SIT ಅಧಿಕಾರಿಗಳಿಗೆ 30 ಲಕ್ಷ ರೂಪಾಯಿ ಉಡುಗೊರೆ: ಸರ್ಕಾರಕ್ಕೆ ‘ಕುಮಾರ’ಬಾಣ!
ಹಾಸನ: ‘ಅಂದು ವೀರಪ್ಪನ್ ಹಿಡಿಯಲು ಹೋದ ಪೊಲೀಸರಿಗೆ ದೇವೇಗೌಡರು ಉಡುಗೊರೆ ನೀಡಿದ್ದು ಇತಿಹಾಸ. ಆದರೆ ಇಂದು ಸ್ವಂತ ಕುಟುಂಬದವರನ್ನೇ ಗುರಿಯಾಗಿಸಿಕೊಂಡ ಅಧಿಕಾರಿಗಳಿಗೆ ಲಕ್ಷ ಲಕ್ಷ ಸುರಿಯುತ್ತಿರುವುದು ಯಾವ ನ್ಯಾಯ?’ ಹೀಗೆಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಹಾಸನದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ತನಿಖೆ ನಡೆಸಿ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದ SIT (ವಿಶೇಷ ತನಿಖಾ ತಂಡ) ಅಧಿಕಾರಿಗಳಿಗೆ ರಾಜ್ಯ ಸರ್ಕಾರ 30 ಲಕ್ಷ ರೂ. ಬಹುಮಾನ ಘೋಷಿಸಿರುವುದನ್ನು ಕುಮಾರಸ್ವಾಮಿ ಅವರು…

