ಸುರ್ಜೇವಾಲ ತಮ್ಮ ಪಕ್ಷದ ಶಾಸಕರನ್ನು ಬಂದೋಬಸ್ತ್ ಮಾಡಿಕೊಳ್ಳಲು ಪ್ರತ್ಯೇಕ ಸಮಾಲೋಚನೆ
ಬೆಂಗಳೂರು,ಜು.14- ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಇಂದು ಬೆಂಗಳೂರಿಗೆ ಆಗಮಿಸಿ ಶಾಸಕರು ಹಾಗೂ ಸಚಿವರ ಜೊತೆ ಮೂರನೇ ಸುತ್ತಿನ ಸಮಾಲೋಚನಾ ಸಭೆಯನ್ನು ಮುಂದುವರೆಸಿದ್ದಾರೆ.ಈಗಾಗಲೇ ಎರಡು ಹಂತದಲ್ಲಿ ಶಾಸಕರ ಜೊತೆ ಪ್ರತ್ಯೇಕ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಿಸಿರುವ ಸುರ್ಜೇವಾಲ, ಮೂರನೇ ಹಂತದಲ್ಲಿ ಹದಿನೈದಕ್ಕೂ ಹೆಚ್ಚು ಮಂದಿ ಶಾಸಕರು ಹಾಗೂ ಮೊದಲ ದಿನ 10ಕ್ಕೂ ಹೆಚ್ಚು ಮಂದಿ ಸಚಿವರ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆ. ಈ ಮೊದಲು ಶಾಸಕರ ಜೊತೆಗಿನ ಸಮಾಲೋಚನೆ ವೇಳೆ ಬಹಳಷ್ಟು ಮಂದಿ ತಮ್ಮ…

