ಮೆಟ್ರೋ ರೈಲಿನಲ್ಲಿ ಒಟ್ಟಿಗೆ ಸಂಚರಿಸಿದ ಪ್ರಧಾನಿ-ಸಿಎಂ ಸಚಿವರು
ಬೆಂಗಳೂರು, ಆಗಸ್ಟ್ 10: ನಗರದ ಆರ್.ವಿ.ರಸ್ತೆ-ಬೊಮಸಂದ್ರ ದವರೆಗೆ ಸಂಪರ್ಕ ಕಲ್ಪಿಸುವ ಹಳದಿ ಮಾರ್ಗದ ಮೆಟ್ರೋ ರೈಲಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಪ್ರಯಾಣಿಸುವ ಮೂಲಕ ನಮ ಮೆಟ್ರೋದ ಅನುಭವ ಪಡೆದುಕೊಂಡರು. ರಾಗಿಗುಡ್ಡದಿಂದ ಕೋನಪ್ಪನ ಅಗ್ರಹಾರದವರೆಗೆ ಕ್ಯೂಆರ್ ಕೋಡ್ ಮೂಲಕ ತಮ ಸ್ವಂತ ಹಣದಲ್ಲೇ ಟಿಕೆಟ್ ಖರೀದಿಸಿ ಮೆಟ್ರೋ ರೈಲಿನಲ್ಲಿ ಸಾಮಾನ್ಯರಂತೆ ನಿಂತುಕೊಂಡೇ ಪ್ರಯಾಣಿಸಿದ ಅವರು, ಪ್ರಯಾಣಿಕರಿಂದ ಕೆಲವು ಮಾಹಿತಿಯನ್ನು ಪಡೆದುಕೊಂಡರು. ಮೆಟ್ರೋ ಕಾರ್ಮಿಕರು, ಸಾರ್ವಜನಿಕರು, ಸರ್ಕಾರಿ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಕೆಲವು ಆಯ್ದ…

