ಲಾರಿ ಮುಷ್ಕರ ಹಿನ್ನೆಲೆ: ಅನ್ನಭಾಗ್ಯ ಆಹಾರಧಾನ್ಯ ಸಾಗಾಣಿಕೆ ಬಂದ್!
ಬೆಂಗಳೂರು, ಜುಲೈ 7: ಕಳೆದ 4 ತಿಂಗಳಿಂದ ರಾಜ್ಯಸರ್ಕಾರ ಪಡಿತರ ಆಹಾರಧಾನ್ಯ ಸಾಗಾಣಿಕೆ ವೆಚ್ಚ ನೀಡಿಲ್ಲ. 250 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಲಾರಿ ಮಾಲೀಕರು, ಚಾಲಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಆ ಮೂಲಕ ಈ ತಿಂಗಳ ಪಡಿತರ ವಿತರಣೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿರುವ ರಾಜ್ಯ ಲಾರಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ವಿ.ಆರ್.ಷಣ್ಮುಗಪ್ಪ, ಇಂದಿನಿಂದ ಅನ್ನಭಾಗ್ಯ ಆಹಾರ ಧಾನ್ಯ ಸಾಗಾಣಿಕೆ ಬಂದ್ ಎಂದು ಸರ್ಕಾರಕ್ಕೆ ಶಾಕ್ ನೀಡಿದ್ದಾರೆ. ಈ ಬಗ್ಗೆ…

