ಕಾಂಗ್ರೆಸ್ ಗೆ ಗೊಂದಲ ಸೃಷ್ಟಿಸಿರುವ ಕೆಎಂಎಫ್ ಅಧ್ಯಕ್ಷ ಚುನಾವಣೆ
ಬೆಂಗಳೂರು, ಜುಲೈ 27: ಕರ್ನಾಟಕ ಹಾಲು ಮಹಾ ಮಂಡಳಿ (ಕೆ.ಎಂ.ಎಫ್) ಅಧ್ಯಕ್ಷರಾಗಿದ್ದ ಭೀಮಾ ನಾಯ್ಕ್ ಅವರ ಅಧಿಕಾರದ ಅವಧಿ ಮುಗಿದ ಮೇಲೆ ಹೊಸ ಕೆಎಂಎಫ್ ಅಧ್ಯಕ್ಷರ ಆಯ್ಕೆಗಾಗಿ ಕಾಂಗ್ರೆಸ್ ಪಕ್ಷದಲ್ಲೇ ಭಾರಿ ಪೈಪೋಟಿ ನಡೆಯುತ್ತಿದೆ. ಈಗಾಗಲೇ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದ ಡಿ.ಕೆ ಸುರೇಶ್ ಅವರನ್ನು ನೇಮಿಸಬೇಕೆಂದು ಡಿಸಿಎಂ ತಥಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಲಾಬಿ ಎಐಸಿಸಿ ಮಟ್ಟದಲ್ಲಿ ನಡೆಸುತ್ತಿದ್ದಾರೆ.ಆದರೆ ಇದೀಗ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಹಾಲು ಒಕ್ಕೂಟದ (ರಾ.ಬ.ಕೊ.ವಿ) ಅಧ್ಯಕ್ಷರಾಗಿ…

