ವಿರೋಧ ಪಕ್ಷದವರು ದುಡ್ಡಿಲ್ಲ ಎನ್ನುತ್ತಾರೆ, ಕ್ಷೇತ್ರದ ಅಭಿವೃದ್ಧಿ ನಿಮ್ಮ ಕಣ್ಣ ಮುಂದೆ ಇದೆ : ಶಾಸಕ ಪಿ ರವಿಕುಮಾರ್
ಮಂಡ್ಯ ತಾಲೂಕಿನ ಆನಸಾಸಲು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆಗೆ ಶಾಸಕ ಪಿ ರವಿಕುಮಾರ್ ಗೌಡ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಪಕ್ಷಭೇದ ಮರೆತು ಗ್ರಾಮದವರು ಬಂದು ಅಭಿವೃದ್ಧಿಗೆ ಕೈಜೋಡಿಸುತ್ತಿರುವುದು ಮೆಚ್ಚುವಂತದ್ದು ಆನಸಾಸಲೂ ಗ್ರಾಮ ಮಾದರಿ ಗ್ರಾಮವಾಗಿದೆ ಎಂದರು. ಮಾರಮ್ಮ ದೇವಿ ದೇವಸ್ಥಾನ ಮತ್ತು ಲೈಬ್ರರಿ ಕಟ್ಟಡ ಸೇರಿದಂತೆ ವಿವಿಧ ರಸ್ತೆ ಕಾಮಗಾರಿಗೆ ಒಟ್ಟು 35 ಲಕ್ಷ ರೂ ವೆಚ್ಚದ ಕಾಮಗಾರಿಗೆ ಇಂದು ಚಾಲನೆ ನೀಡಿದ್ದೇನೆ. ಚಿಕ್ಕಬಳ್ಳಿ ಕೆರೆಯ ಅಭಿವೃದ್ಧಿಗೆ ಇನ್ನೂ ಎರಡು ತಿಂಗಳಲ್ಲಿ…

