಭಾರತ, ರಷ್ಯಾ ಮತ್ತು ಚೀನಾ ತಮ್ಮ ಏಕತೆ ಮತ್ತು ಶಕ್ತಿಯನ್ನು ಪ್ರದರ್ಶಿಸಲು ಮತ್ತು ಅಮೆರಿಕದಲ್ಲಿನ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಬಲವಾದ ಸಂದೇಶವನ್ನು ಕಳುಹಿಸಲು ವೇದಿಕೆಯಾಗಿದೆ. ಇಂದು ಒಗ್ಗಟ್ಟಾಗಿ ಕಾಣಿಸಿಕೊಂಡ ರಷ್ಯಾ ಅಧ್ಯಕ್ಷ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್​​ಪಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರಸ್ಪರ ಅಪ್ಪಿಕೊಂಡು, ಹಸ್ತಲಾಘವ ನೀಡಿ, ನಗುತ್ತಾ ತಮಾಷೆ ಮಾಡುತ್ತಾ ಬಹಳ…

Read More

ಎಸ್ಐಟಿ ಡ್ರಿಲ್: ಬುರುಡೆ ಕೊಟ್ಟಿದ್ದೇ ಜಯಂತ್ ಎಂದ ಚಿನ್ನಯ್ಯ!

ಬೆಂಗಳೂರು, ಸೆಪ್ಟೆಂಬರ್ 1: ಧರ್ಮಸ್ಥಳ ಪ್ರಕರಣದಲ್ಲಿ ‘ಬುರುಡೆ ಗ್ಯಾಂಗ್‌’ನ ಬುರುಡೆಯಾಟ ಬಗೆದಷ್ಟು ಬಯಲಾಗುತ್ತಿದೆ. ಬೆಂಗಳೂರಿನ ಬಾಗಲುಗುಂಟೆ ಜಯಂತ್‌ ಮನೆ ಮತ್ತು ವಿದ್ಯಾರಣ್ಯಪುರ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಮಹಜರು ನಡೆಸಿದ ಬಳಿಕ ಸ್ಫೋಟಕ ಸಂಗತಿಗಳು ಹೊರಬಿದ್ದಿವೆ. ಬುರುಡೆ ಸಿಕ್ಕಿದ್ದು, ಬುರುಡೆ ರಿಹರ್ಸಲ್ ನಡೆದಿದ್ದ ಬಗ್ಗೆ ರೋಚಕ ಸಂಗತಿಗಳು ಎಸ್ಐಟಿ ತನಿಖೆಯಿಂದ ಬಹಿರಂಗೊಂಡಿದೆ. ಬುರುಡೆ ಪ್ಲ್ಯಾನ್‌ಗೂ ಮುನ್ನ ವಿಡಿಯೋ ರೆಕಾರ್ಡ್!ನೂರಾರು ಶವ ಹೂತಿದ್ದೇನೆ. ಹೂತಿರುವ ಜಾಗ ತೋರಿಸುತ್ತೇನೆ ಎಂದು ಕೈಯಲ್ಲೊಂದು ಬುರುಡೆ ಹಿಡಿದುಕೊಂಡು ಬಂದಿದ್ದ ಚಿನ್ನಯ್ಯ, ಬುರುಡೆ ಬಿಟ್ಟಿದ್ದ. ಆದರೆ ಈಗ…

Read More

ಬೆಂಗಳೂರಿನ ಈ ಅಪಾರ್ಟ್ಮೆಂಟ್ ನಲ್ಲಿ ರೆಡಿಯಾಗಿತ್ತು ಧರ್ಮಸ್ಥಳ ವಿರುದ್ಧದ ಷಡ್ಯಂತ್ರ!

ಬೆಂಗಳೂರು, ಆ.31: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಾಲ್ಕೈದು ತಿಂಗಳ ಹಿಂದೆಯೇ ಬೆಂಗಳೂರಿನ ಎಸ್‌‍ಪಿ ಮ್ಯಾನ್ಷನ್‌ ಸರ್ವೀಸ್‌‍ ಅಪಾರ್ಟ್‌ಮೆಂಟ್‌ನಲ್ಲಿ ಷಡ್ಯಂತ್ರ ಸಿದ್ಧಗೊಂಡಿತ್ತು ಎಂಬ ರಹಸ್ಯ ಇದೀಗ ಬಯಲಾಗಿದೆ. ಧರ್ಮಸ್ಥಳ ವಿರುದ್ಧದ ಷಡ್ಯಂತ್ರದ ಹಿಂದೆ ದೆಹಲಿಯ ಖ್ಯಾತ ವ್ಯಕ್ತಿಯೊಬ್ಬರು ಬೆಂಬಲವಾಗಿದ್ದರು ಎಂಬ ಮಹತ್ವದ ಮಾಹಿತಿಯ ಬೆನ್ನು ಹತ್ತಿ ಎಸ್‌‍ಐಟಿ ತನಿಖೆ ಮುಂದುವರೆಸಿದೆ. ಬೆಂಗಳೂರಿನ ವಿದ್ಯಾರಣ್ಯಪುರಂನ ತಿಂಡ್ಲು ಸರ್ಕಲ್‌ನಲ್ಲಿರುವ ಲಾಡ್ಜ್ ವೊಂದರಲ್ಲಿ ಹಲವು ಬಾರಿ ಸಭೆ ಸೇರಿ ಸೂತ್ರದಾರಿಗಳು ಹಾಗೂ ಪಾತ್ರಧಾರಿಗಳು ಚರ್ಚೆ ನಡೆಸಿರುವ ಮಾಹಿತಿ ಕೂಡ ತಿಳಿದುಬಂದಿದೆ. ಗಿರೀಶ್‌ ಮಟ್ಟಣ್ಣನವರ್‌,…

Read More

ಎಸ್ಐಟಿ ಮುಂದೆ ನನಗೆ ತಿಳಿದಿರುವುದೆನ್ನೆಲ್ಲಾ ಹೇಳಿದ್ದೇನೆ, ಇನ್ಮೇಲೆ ಈ ಕೂಪದಲ್ಲಿ ಇರಲ್ಲ: ವೃದ್ಧೆ ಸುಜಾತಾ

ಎಸ್‌‍ಐಟಿಯ ಮುಂದೆ ನನಗೆ ತಿಳಿದಿರುವ ಎಲ್ಲಾ ಅಂಶಗಳನ್ನು ಹೇಳಿ ಬಂದಿದ್ದೇನೆ. ಇನ್ನು ಮುಂದೆ ನಾನು ಈ ಕೂಪದಲ್ಲಿ ಇರುವುದಿಲ್ಲ ಎಂದು ವೃದ್ಧೆ ಸುಜಾತಾಭಟ್‌ ಹೇಳಿದ್ದಾರೆ. ಇಂದು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಾರ್ಯಾರು ಏನೇನು ಮಾಡಿದ್ದಾರೋ ಅದಕ್ಕೆ ತಕ್ಕಂತೆ ಅವರು ಅನುಭವಿಸುತ್ತಾರೆ. ನಾನು ಏಕಾಂಗಿಯಾಗಿಯೇ ಎಸ್‌‍ಐಟಿ ತನಿಖೆಯನ್ನು ಎದುರಿಸಿ ಬಂದಿದ್ದೇನೆ. ಇನ್ನು ನನಗೆ ಯಾರ ಸಹವಾಸವೂ ಬೇಡ. ಯಾವ ಕೂಪಗಳಲ್ಲೂ ನಾನು ಇರುವುದಿಲ್ಲ ಎಂದು ಹೇಳಿದ್ದಾರೆ. ಕೊಲೆಯಾಗಿದ್ದಾರೆ ಎಂದು ಹೇಳಲಾಗುವ ವಾಸಂತಿ ಇನ್ನು ಬದುಕಿದ್ದಾರೆ ಎಂದು ನನ್ನ…

Read More

ಡಿಕೆಶಿ ಒಂದು ಕಾಲು ಬಿಜೆಪಿಯಲ್ಲಿಟ್ಟಿದ್ದಾರೆ: ಯತ್ನಾಳ್ ಬಾಂಬ್

ಬೆಂಗಳೂರು, ಆ.31: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಈಗಾಗಲೇ ತಮ್ಮ‌ ಒಂದು ಕಾಲನ್ನು ಬಿಜೆಪಿಯಲ್ಲಿ ಇಟ್ಟಿದ್ದಾರೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. “ಡಿ.ಕೆ ಶಿವಕುಮಾರ್ ಈಗಾಗಲೇ ದೆಹಲಿಯಲ್ಲಿ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. ಆದರೆ ಅವರಿಗೆ ಶಾಸಕರ ಬೆಂಬಲ ಕಡಿಮೆ ಇದೆ ಎಂಬ ಕಾರಣಕ್ಕೆ ಅದು ಮುಂದುವರಿಯಲಿಲ್ಲ ಎಂದು ಯತ್ನಾಳ್ ಬಾಂಬ್ ಸಿಡಿಸಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಿಷ್ಟು…‘‘ಡಿ.ಕೆ ಶಿವಕುಮಾರ್ ಈಗಾಗಲೇ ಬಿಜೆಪಿಯಲ್ಲಿ ಒಂದು…

Read More

ಅಡುಗೆ ರಾಣಿ ಟೊಮ್ಯಾಟೊ ಬೆಲೆ ದಿಢೀರ್ ಕುಸಿತ: ರೈತರಿಗೆ ಸಂಕಷ್ಟ

ಕೋಲಾರ, ಆ.31: ಒಂದೆಡೆ ಮಾರುಕಟ್ಟೆಯಲ್ಲಿ ಕೆಂಪು ಸುಂದರಿ ಟೊಮೆಟೋ ರಾಶಿರಾಶಿ ಬಿದ್ದಿದ್ದರೆ, ಮತ್ತೊಂದೆಡೆ ಅತಿ ಕಡಿಮೆ ಬೆಲೆಗೆ (15 ಕೆಜಿ 150 ರಿಂದ 200 ರೂ.) ಹರಾಜಾಗುತ್ತಿದೆ. ಇನ್ನೊಂದೆಡೆ, ಮಳೆಯಿಂದ ಹಾಳಾಗಿರುವ ಟೊಮೆಟೋ. ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲೀಗ ಈ ದೃಶ್ಯ ಸಾಮಾನ್ಯವಾಗಿದೆ. ಏಷ್ಯಾದಲ್ಲೇ 2ನೇ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಹತ್ತು ಹದಿನೈದು ದಿನಗಳ ಹಿಂದೆ ಬಾಕ್ಸ್ ಟೊಮೆಟೋ ದರ ತಲಾ 15 ಕೆಜಿಗೆ 700ರಿಂದ 800…

Read More

ಬಾನು ಮುಷ್ತಾಕ್ ರಿಂದ ಮೈಸೂರು ದಸರಾ ಉದ್ಘಾಟನೆ: ತೀವ್ರಗೊಂಡ ಆಕ್ರೋಶ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಿದ್ದತೆಗಳು ಒಂದೆಡೆ ಭರದಿಂದ ಸಾಗಿದ್ದರೆ ಮತ್ತೊಂದೆಡೆ ದಸರಾ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಬಾನು ಮುಷ್ತಾಕ್‌ ಅವರಿಗೆ ಆಹ್ವಾನ ನೀಡಲಾಗಿದೆ. ಇದು ಬಹುಸಂಖ್ಯಾತರ ಅಸಮಾಧಾನಕ್ಕೆ ಎಡೆಮಾಡಿ ಕೊಟ್ಟಿರುವುದಲ್ಲದೆ ಕೆಲವರ ವಿರೋಧಕ್ಕೂ ಆಸ್ಪದ ನೀಡಿದೆ. ಮುಖ್ಯಮಂತ್ರಿಯವರು ದಸರಾ ಉದ್ಘಾಟನಾಕಾರರ ಹೆಸರು ಪ್ರಕಟಿಸಿದ ಬೆನ್ನಲ್ಲೇ ಅಸಮಾಧಾನದ ಹೊಗೆಯಾಡತೊಡಗಿದ್ದು, ಇನ್ನೂ ನಿಂತಿಲ್ಲ. ಹಿಂದೂ ಧರ್ಮದ ಪಂಚಾಂಗದ ಪ್ರಕಾರ ದಸರಾ ಉದ್ಘಾಟನೆಗೆ ಮುಹೂರ್ತ, ಸಮಯ, ಘಳಿಗೆ ನಿಗದಿ ಮಾಡಲಾಗುತ್ತದೆ. ಹಿಂದೂ ಪಂಚಾಂಗದಂತೆ ಮುಹೂರ್ತ:ಈ ಬಾರಿ ಸೆ.22ರಿಂದ…

Read More
error: Content is protected !!