Headlines

ದೂರುದಾರನೇ ಅಸಲಿ ಕಳ್ಳ: ತೆರಕಣಾಂಬಿ ಪೊಲೀಸರ ಚಾಣಾಕ್ಷ ತನಿಖೆ!

​ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ ಚಾಮರಾಜನಗರ: ತೆರಕಣಾಂಬಿ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡಗೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದಿದ್ದ ಬೃಹತ್ ಕಳವು ಪ್ರಕರಣವನ್ನು ಪೊಲೀಸರು ಕೇವಲ ಕೆಲವೇ ದಿನಗಳಲ್ಲಿ ಭೇದಿಸಿದ್ದಾರೆ. ವಿಶೇಷವೆಂದರೆ, ಪ್ರಕರಣದ ದೂರುದಾರನೇ ಅಸಲಿ ಕಳ್ಳ ಎಂಬ ಬೆಚ್ಚಿಬೀಳಿಸುವ ಸತ್ಯ ತನಿಖೆಯಿಂದ ಬಯಲಾಗಿದೆ. ​ಘಟನೆಯ ಹಿನ್ನೆಲೆ​ದಿನಾಂಕ 16/12/2025 ರಂದು ರಾತ್ರಿ ವೇಳೆ ಮೂಡಗೂರು ಸಹಕಾರ ಸಂಘದ ಕಚೇರಿಯ ಬೀಗ ಮುರಿದು ಸುಮಾರು ರೂ. 14,12,000/- ನಗದು ಹಣವನ್ನು ಕಳವು ಮಾಡಲಾಗಿತ್ತು….

Read More

ರಮೇಶ್ ಬಂಡಿಸಿದ್ದೇಗೌಡ್ರ ಅಧ್ಯಕ್ಷತೆಯಲ್ಲಿ ಭಾರಿ ಭ್ರಷ್ಟಾಚಾರವಂತೆ..!?

ಬೂದನೂರು ಪಂಚಾಯತ್ ‘ಪವರ್’ ಹಗರಣ: ಜನರ ತೆರಿಗೆ ಹಣದಲ್ಲಿ ಅಧಿಕಾರಿಗಳ ಅಕ್ರಮಕ್ಕೆ ದಂಡ! ಮಂಡ್ಯ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಸಾರ್ವಜನಿಕರ ಹಣ ‘ದೋಚಲು’ ಭ್ರಷ್ಟ ಅಧಿಕಾರಿಗಳು ಹೊಸ ದಾರಿ ಕಂಡುಕೊಂಡಿದ್ದಾರೆ!ಅಕ್ರಮವಾಗಿ ವಿದ್ಯುತ್ ಕಳ್ಳತನ ಮಾಡುವುದು, ಸಿಕ್ಕಿಬಿದ್ದಾಗ ಲಕ್ಷಾಂತರ ರೂಪಾಯಿ ದಂಡವನ್ನು ಜನರ ತೆರಿಗೆ ಹಣದಲ್ಲೇ ಕಟ್ಟುವುದು. ಇಷ್ಟೇ ಆಗಿದ್ದರೆ ಇದು ಕೇವಲ ಆರ್ಥಿಕ ಹಗರಣವಾಗುತ್ತಿತ್ತು. ಆದರೆ, ಈ ಅಕ್ರಮವನ್ನು ಪ್ರಶ್ನಿಸಿದ ಹೋರಾಟಗಾರರಿಗೆ ‘ಸುಳ್ಳು ದೂರು ದಾಖಲಿಸುವ ಬೆದರಿಕೆ’ ಹಾಕುವ ಮೂಲಕ ಬೂದನೂರು ಪಂಚಾಯತ್ ಆಡಳಿತ ಮಂಡಳಿ ಈಗ…

Read More

ಲೋಕಾಯುಕ್ತ ಬಲೆಗೆ ನಾಲ್ವರು ಸರ್ಕಾರಿ ಅಧಿಕಾರಿಗಳು: ₹18.20 ಕೋಟಿ ಅಕ್ರಮ ಆಸ್ತಿ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು, ಮಂಗಳವಾರ ಮುಂಜಾನೆ ಏಕಕಾಲಕ್ಕೆ ನಾಲ್ವರು ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅಂದಾಜು 18.20 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. ​ಮಂಡ್ಯ, ಧಾರವಾಡ, ಹೊಸಪೇಟೆ ಹಾಗೂ ಶಿವಮೊಗ್ಗದ ಲೋಕಾಯುಕ್ತ ಠಾಣೆಗಳಲ್ಲಿ ದಾಖಲಾಗಿದ್ದ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಒಟ್ಟು 21ಕ್ಕೂ ಹೆಚ್ಚು ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ​ದಾಳಿಗೆ…

Read More

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕರ್ಮಕಾಂಡ: ವಿಡಿಯೋ ವೈರಲ್ ಬೆನ್ನಲ್ಲೇ ರೇಡ್, ಮಾಹಿತಿ ಲೀಕ್ ಶಂಕೆ!

ಬೆಂಗಳೂರು, ನವೆಂಬರ್ 9: ನಟೋರಿಯಸ್ ಕ್ರಿಮಿನಲ್, ಸರಣಿ ಅತ್ಯಾಚಾರಿ ಉಮೇಶ್ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನ ತನ್ನ ಸೆಲ್ ನಲ್ಲೇ ಮೊಬೈಲ್ ಬಳಸುತ್ತಾ ಮತ್ತು ಟಿವಿ ನೋಡುತ್ತಿರುವ, ಲಷ್ಕರ್ ಉಗ್ರ ಮೊಬೈಲ್ ಬಳಸುತ್ತಿರುವ ವಿಡಿಯೋ ವೈರಲ್​ ಬೆನ್ನಲ್ಲೇ ಅಲರ್ಟ್​ ಆಗಿರುವ ಜೈಲಾಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್​ಗಳ ಮೇಲೆ ರೇಡ್​ ಮಾಡಿದ್ದಾರೆ. ಒಟ್ಟು 100 ಸಿಬ್ಬಂದಿ ಬ್ಯಾರಕ್​ಗಳ ಪರಿಶೀಲನೆ ಮಾಡಿದ್ದು,ತಲಾಶ್​ ವೇಳೆ ಯಾವುದೇ ವಸ್ತು ಪತ್ತೆಯಾಗಿಲ್ಲ ಎನ್ನಲಾಗಿದೆ. ಲೀಕ್​ ಆಗಿತ್ತಾ ರೇಡ್​ ಮಾಹಿತಿ?ಬ್ಯಾರಕ್​ಗಳಲ್ಲಿ ಸಿಬ್ಬಂದಿ ಪರಿಶೀಲನೆ ವೇಳೆ…

Read More

ನಕಲಿ ನಂದಿನಿ ತುಪ್ಪ ತಯಾರಿಕಾ ಜಾಲ ಭೇದಿಸಿದ ಸಿಸಿಬಿ ಪೊಲೀಸರು: ನಾಲ್ವರು ಅರೆಸ್ಟ್

ಬೆಂಗಳೂರು,ನ.15: ಕೆಎಂಎಫ್ ನ‌ ಜನಪ್ರಿಯ ಬ್ರಾಂಡ್ ನಂದಿನಿ ತುಪ್ಪವನ್ನು ನಕಲಿ ಮಾಡುತ್ತಿದ್ದ ಜಾಲವೊಂದನ್ನು ಬೇಧಿಸಿರುವ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಹೊರ ರಾಜ್ಯದಲ್ಲಿ ಕಲಬೆರೆಕೆ ತುಪ್ಪವನ್ನು ತಯಾರಿಸಿ ನಕಲಿ ನಂದಿನಿ ಬ್ರಾಂಡ್‌ನ ಸ್ಯಾಚೆಟ್‌ ಮತ್ತು ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ತುಂಬಿ ಬೆಂಗಳೂರು ನಗರದಾದ್ಯಂತ ಮಾರಾಟ ಮಾಡುತ್ತಿದ್ದರು.ಈ ಬೃಹತ್‌ ಜಾಲದ ಬೆನ್ನು ಹತ್ತಿತ ಪೊಲೀಸರು ನಾಲ್ವರನ್ನು ಬಂಧಿಸುವ ಜೊತೆಗೆ 1,26,95,200 ರೂ. ವೌಲ್ಯದ 8136 ಲೀಟರ್‌ ನಂದಿನಿ ಬ್ರಾಂಡ್‌ನ ಕಲಬೆರೆಕೆ ತುಪ್ಪ ಹಾಗೂ ಸರಬರಾಜು ಮಾಡುತ್ತಿದ್ದ 4 ವಾಹನಗಳನ್ನು ವಶ…

Read More

ದೆಹಲಿಯ ಕೆಂಪು ಕೋಟೆ ಸ್ಫೋಟ: ಶೂನಲ್ಲಿ ಸ್ಫೋಟಕ ಸಿಕ್ಕಿಸಿಕೊಂಡ ಉಗ್ರನ ಭಯಾನಕ ಪ್ಲಾನ್ ಬಹಿರಂಗ

ನವದೆಹಲಿ, ನ.18.ರಾಜಧಾನಿ ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟಕ್ಕೆ ಆತ್ಮಾಹುತಿ ದಾಳಿಕೋರ ಡಾ.ಉಮರ್ ಮೊಹಮ್ಮದ್ ತಾನು ಧರಿಸಿದ್ದ ಶೂನಲ್ಲಿ ಸ್ಫೋಟಕ ಸಿಕ್ಕಿಸಿಕೊಂಡಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಫಾರೆನ್ಸಿಕ್ ತಜ್ಞರು ತನಿಖೆಯ ವೇಳೆ, ಮೆಟಲ್ ಟ್ರಿಗ್ಗರ್ ಒಂದನ್ನು ಶೂನಲ್ಲಿ ಜೋಡಿಸಿದ್ದನ್ನು ಸ್ಫೋಟದ ಸ್ಥಳದಿಂದ ಪತ್ತೆ ಮಾಡಿದ್ದು, ಇದರೊಂದಿಗೆ ಆತ್ಮಾಹುತಿ ದಾಳಿ ಎನ್ನುವುದಕ್ಕೆ ಮಹತ್ವದ ಸಾಕ್ಷ್ಯ ಕಲೆಹಾಕಿದ್ದಾರೆ. ಟಿಎಟಿಪಿ (triacetone triperoxide) ಎನ್ನುವ ರೀತಿಯ ಸ್ಫೋಟಕ ಬಳಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಇದೇ ಮಾದರಿಯನ್ನು ಜಗತ್ತಿನ ಹಲವೆಡೆ ನಡೆದಿರುವ…

Read More

ಬೆಂಗಳೂರಿನಲ್ಲಿ ಹಾಡಹಗಲೇ ಎಟಿಎಂ ವಾಹನ ಹೈಜಾಕ್, 7.11 ಕೋಟಿ ರೂ. ದರೋಡೆ!

ಬೆಂಗಳೂರು, ನ.19 : ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ 7.11 ಕೋಟಿ ರೂಪಾಯಿ ದರೋಡೆಯಾಗಿರುವ ಘಟನೆ ನಡೆದಿದೆ. ಇಂದು (ನವೆಂಬರ್ 19) ಮಧ್ಯಾಹ್ನ ಇನ್ನೋವಾ ಕಾರಿನಲ್ಲಿ ಬಂದ ಗ್ಯಾಂಗ್, ಎಟಿಎಂಗೆ ಹಣ ಹಾಕಲು ಹೊರಟಿದ್ದ ವಾಹನ ತಡೆದು ಬರೋಬ್ಬರಿ 7.11 ಕೋಟಿ ರೂ ದೋಚಿಕೊಂಡು ಪರಾರಿಯಾಗಿದೆ. ಸೌತ್ ಎಂಡ್ ಸರ್ಕಲ್ ಬಳಿಯ ಎಟಿಎಂ ಕಡೆ ಹೊರಟಿದ್ದ ಹಣ ಇದ್ದ ವಾಹನವನ್ನು ಜಯದೇವ ಡೇರಿ ಸರ್ಕಲ್‌ ಬಳಿ ತಡೆದು ಹಣ ದೋಚಿಕೊಂಡು ಎಸ್ಕೇಪ್ ಆಗಿದೆ. ಸೌತ್ ಎಂಡ್ ಸರ್ಕಲ್ ಬಳಿಯ…

Read More

ಧರ್ಮಸ್ಥಳ ಕೇಸ್: ಅಸ್ಥಿಪಂಜರ ಜೊತೆಗೆ ಸಿಕ್ಕ ಐಡಿ ಕಾರ್ಡ್ ರಹಸ್ಯ ಬಹಿರಂಗ!

ಮಂಗಳೂರು, ಸೆ.18: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗ್ಲೆಗುಡ್ಡದಲ್ಲಿ ಸಿಕ್ಕ ಅಸ್ಥಿಪಂಜರ, ತಲೆ ಬುರುಡೆ ಹಾಗೂ ಮೂಳೆಗಳ ಯಾರದ್ದು ಎಂಬ ಪ್ರಶ್ನೆ ಮೂಡಿದೆ. ಹೀಗಿರುವಾಗಲೇ ಧರ್ಮಸ್ಥಳದ ಬಂಗ್ಲೆಗುಡ್ಡೆದಲ್ಲಿ ಶೋಧಕ್ಕೆ ರೋಚಕ ತಿರುವು ಸಿಕ್ಕಿದೆ. ಬುರುಡೆ ಮತ್ತು ಅಸ್ಥಿಪಂಜರದ ಬಳಿ ಒಂದು ಐಡಿ ಕಾರ್ಡ್​ ಸಿಕ್ಕಿದ್ದು, ಅದು ಯು.ಬಿ.ಅಯ್ಯಪ್ಪ ಎಂಬುವರ ಐಟಿ ಕಾರ್ಡ್ ಎನ್ನುವುದು ಸಹ ಪತ್ತೆಯಾಗಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದ ನಿವಾಸಿ ಅಯ್ಯಪ್ಪ ಎನ್ನುವರು 2017ರಲ್ಲಿ ಕಾಣೆಯಾಗಿದ್ದರು. ಇದೀಗ ಅವರ…

Read More

ಮಾಜಿ ಸಿಎಂ ಡಿ.ವಿ ಸದಾನಂದಗೌಡ ಬ್ಯಾಂಕ್‌ ಖಾತೆ ಹ್ಯಾಕ್‌: 3 ಲಕ್ಷ ರೂ ದೋಚಿದ ಸೈಬರ್‌ ಕಳ್ಳರು

ಬೆಂಗಳೂರು, ಸೆ.17 : ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಮೂರು ಬ್ಯಾಂಕ್ ಖಾತೆಗಳನ್ನು ಸೈಬರ್ ಅಪರಾಧಿಗಳು ಹ್ಯಾಕ್ ಮಾಡಿ ಸುಮಾರು 3 ಲಕ್ಷ ರೂ. ದೋಚಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನಾಚರಣೆಯ ಅಂಗವಾಗಿ ನಗರದಲ್ಲಿನ ಆರ್‌ಎಂವಿ ಎಕ್ಸ್‌ಟೆನ್ಷನ್ ಬಿಬಿಎಂಪಿ ಪಾರ್ಕ್‌ನಲ್ಲಿ ಬಿಜೆಪಿ ವತಿಯಿಂದ ನಡೆದ 75 ಪೌರ ಕಾರ್ಮಿಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಸದಾನಂದ ಗೌಡ, ತಮಗೆ ಸಂಭವಿಸಿದ ವಂಚನೆ ಕುರಿತು ವಿವರಿಸಿದರು. “ನಿನ್ನೆ ನನ್ನ ಮೂರು ಖಾತೆಗಳನ್ನು…

Read More

ಡ್ರಗ್ ಪೆಡ್ಲರ್ ಗಳಿಂದ ಕಮಿಷನ್ ಪಡೆದ ಆರೋಪ 11 ಪೊಲೀಸ್ ಸಿಬ್ಬಂದಿ ಅಮಾನತು!

ಬೆಂಗಳೂರು, ಸೆ.15 : ಡ್ರಗ್ ಪೆಡ್ಲರ್‌ಗಳಿಂದ ತಿಂಗಳ ಕಮೀಷನ್ ಪಡೆದ ಆರೋಪದ ಮೇಲೆ ಬೆಂಗಳೂರು ನಗರ ಪಶ್ಚಿಮ ವಿಭಾಗದ ಚಾಮರಾಜಪೇಟೆ ಮತ್ತು ಜೆಜೆ ನಗರ ಪೊಲೀಸ್ ಠಾಣೆಯ 11 ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಆಗಸ್ಟ್ 22ರಂದು ಆರ್.ಆರ್ ನಗರ ಪೊಲೀಸರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ ಬಳಿಕ ಈ ಆರೋಪಗಳು ಬೆಳಕಿಗೆ ಬಂದವು. ತನಿಖೆಯಲ್ಲಿ ಪೊಲೀಸರ ಮೊಬೈಲ್ ಹಾಗೂ ಡ್ರಗ್ ಪೆಡ್ಲರ್‌ಗಳ ನಡುವೆ ನೇರ ಸಂಪರ್ಕಗಳಿರುವುದು ಪತ್ತೆಯಾಗಿ, ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಕ್ರಮ ಕೈಗೊಂಡಿದ್ದಾರೆ….

Read More
error: Content is protected !!