ರೌಡಿಸಂಗೆ ಬ್ರೇಕ್ ಹಾಕಲು ಖಾಕಿ ಸಜ್ಜು:ಎಸ್‌ಪಿ ಮುತ್ತುರಾಜು ಆದೇಶದ ಬೆನ್ನಲ್ಲೇ ‘ರೌಡಿ ನಿಗ್ರಹ ದಳ’ ರಚನೆ!
ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದ ರೌಡಿಗಳ ಹೆಡೆಮುರಿ ಕಟ್ಟಲು ಚಾಮರಾಜನಗರ ಜಿಲ್ಲೆಯ 4 ವೃತ್ತ ಹಾಗೂ 7 ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಿಶೇಷ “ರೌಡಿ ನಿಗ್ರಹ ದಳ” ಅನ್ನು ರಚಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶ್ರೀ ಮುತ್ತುರಾಜು ಎಂ., ಐಪಿಎಸ್ ಅವರ ಆದೇಶದ ಮೇರೆಗೆ ಈ ಕಡಕ್ ಕ್ರಮ ಕೈಗೊಳ್ಳಲಾಗಿದ್ದು, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಮತ್ತು ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ರಾಜ್ಯಾದ್ಯಂತ…

