ಧರ್ಮಸ್ಥಳ ಬಳಿ ಶವಗಳನ್ನು ಹೂತಿಟ್ಟ ಕೇಸ್: ಅತ್ಯಾಚಾರ ಮಾಡಲಾಗಿದೆಯೇ? ಎಂದು ನಿಖರವಾಗಿ ಹೇಳುವುದು ಅಸಾಧ್ಯ ಎಂದ ಎಸ್ಐಟಿ
ಮಂಗಳೂರು, ಆಗಸ್ಟ್ 1: ಅನಾಮಿಕ ದೂರುದಾರನ ಆಗ್ರಹದ ಮೇರೆಗೆ ಉತ್ಖನನ ಕೆಲಸ ಜಾರಿಯಲ್ಲಿದೆ ಮತ್ತು ಇವತ್ತು 7ನೇ ಸ್ಥಳದಲ್ಲಿ ಅಸ್ಥಿಪಂಜರಗಳನ್ನು ಪತ್ತೆ ಮಾಡುವ ಕೆಲಸವನ್ನು ಪೌರಕಾರ್ಮಿಕರು ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ನೇತ್ರಾವತಿ ನದಿ ಹರಿಯುತ್ತಿರುವ ತೀರದ ಮತ್ತೊಂದು ಭಾಗದಲ್ಲಿ ಭೂಮಿ ತೋಡುವ ಕೆಲಸ ನಡೆಯುತ್ತಿದೆ ಮತ್ತು ನದಿ ತೀರದ ಈ ಭಾಗದಲ್ಲಿ ನಿಂತಿದ್ದಾರೆ. ಇದುವರೆಗೆ ಎರಡೂವರೆ ಅಡಿ ತೋಡಿದರೂ ಮಾನವ ದೇಹದ ಮೂಳೆಗಳಾಗಲೀ, ಅಸ್ಥಿಪಂಜರವಾಗಲೀ ಸಿಕ್ಕಿಲ್ಲ. ನಿನ್ನೆ ಮೂಳೆಗಳು ಸಿಕ್ಕಿದ್ದು ಮೂರೂವರೆ ಅಡಿ ಅಗೆತದ ನಂತರ, ಹಾಗಾಗಿ…

