Headlines

ಸಹಕಾರ ಸಚಿವ ಕೆ.ಎನ್ ರಾಜಣ್ಣ ದಿಢೀರ್ ರಾಜೀನಾಮೆ!!!

ಬೆಂಗಳೂರು, ಆಗಸ್ಟ್ 11: ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರು ದಿಢೀರನೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕೆ.ಎನ್​ ರಾಜಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಕೆ.ಎನ್. ರಾಜಣ್ಣ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಗೀಕರಿಸಿದ್ದಾರೆ. ರಾಜೀನಾಮೆ ಬಗ್ಗೆ ಸಚಿವ ಕೆ.ಎನ್​ ರಾಜಣ್ಣ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಬಳಿಕ ಸ್ಪಷ್ಟನೆ ನೀಡುತ್ತೇನೆ. ಯಾವ ವಿಚಾರಕ್ಕೆ ಹೈಕಮಾಂಡ್​…

Read More

ಮತ ಕಳುವು ಆರೋಪ: ಪ್ರತಿಭಟನೆ ನಡೆಸಿದ ಇಂಡಿಯಾ ಮೈತ್ರಿಕೂಟದ ಸಂಸದರು ಅರೆಸ್ಟ್

ನವದೆಹಲಿ, ಆಗಸ್ಟ್11: ಮತಕಳುವಿನ ಆರೋಪ ಮಾಡಿರುವ ಪ್ರತಿಪಕ್ಷಗಳ ಒಕ್ಕೂಟದ ಸಂಸದರು ಲೋಕಸಭೆಯ ವಿ.ಪಕ್ಷ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ಸಂಸತ್​ ಭವನದಿಂದ ಚುನಾವಣಾ ಆಯೋಗದ ಮುಖ್ಯ ಕಚೇರಿವರೆಗೆ ನಡೆಸುತ್ತಿರುವ ಪ್ರತಿಭಟನಾ ಮೆರವಣಿಗೆಯನ್ನು ದೆಹಲಿ ಪೊಲೀಸರು ತಡೆದಿದ್ದಾರೆ. ಬಿಹಾರದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಹಾಗೂ ಮತ ಕಳುವಿನ ಆರೋಪದ ಹಿನ್ನೆಲೆ ಈ ಪ್ರತಿಭಟನೆ ನಡೆದಿದೆ. ಸಂಸತ್​ ಭವನದಿಂದ ಇಂದು ಸೋಮವಾರ ಬೆಳಗ್ಗೆ 11.30ಕ್ಕೆ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಇಲ್ಲಿಂದ ಒಂದು ಕಿ.ಮೀ…

Read More

ವಿಷ್ಣುವರ್ಧನ್ ವಿರೋಧಿಗಳಿಗೆ ಬಸವಣ್ಣನವರ ವಚನದ ಮೂಲಕ‌ ಉಪೇಂದ್ರ ತಿರುಗೇಟು

ಬೆಂಗಳೂರು, ಆಗಸ್ಟ್ 11: ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನ ನೆಲಸಮ ಮಾಡಿದ ಹಿನ್ನೆಲೆ ರಾಜ್ಯಾದ್ಯಂತ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಕನ್ನಡ ಚಿತ್ರರಂಗದ ನಟ, ನಟಿಯರು, ನಿರ್ದೇಶಕ ಹಾಗೂ ನಿರ್ಮಾಪಕರುಗಳು ಈ ಘಟನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ರಿಯಲ್ ಸ್ಟಾರ್ ಉಪೇಂದ್ರ ಕೂಡ ತೀವ್ರವಾಗಿ ಖಂಡಿಸಿದ್ದಾರೆ. ನಟ ಹಾಗೂ ನಿರ್ದೇಶಕರಾಗಿರುವ ಉಪೇಂದ್ರ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ವಿಷ್ಣುವರ್ಧನ್ ಅವರ ಮೇಲಿನ ಅಪಾರ ಪ್ರೀತಿಯನ್ನ ವ್ಯಕ್ತಪಡಿಸಿದ್ದಾರೆ. ಬಸವಣ್ಣನವರ ವಚನದ ಸಾಲು ಹಾಕುವ ಮೂಲಕ ಈ ಕೃತ್ಯವೆಸಗಿದವರಿಗೆ ತಿರುಗೇಟು…

Read More

ಮೆಟ್ರೋ ರೈಲಿನಲ್ಲಿ ಒಟ್ಟಿಗೆ ಸಂಚರಿಸಿದ ಪ್ರಧಾನಿ-ಸಿಎಂ ಸಚಿವರು

ಬೆಂಗಳೂರು, ಆಗಸ್ಟ್ 10: ನಗರದ ಆರ್‌.ವಿ.ರಸ್ತೆ-ಬೊಮಸಂದ್ರ ದವರೆಗೆ ಸಂಪರ್ಕ ಕಲ್ಪಿಸುವ ಹಳದಿ ಮಾರ್ಗದ ಮೆಟ್ರೋ ರೈಲಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಪ್ರಯಾಣಿಸುವ ಮೂಲಕ ನಮ ಮೆಟ್ರೋದ ಅನುಭವ ಪಡೆದುಕೊಂಡರು. ರಾಗಿಗುಡ್ಡದಿಂದ ಕೋನಪ್ಪನ ಅಗ್ರಹಾರದವರೆಗೆ ಕ್ಯೂಆರ್‌ ಕೋಡ್‌ ಮೂಲಕ ತಮ ಸ್ವಂತ ಹಣದಲ್ಲೇ ಟಿಕೆಟ್‌ ಖರೀದಿಸಿ ಮೆಟ್ರೋ ರೈಲಿನಲ್ಲಿ ಸಾಮಾನ್ಯರಂತೆ ನಿಂತುಕೊಂಡೇ ಪ್ರಯಾಣಿಸಿದ ಅವರು, ಪ್ರಯಾಣಿಕರಿಂದ ಕೆಲವು ಮಾಹಿತಿಯನ್ನು ಪಡೆದುಕೊಂಡರು. ಮೆಟ್ರೋ ಕಾರ್ಮಿಕರು, ಸಾರ್ವಜನಿಕರು, ಸರ್ಕಾರಿ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಕೆಲವು ಆಯ್ದ…

Read More

ಮತಗಳ್ಳತನ ಆರೋಪ: ರಾಹುಲ್ ಗಾಂಧಿಗೆ ರಾಜ್ಯ ಚುನಾವಣಾ ಆಯೋಗ ನೋಟಿಸ್

ಬೆಂಗಳೂರು, ಆಗಸ್ಟ್ 10: ಕಳೆದ ಲೋಕಸಭಾ ಚುನಾವಣೆ ವೇಳೆ ನಗರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಮತಗಳ ಕಳ್ಳತನವಾಗಿದೆ ಎಂದು ನೀವು ಮಾಡಿರುವ ಆರೋಪಗಳಿಗೆ ದಾಖಲೆಗಳನ್ನು ನೀಡಿ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಅವರಿಗೆ ರಾಜ್ಯ ಚುನಾವಣಾ ಆಯೋಗ ನೋಟಿಸ್​ ನೀಡಿದೆ. ಮತಗಳ್ಳತನ ವಿಚಾರವಾಗಿ ರಾಹುಲ್​ ಗಾಂಧಿಯವರು ಆಗಸ್ಟ್​ 7ರಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಹೀಗಾಗಿ, ರಾಜ್ಯ ಚುನಾವಣಾ ಆಯೋಗ ಈ ದಾಖಲೆಗಳನ್ನು ನೀಡುವಂತೆ ಸೂಚನೆ ನೀಡಿದೆ….

Read More

ಬೆಂಗಳೂರು ಹಳದಿ ಮೆಟ್ರೋ ರೈಲಿನ‌ ವಿಶೇಷತೆಗಳು

ಬೆಂಗಳೂರು ಮಹಾನಗರದ ಜನರ ಜೀವನಾಡಿಯಾಗಿರುವ ನಮ್ಮ ಮೆಟ್ರೋ ಮತ್ತಷ್ಟು ವಿಸ್ತರಣೆಯಾಗಿದೆ. ಹಳದಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಇಂದು ಭಾನುವಾರ ಹಸಿರು ನಿಶಾನೆ ತೋರಿಸಿದರು. ಈ ಮೂಲಕ ಎಲೆಕ್ಟ್ರಾನಿಕ್ ಸಿಟಿ ಜನರ ಬಹುದಿನಗಳ ಕನಸು ನನಸಾಗಿದೆ. ಪ್ರಧಾನಿ ಮೋದಿ ಉದ್ಘಾಟಿಸಿರುವ ಹಳದಿ ಮಾರ್ಗದ ವಿಶೇಷತೆಗಳು ಇಲ್ಲಿದೆ. ಐಟಿ ಹಬ್​ ಎಲೆಕ್ಟ್ರಾನಿಕ್​ ಸಿಟಿ ಸಂಪರ್ಕಿಸುವ ಚಾಲಕ ರಹಿತ ರೈಲು ಈ ಮಾರ್ಗದಲ್ಲಿ ಸಂಚರಿಸಲಿದೆ. ಸುಮಾರು 7,616 ಕೋಟಿ ರೂಪಾಯಿ ವೆಚ್ಚದಲ್ಲಿ ಹಳದಿ ಮಾರ್ಗವನ್ನು ನಿರ್ಮಿಸಲಾಗಿದೆ….

Read More

ಧರ್ಮಸ್ಥಳದಲ್ಲಿ ಗಲಭೆ ಕೇಸ್: 6 ಮಂದಿ ಅರೆಸ್ಟ್

ಬೆಳ್ತಂಗಡಿ, ಆ.10: ಧರ್ಮಸ್ಥಳ ಗ್ರಾಮದ ಪಾಂಗಳ ಕ್ರಾಸ್‌‍ ನಲ್ಲಿ‌ ಕಳೆದ ಆಗಸ್ಟ್ 6 ರಂದು ಸಂಜೆ ಯೂಟ್ಯೂಬರ್‌ ಗಳ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸರು ನಿನ್ನೆ ಧರ್ಮಸ್ಥಳ ನಿವಾಸಿಗಳಾದ ಪದಪ್ರಸಾದ್‌, ಸುಹಾಸ್‌‍, ಗುರುಪ್ರಸಾದ್‌‍, ಶಶಿಕುಮಾರ್‌, ಕಲಂದರ್‌ ಮತ್ತು ಚೇತನ್‌ ಅವರುಗಳನ್ನು ಬಂಧಿಸಿ, ಬೆಳ್ತಂಗಡಿ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಿದರು. ನ್ಯಾಯಾಧೀಶರು 6 ಮಂದಿಗೂ ಮಧ್ಯಂತರ ಜಾಮೀನು ಮಂಜೂರು ಮಾಡಿ, ಎಲ್ಲರೂ ನಾಳೆ(ಆಗಸ್ಟ್ 11)…

Read More

ಬೆಂಗಳೂರಿನಲ್ಲಿ ವಂದೇ ಭಾರತ್ ರೈಲಿಗೆ ಪ್ರಧಾನಿ ಚಾಲನೆ

ಬೆಂಗಳೂರು, ಆಗಸ್ಟ್ 10: ಪ್ರಧಾನಿ ಮೋದಿ ಅವರು ಬೆಂಗಳೂರು ಟು ಬೆಳಗಾವಿ ವಂದೇ ಭಾರತ್ ನೂತನ ರೈಲಿಗೆ ಚಾಲನೆ ನೀಡಿದ್ದಾರೆ. ಮೇಖ್ರಿ ಸರ್ಕಲ್, ಚಾಲುಕ್ಯ ಸರ್ಕಲ್ ಮೂಲಕ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ತಲುಪಿದ ನರೇಂದ್ರ ಮೋದಿ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ಕೊಟ್ಟಿದ್ದಾರೆ. ಮೇಖ್ರಿ ಸರ್ಕಲ್ ಬಳಿಯ ಹೆಲಿಪ್ಯಾಡ್‌ನಿಂದ ರಸ್ತೆ ಮೂಲಕ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣಕ್ಕೆ ಮೋದಿ ಪ್ರಯಾಣ ಬೆಳೆಸಿದ್ದರು. ಇನ್ನೂ, ಪ್ರಧಾನಿಯನ್ನು ನೋಡಲು ಜನರು ಕಿಕ್ಕಿರಿದು ತುಂಬಿದ್ದರು….

Read More

ಪ್ರಧಾನಿ ಮೋದಿಯವರ ನಾಳಿನ‌ ಬೆಂಗಳೂರು ಕಾರ್ಯಕ್ರಮಗಳ ವೇಳಾಪಟ್ಟಿ..

ಬೆಂಗಳೂರು, ಆಗಸ್ಟ್ 9: ಮೆಟ್ರೋದ ಹಳದಿ ಮಾರ್ಗ​ ಮತ್ತು ಬೆಂಗಳೂರು ಮತ್ತು ಬೆಳಗಾವಿ ನಡುವಿನ ವಂದೇ ಭಾರತ್​ ರೈಲಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಆಗಸ್ಟ್ 10) ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಕುರಿತು ವೇಳಾಪಟ್ಟಿ ಹಂಚಿಕೊಂಡಿರುವ ಸಿಎಂ ಕಚೇರಿ, ಮೋದಿ 4 ಗಂಟೆಗಳ ಕಾಲ ಇರಲಿದ್ದು, ಈ ವೇಳೆ ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಹೆಚ್​ಎಎಲ್​ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ, ಕೆಎಸ್​ಆರ್​ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಆಗಮಿಲಿದ್ದು, ಅಲ್ಲಿ ಬೆಂಗಳೂರು-…

Read More

ವಿಷ್ಣುವರ್ಧನ್ ಸಮಾಧಿ ನೆಲಸಮ: ‘ಎಲ್ಲದಕ್ಕೂ ಅವನೇ ಕಾರಣ’ ಎಂದ ಗೀತಾ ಬಾಲಕೃಷ್ಣ

ಬಾಲಣ್ಣ ಅವರಿಗೆ ಸೇರಿದ್ದ ಅಭಿಮಾನ್ ಸ್ಟುಡಿಯೋನಲ್ಲಿದ್ದ ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ನೆಲಸಮ ಮಾಡಲಾಗಿದೆ. ಇದು ಸಹಜವಾಗಿಯೇ ವಿಷ್ಣುವರ್ಧನ್ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಹಲವು ವರ್ಷಗಳಿಂದಲೂ ಅಭಿಮಾನ್ ಸ್ಟುಡಿಯೋನಲ್ಲಿ ವಿಷ್ಣುವರ್ಧನ್ ಸಮಾಧಿಯನ್ನು ಉಳಿಸಿಕೊಂಡು ಅಲ್ಲೊಂದು ಸ್ಮಾರಕ ನಿರ್ಮಾಣ ಮಾಡಲು ಅಭಿಮಾನಿಗಳು ಹೋರಾಡುತ್ತಲೇ ಇದ್ದರು. ಆದರೆ ಈಗ ಅಭಿಮಾನ್ ಸ್ಟುಡಿಯೋನಲ್ಲಿ ಇದ್ದ ಒಂದು ಕುರುಹನ್ನು ಒಡೆದು ಹಾಕಲಾಗಿದೆ. ಇದೀಗ ಈ ಘಟನೆ ಕುರಿತು ಬಾಲಣ್ಣ ಅವರ ಕುಟುಂಬದ ಸದಸ್ಯರೊಬ್ಬರು ಮಾತನಾಡಿದ್ದು, ‘ಎಲ್ಲದಕ್ಕೂ ಅವನೇ ಕಾರಣ’ ಎಂದು ದೂಷಿಸಿದ್ದಾರೆ. ಬಾಲಕೃಷ್ಣ ಅವರ…

Read More
error: Content is protected !!