Headlines

ರಾಷ್ಟ್ರಪತಿ ರವರಿಂದ ಆರನೇ ʻರಾಷ್ಟ್ರೀಯ ಜಲ ಪ್ರಶಸ್ತಿʼ ಮತ್ತು ʻಜಲ ಸಂಚಾಯ್-ಜನ ಭಾಗೀದಾರಿ ಪ್ರಶಸ್ತಿʼಪ್ರದಾನ – ಸಮರ್ಥ ನೀರಿನ ಬಳಕೆಗೆ ಜನಸಹಭಾಗಿತ್ವದ ಕರೆ

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ನವೆಂಬರ್ 18, 2025) ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಆರನೇ ‘ರಾಷ್ಟ್ರೀಯ ಜಲ ಪ್ರಶಸ್ತಿ’ಗಳು ಮತ್ತು ‘ಜಲ ಸಂಚಾಯ್-ಜನ ಭಾಗೀದಾರಿ ಪ್ರಶಸ್ತಿ’ಗಳನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ಅವರು, ಮಾನವ ನಾಗರಿಕತೆಯ ಕಥೆಯು ನದಿ ಕಣಿವೆಗಳಲ್ಲಿ, ಸಮುದ್ರ ತೀರಗಳಲ್ಲಿ ಮತ್ತು ವಿವಿಧ ಜಲಮೂಲಗಳ ಸುತ್ತಲೂ ನೆಲೆಸಿದ ಗುಂಪುಗಳ ಕಥೆಯೇ ಆಗಿದೆ ಎಂದು ಹೇಳಿದರು. ನಮ್ಮ ಸಂಪ್ರದಾಯದಲ್ಲಿ, ನದಿಗಳು, ಸರೋವರಗಳು ಮತ್ತು ಇತರ ನೀರಿನ ಮೂಲಗಳನ್ನು ಪೂಜಿಸಲಾಗುತ್ತದೆ….

Read More

ದೆಹಲಿಯ ಕೆಂಪು ಕೋಟೆ ಸ್ಫೋಟ: ಶೂನಲ್ಲಿ ಸ್ಫೋಟಕ ಸಿಕ್ಕಿಸಿಕೊಂಡ ಉಗ್ರನ ಭಯಾನಕ ಪ್ಲಾನ್ ಬಹಿರಂಗ

ನವದೆಹಲಿ, ನ.18.ರಾಜಧಾನಿ ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟಕ್ಕೆ ಆತ್ಮಾಹುತಿ ದಾಳಿಕೋರ ಡಾ.ಉಮರ್ ಮೊಹಮ್ಮದ್ ತಾನು ಧರಿಸಿದ್ದ ಶೂನಲ್ಲಿ ಸ್ಫೋಟಕ ಸಿಕ್ಕಿಸಿಕೊಂಡಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಫಾರೆನ್ಸಿಕ್ ತಜ್ಞರು ತನಿಖೆಯ ವೇಳೆ, ಮೆಟಲ್ ಟ್ರಿಗ್ಗರ್ ಒಂದನ್ನು ಶೂನಲ್ಲಿ ಜೋಡಿಸಿದ್ದನ್ನು ಸ್ಫೋಟದ ಸ್ಥಳದಿಂದ ಪತ್ತೆ ಮಾಡಿದ್ದು, ಇದರೊಂದಿಗೆ ಆತ್ಮಾಹುತಿ ದಾಳಿ ಎನ್ನುವುದಕ್ಕೆ ಮಹತ್ವದ ಸಾಕ್ಷ್ಯ ಕಲೆಹಾಕಿದ್ದಾರೆ. ಟಿಎಟಿಪಿ (triacetone triperoxide) ಎನ್ನುವ ರೀತಿಯ ಸ್ಫೋಟಕ ಬಳಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಇದೇ ಮಾದರಿಯನ್ನು ಜಗತ್ತಿನ ಹಲವೆಡೆ ನಡೆದಿರುವ…

Read More

“ಸಂಸತ್ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ 201ನೇ ವಿಜಯೋತ್ಸವ ಆಚರಣೆ — ಕನ್ನಡ ಸಂಸ್ಕೃತಿಗೆ ಪ್ರಧಾನಿಮೋದಿ ಸರ್ಕಾರದ ಗೌರವ”

ಇಂದು ನವದೆಹಲಿಯ ಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿ ತುಮಕೂರು ಲೋಕಸಭಾ ಸದಸ್ಯರು ಹಾಗೂ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ. ಸೋಮಣ್ಣನವರ ನೇತೃತ್ವದಲ್ಲಿ ಕನ್ನಡನಾಡಿನ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ 201ನೇ ವಿಜಯೋತ್ಸವ ಹಾಗೂ ಜನ್ಮದಿನೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, ರಾಣಿ ಚೆನ್ನಮ್ಮನವರ ಪುತ್ಥಳಿಯನ್ನು ಸಂಸತ್ತಿನ ಆವರಣದಲ್ಲಿ 2007ರಲ್ಲಿ ಸ್ಥಾಪಿಸಲಾಗಿದೆ. ಕಳೆದ ವರ್ಷ ಪ್ರಧಾನಮಂತ್ರಿ ಮಾನ್ಯ ಶ್ರೀ ನರೇಂದ್ರ ಮೋದಿಯವರ ಬೆಂಬಲ ಮತ್ತು ಲೋಕಸಭಾ ಅಧ್ಯಕ್ಷ…

Read More

ಕರೂರು ಕಾಲ್ತುಳಿತ ಕೇಸ್: ವಿಜಯ್ ವಿರುದ್ಧ ಕಿಡಿ ಕಾರಿ ಎಸ್ಐಟಿ ತನಿಖೆಗೆ ಆದೇಶಿಸಿದ ಹೈಕೋರ್ಟ್

ಚೆನೈ, ಅಕ್ಟೋಬರ್ 3: ತಮಿಳುನಾಡಿನ ಕರೂರಿನಲ್ಲಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ನಾಯಕರ ವಿರುದ್ಧ ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾಲ್ತುಳಿತದಿಂದ ಜನರು ಸಾವನ್ನಪ್ಪಿದರೂ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಆ ಘಟನಾ ಸ್ಥಳದಿಂದ ಪಲಾಯನ ಮಾಡಿದ್ದಾರೆ. ಆ ಘಟನೆಯ ಬಗ್ಗೆ ಟಿವಿಕೆ ಪಕ್ಷವು ಸ್ವಲ್ಪವೂ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಈ ದುರ್ಘಟನೆಯ ತನಿಖೆಗಾಗಿ ಹಿರಿಯ ಐಪಿಎಸ್ ಅಧಿಕಾರಿ ಆಸ್ರಾ ಗರ್ಗ್ ನೇತೃತ್ವದ…

Read More

ಮತದಾರರ ಪಟ್ಟಿ ಎಸ್‍ಐಆರ್: ಸೆ.30ರೊಳಗೆ ಪೂರ್ವ ಸಿದ್ಧತೆ ಪೂರ್ಣಗೊಳಿಸಲು ಸೂಚನೆ

ದೆಹಲಿ, ಸೆ.22 : ದೇಶಾದ್ಯಂತ ಮತಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿಗೊಳಿಸಲು ಕೇಂದ್ರ ಚುನಾವಣಾ ಆಯೋಗ ಸಿದ್ಧತೆ ಆರಂಭಿಸಿದೆ. ಇದರ ಅಂಗವಾಗಿ ರಾಜ್ಯಗಳ ಚುನಾವಣಾ ಅಧಿಕಾರಿಗಳಿಗೆ ಸೆಪ್ಟೆಂಬರ್ 30ರೊಳಗೆ ಎಲ್ಲಾ ಪೂರ್ವ ಸಿದ್ಧತೆಗಳನ್ನು ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಈಗಾಗಲೇ ಸೆಪ್ಟೆಂಬರ್ ಮೊದಲ ವಾರದಲ್ಲಿ ಆಯೋಗದ ಉನ್ನತ ಅಧಿಕಾರಿಗಳು ವಿವಿಧ ರಾಜ್ಯಗಳ ಚುನಾವಣಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಿದ್ದರು. ಅಲ್ಲಿ, ಮುಂದಿನ 10ರಿಂದ 15 ದಿನಗಳಲ್ಲಿ ಎಸ್‌ಐಆರ್‌ಗೆ ಸಿದ್ಧರಾಗಬೇಕೆಂದು ಮುಖ್ಯ ಚುನಾವಣಾ ಆಯುಕ್ತರು…

Read More

ಭಾರತೀಯ ನಾಗರಿಕರಾಗುವ ಮೊದಲೇ ಸೋನಿಯಾ ಗಾಂಧಿ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆ: ದೆಹಲಿ ಕೋರ್ಟ್ ನಲ್ಲಿ ಅರ್ಜಿ

ನವದೆಹಲಿ, ಸೆಪ್ಟೆಂಬರ್ 4: ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾರತೀಯ ನಾಗರಿಕರಾಗುವ 3 ವರ್ಷಗಳ ಮೊದಲೇ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿದೆ ಎಂದು ಆರೋಪಿಸಿ ದೆಹಲಿ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಗಿದೆ. ರೂಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ACJM) ವೈಭವ್ ಚೌರಾಸಿಯಾ ಅವರು ಇಂದು ಸ್ವಲ್ಪ ಸಮಯದವರೆಗೆ ಪ್ರಕರಣದ ವಿಚಾರಣೆ ನಡೆಸಿ, ಸೆಪ್ಟೆಂಬರ್ 10ರಂದು ಈ ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ. ವಿಕಾಸ್ ತ್ರಿಪಾಠಿ…

Read More

ಪ್ರಧಾನಿ, ಮುಖ್ಯಮಂತ್ರಿ ಪದಚ್ಯುತಗೊಳಿಸುವ ವಿವಾದಾತ್ಮಕ ಮಸೂದೆ ಲೋಕಸಭೆಯಲ್ಲಿ ಮಂಡನೆ

ನವದೆಹಲಿ, ಆ.20: ಆರೋಪ ಸಾಬೀತಾಗದೇ ಇದ್ದರೂ ವಿಚಾರಣೆ ಹಂತದಲ್ಲಿ 30 ದಿನಕ್ಕಿಂತ ಹೆಚ್ಚು ಅವಧಿ ಜೈಲಿನಲ್ಲಿದ್ದರೆ ಪ್ರಧಾನಿ ಹಾಗೂ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬಹುದು ಎಂಬ ವಿವಾದಾತ್ಮಕ ಮಸೂದೆಯನ್ನು ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಸಚಿವ ಅಮಿತ್ ಶಾ ಬುಧವಾರ ಮೂರು ತಿದ್ದುಪಡಿ ಮಸೂದೆಗಳನ್ನು ಮಂಡಿಸಿದ್ದು, ಇದರಲ್ಲಿ ಪ್ರಮುಖವಾದ ಆರೋಪ ಸಾಬೀತಾಗದೇ ಇದ್ದರೂ 30 ದಿನ ಜೈಲಲ್ಲಿ ಇದ್ದ ಯಾವುದೇ ವ್ಯಕ್ತಿಯನ್ನು ಪ್ರಧಾನಿ, ಮುಖ್ಯಮಂತ್ರಿ ಅಥವಾ ಸಚಿವ ಸ್ಥಾನದಿಂದ ಪದಚ್ಯುತಗೊಳಿಸಬಹುದು ಎಂಬ ಮಸೂದೆ ಪ್ರಮುಖವಾಗಿತ್ತು. ಕ್ರಿಮಿನಲ್…

Read More

ಚರ್ಚ್,ಮಸೀದಿ ತಂಟೆಗೆ ಹೋಗದ ಸರ್ಕಾರ ದೇವಾಲಯ ವಿಚಾರಕ್ಕೂ ಬರಬಾರದು: ರಾಮಭದ್ರಾಚಾರ್ಯ

ಮಥುರಾ, ಆಗಸ್ಟ್ 20: ಖ್ಯಾತ ರಾಮಕಥಾ ನಿರೂಪಕ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಜಗದ್ಗುರು ರಾಮಭದ್ರಾಚಾರ್ಯ ಅವರು ವೃಂದಾವನದ ಠಾಕೂರ್‌ ಬಂಕೆ ಬಿಹಾರಿ ದೇವಾಲಯದ ನಿಯಂತ್ರಣವನ್ನು ತೆಗೆದುಕೊಳ್ಳುವ ಉತ್ತರಪ್ರದೇಶ ಸರ್ಕಾರದ ಕ್ರಮವನ್ನು ಪ್ರಶ್ನಿಸಿ, ಮಸೀದಿಗಳು ಮತ್ತು ಚರ್ಚ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ದರೆ ದೇವಾಲಯಗಳನ್ನು ಅಂತಹ ಕ್ರಮಗಳಿಂದ ರಕ್ಷಿಸಬೇಕು ಎಂದು ಕೇಳಿಕೊಂಡಿದ್ದಾರೆ. ದೇವಾಲಯಕ್ಕಾಗಿ ಟ್ರಸ್ಟ್‌ ಸ್ಥಾಪಿಸುವ ಮತ್ತು ಬಂಕೆ ಬಿಹಾರಿ ಕಾರಿಡಾರ್‌ ಅನ್ನು ಅಭಿವೃದ್ಧಿಪಡಿಸುವ ರಾಜ್ಯ ಸರ್ಕಾರದ ಯೋಜನೆಗೆ ಅವರು ತೀವ್ರ ಅಸಮ್ಮತಿ ವ್ಯಕ್ತಪಡಿಸಿದರು. ದೇವಾಲಯಕ್ಕಾಗಿ ಟ್ರಸ್ಟ್‌…

Read More

ಉಪರಾಷ್ಟ್ರಪತಿ ಚುನಾವಣೆ: ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುದರ್ಶನ್ ರೆಡ್ಡಿ ಆಯ್ಕೆ

ನವದೆಹಲಿ, ಆಗಸ್ಟ್ 19: ಮುಂದಿನ ಸೆಪ್ಟೆಂಬರ್ 19 ರಂದು ನಡೆಯುವ ಉಪರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ನೇತೃತ್ವದ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಸುದರ್ಶನ್‌ ರೆಡ್ಡಿ ಅವರು ಅಭ್ಯರ್ಥಿಯಾಗಿದ್ದಾರೆ. ಇದರಿಂದಾಗಿ ದೇಶದ 2ನೇ ಅತ್ಯುನ್ನತ ಹುದ್ದೆಯಾದ ಉಪರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲು ವೇದಿಕೆ ಬಹುತೇಕ ಸಿದ್ಧಗೊಂಡಂತಾಗಿದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಇಂಡಿಯಾ ಮೈತ್ರಿಕೂಟಗಳ ಸಭೆಯಲ್ಲಿ ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶರಾಗಿರುವ ಸುದರ್ಶನ್‌ ರೆಡ್ಡಿ ಅವರನ್ನು ಕಣಕ್ಕಿಳಿಸಲು ಸಭೆ ಒಮತದ ತೀರ್ಮಾನವನ್ನು ಕೈಗೊಂಡಿತು. ಇನ್ನೊಂದು ವಿಶೇಷವೆಂದರೆ…

Read More

ಉಪರಾಷ್ಟ್ರಪತಿ ಚುನಾವಣೆಗೆ ಸಿ.ಪಿ.ರಾಧಾಕೃಷ್ಣನ್ ಎನ್.ಡಿ.ಎ ಅಭ್ಯರ್ಥಿ

ನವದೆಹಲಿ, ಆಗಸ್ಟ್ 17: ಮುಂಬರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸಿ.ಪಿ ರಾಧಾಕೃಷ್ಣನ್​​ ಅವರನ್ನು ಎನ್​ಡಿಎ ಅಭ್ಯರ್ಥಿಯಾಗಿ ಬಿಜೆಪಿ ಅಧಿಕೃತವಾಗಿ ಘೋಷಿಸಿದೆ. ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಂಬರುವ ಉಪರಾಷ್ಟ್ರಪತಿ ಚುನಾವಣೆಗೆ ಎನ್​ಡಿಎ ಮೈತ್ರಿಕೂಟವು ತನ್ನ ಅಭ್ಯರ್ಥಿಯನ್ನಾಗಿ ಪ್ರಸ್ತುತ ಮಹಾರಾಷ್ಟ್ರದ ರಾಜ್ಯಪಾಲರಾಗಿರುವ ಸಿ.ಪಿ.ರಾಧಾಕೃಷ್ಣನ್ ಅವರನ್ನು ಆಯ್ಕೆ ಮಾಡಿದೆ ಎಂದು ಹೇಳಿದರು.ಭಾನುವಾರ (ಆ.17) ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ರಾಧಾಕೃಷ್ಣನ್​ ಅವರ ಹೆಸರನ್ನು ಅಂತಿಮಗೊಳಿಸಲಾಯಿತು. ಈ ಹಿಂದೆ ಉಪರಾಷ್ಟ್ರಪತಿಯಾಗಿದ್ದ ಜಗದೀಪ್​…

Read More
error: Content is protected !!