ಆಧಾರರಹಿತ, ದಾರಿ ತಪ್ಪಿಸುವ ಆರೋಪ: ರಾಹುಲ್ ಗಾಂಧಿಗೆ ಚು.ಆಯೋಗದ ಸಾಕ್ಷಿ ಸಮೇತ ಉತ್ತರ
ನವದೆಹಲಿ, ಜುಲೈ 25: ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸುವುದಕ್ಕೆ ಚುನಾವಣೆಯಲ್ಲಿ ನಡೆದ ವಂಚನೆಯೇ ಕಾರಣ ಎಂದಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ‘ಚುನಾವಣಾ ಆಯೋಗ ಕರ್ನಾಟಕದಲ್ಲಿ ಅಕ್ರಮ ಎಸಗಲು ಅವಕಾಶ ನೀಡಿರುವುದಕ್ಕೆ ನಮ್ಮ ಬಳಿ 100% ಸಾಕ್ಷಿ ಇದೆ, ಚುನಾವಣಾ ಆಯೋಗ ಅನಗತ್ಯವಾಗಿ ಮತದಾರರ ಹೆಸರು ಸೇರಿಸುವುದು, ತೆಗೆಯುವುದು ಮಾಡಿರುವುದನ್ನು ಪತ್ತೆ ಮಾಡಿದ್ದೇವೆ, ನೀವು, ನಿಮ್ಮ ಅಧಿಕಾರಿಗಳು ಇದರಿಂದ ಪಾರಾಗುತ್ತೇವೆ ಎಂದು ಭಾವಿಸಿದ್ದರೆ ಅದು ತಪ್ಪು. ನೀವು ಪಾರಾಗಲು ಸಾಧ್ಯವಿಲ್ಲ. ಏಕೆಂದರೆ, ನಾವು ನಿಮ್ಮ…

