ಧರ್ಮಸ್ಥಳ ಅನಾಮಿಕನ ಕೇಸ್: ಎಸ್ಐಟಿಯಿಂದ ಮಧ್ಯಂತರ ವರದಿ
ಧರ್ಮಸ್ಥಳದ ಸುತ್ತಮುತ್ತ ಶವಗಳನ್ನು ಹೂತಿಡಲಾಗಿದೆ ಎಂದು ಹೇಳಿದ್ದ ಅನಾಮಿಕನ ಪ್ರಕರಣದ ಕುರಿತು ವಿಧಾನಸಭೆಯಲ್ಲಿ ಉತ್ತರ ನೀಡಬೇಕಿರುವುದರಿಂದ ಮಧ್ಯಂತರ ವರದಿ ನೀಡಲು ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಅನಾಮಿಕ ವ್ಯಕ್ತಿಯ ಹೇಳಿಕೆ ಆಧರಿಸಿ ಎಸ್‌ಐಟಿ ತನಿಖೆ ನಡೆಸಲು ರಾಜ್ಯ ಸರ್ಕಾರ ಕಳೆದ ಜುಲೈ 20 ರಂದು ಹಿರಿಯ ಅಧಿಕಾರಿ ಪ್ರಣವ್‌ಮೊಹಾಂತಿ ನೇತೃತ್ವದಲ್ಲಿ ತಂಡ ರಚಿಸಿತ್ತು. ಅಂದಿನಿಂದಲೂ ಕಾರ್ಯಪ್ರವೃತ್ತರಾಗಿರುವ ಎಸ್‌ಐಟಿ ಅಧಿಕಾರಿಗಳು ನಾನಾ ರೀತಿಯ ತನಿಖೆಗಳನ್ನು ನಡೆಸುತ್ತಿದ್ದಾರೆ. ಸುಮಾರು 20 ದಿನಗಳಿಂದಲೂ ಒಟ್ಟು 17 ಸ್ಥಳಗಳಲ್ಲಿ ಅಗೆದು ಶವ…

