ರಾಜ್ಯದಲ್ಲಿ ಸದ್ಯಕ್ಕಿಲ್ಲ ನಾಯಕತ್ವ ಬದಲಾವಣೆ: ಹೈಕಮಾಂಡ್ ‘ತಟಸ್ಥ’ ನೀತಿಯಿಂದ ಡಿಕೆಶಿ ಬಣಕ್ಕೆ ಹಿನ್ನಡೆ?
ಬೆಂಗಳೂರು, ಡಿ.25 : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಿಯೇ ಆಗುತ್ತೆ ಎಂದು ಡಿಕೆಶಿ ಪರ ಶಾಸಕರು ವಿಶ್ವಾಸದಲ್ಲಿದ್ದರೂ, ಹೈಕಮಾಂಡ್ ನಾಯಕರು ಸಿಎಂ ಬದಲಾಯಿಸಿ ಕೈಸುಟ್ಟುಕೊಳ್ಳುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದಂತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ, ಡಿಕೆಶಿ ಎಷ್ಟೇ ಪ್ರಯತ್ನಿಸಿದರೂ ರಾಹುಲ್ ಗಾಂಧಿ ಭೇಟಿಗೆ ಸಿಗಲಿಲ್ಲ. ಇದಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ಗೊಂದಲ ನಾವು ಸೃಷ್ಟಿಸಿದ್ದಲ್ಲ, ನೀವೇ ಸರಿ ಮಾಡಿಕೊಳ್ಳಿ ಎಂದು ಹೇಳಿ ಅಂತರ ಕಾಯ್ದುಕೊಂಡಿದ್ದಾರೆ. ಹೀಗಾಗಿ ನಾಯಕತ್ವ ಬದಲಾವಣೆಗೆ ಎಷ್ಟೇ ಒತ್ತಡ ಹಾಕಿದರೂ, ಸ್ಪಷ್ಟ ತೀರ್ಮಾನ…

