ಧರ್ಮಸ್ಥಳ ಬಳಿ ಶವಗಳನ್ನು ಹೂತಿಟ್ಟ ಕೇಸ್: ನಾಳೆ 13ನೇ ಸ್ಥಳದ ಜಿಪಿಆರ್ ವರದಿ ಎಸ್ಐಟಿಗೆ ಸಲ್ಲಿಕೆ
ಬೆಳ್ತಂಗಡಿ/ಬೆಂಗಳೂರು, ಆಗಸ್ಟ್ 13: ರಾಜ್ಯದ ಸುಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳ ಸ್ನಾನಘಟ್ಟದ ಬಳಿ ಅನಾಮಿಕ ವ್ಯಕ್ತಿ ಗುರುತಿಸಿರುವ 13 ನೇ ಸ್ಥಳದಲ್ಲಿ ಜಿಪಿಆರ್ ಬಳಸಿ ನಡೆಸುತ್ತಿದ್ದ ಶೋಧ ಕಾರ್ಯ ಮುಗಿದಿದ್ದು ಅದರ ವರದಿಯನ್ನು ತಂಡ ಇಂದು ಅಥವಾ ನಾಳೆ ಗುರುವಾರ ಎಸ್‌ಐಟಿಗೆ ನೀಡಲಿದೆ. ಈ ತಂಡ ನೀಡುವ ವರದಿ ಆಧಾರದ ಮೇಲೆ ಎಸ್‌ಐಟಿ ಉತ್ಖನನವನ್ನು ಆರಂಭಿಸಲಿದೆ. ಸೋಮವಾರ ದೆಹಲಿಯಿಂದ ಮಂಗಳೂರಿಗೆ ಬಂದ ಜಿಪಿಆರ್ ತಂಡ ಅಂದು ಪ್ರಾಯೋಗಿಕವಾಗಿ 13ನೇ ಸ್ಥಳದಲ್ಲಿ ಪರಿಶೀಲಿಸಿತು. ಬಳಿಕ ಆ ಸ್ಥಳದಲ್ಲಿದ್ದ ಗಿಡಗಂಟೆಗಳನ್ನು ತೆರವುಗೊಳಿಸಿ…

