ಕೆ.ಎನ್ ರಾಜಣ್ಣ ತಲೆದಂಡ ಬೆನ್ನಲ್ಲೇ ಸಿದ್ದರಾಮಯ್ಯ ಬೆಂಬಲಿಗ ಸಚಿವರು-ಶಾಸಕರು ಥಂಡಾ!
ಬೆಂಗಳೂರು, ಆಗಸ್ಟ್ 12: ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವ ಮೂಲಕ ಡಿ.ಕೆ.ಶಿವಕುಮಾರ್ ಅವರ ಕೈಮೇಲಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಪುನರ್‌ಸ್ಥಾಪನೆಯ ಪ್ರಯತ್ನಗಳಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಸಚಿವರು ಮತ್ತು ಶಾಸಕರು ಥಂಡಾ ಒಡೆದಂತಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಎರಡು ಭಾರಿ ಮುಖ್ಯಮಂತ್ರಿಯಾಗಿ ದೇವರಾಜ್ ಅರಸು ಸೇರಿದಂತೆ ಎಲ್ಲಾ ನಾಯಕರ ದಾಖಲೆ ಮುರಿದಿದ್ದ ಸಿದ್ದರಾಮಯ್ಯ ಅದ್ವೀತಿಯ ನಾಯಕರಾಗಿ ಹೊರಹೊಮ್ಮಿದ್ದರು. ರಾಜಕೀಯದಲ್ಲಿ ಮೊದಲಿನಿಂದಲೂ ಸಿದ್ದರಾಮಯ್ಯ ಅವರು ತಮ ಬೆಂಬಲಿಗರ ಹಿತರಕ್ಷಣೆ ಮಾಡುವಲ್ಲಿ ಎತ್ತಿದ ಕೈ. ಯಾವುದೇ…

