ಆಗಸ್ಟ್ 1 ರಿಂದ UPI ಬಳಕೆಗೆ ಹೊಸ ನಿಯಮ ಜಾರಿ
ಭಾರತ ದೇಶಾದ್ಯಂತ ಯುಪಿಐ ಪೇಮೆಂಟ್‌ನಲ್ಲಿ ಆಗಸ್ಟ್ 1ರಿಂದ ಕೆಲ ಪ್ರಮುಖ ಬದಲಾವಣೆಯಾಗಲಿದೆ. ಯುನಿಫೈಡ್ ಪೇಮೆಂತ್ಸ್ ಇಂಟರ್ಫೇಸ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳ ಜಾರಿಗೆ ತರಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮುಂದಾಗಿದೆ. ಈ ಹೊಸ ಮಾರ್ಗಸೂಚಿಗಳು ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂನಂತಹ ಡಿಜಿಟಲ್ ಪಾವತಿ ಆಪ್‌ಗಳಿಗೆ ಅನ್ವಯವಾಗಲಿವೆ. ಈ ಬದಲಾವಣೆಗಳು ಬಳಕೆದಾರರ ದೈನಂದಿನ ವಹಿವಾಟುಗಳ ಮೇಲೆ ಅಂತಹ ಬದಲಾವಣೆಗಳನ್ನೇನೂ ತರುವುದಿಲ್ಲವಾದರೂ, ಬ್ಯಾಲೆನ್ಸ್ ಚೆಕ್ ಮತ್ತು ಆಟೋ ಡೆಬಿಟ್‌ಗಳಂತಹ ಕೆಲವು ಕಾರ್ಯಗಳಿಗೆ ಮಿತಿಗಳನ್ನು ಹೇರಲಿದೆ. ಹೊಸ…

