ಡ್ರಗ್ ಪೆಡ್ಲರ್ ಗಳಿಂದ ಕಮಿಷನ್ ಪಡೆದ ಆರೋಪ 11 ಪೊಲೀಸ್ ಸಿಬ್ಬಂದಿ ಅಮಾನತು!
ಬೆಂಗಳೂರು, ಸೆ.15 : ಡ್ರಗ್ ಪೆಡ್ಲರ್‌ಗಳಿಂದ ತಿಂಗಳ ಕಮೀಷನ್ ಪಡೆದ ಆರೋಪದ ಮೇಲೆ ಬೆಂಗಳೂರು ನಗರ ಪಶ್ಚಿಮ ವಿಭಾಗದ ಚಾಮರಾಜಪೇಟೆ ಮತ್ತು ಜೆಜೆ ನಗರ ಪೊಲೀಸ್ ಠಾಣೆಯ 11 ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಆಗಸ್ಟ್ 22ರಂದು ಆರ್.ಆರ್ ನಗರ ಪೊಲೀಸರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ ಬಳಿಕ ಈ ಆರೋಪಗಳು ಬೆಳಕಿಗೆ ಬಂದವು. ತನಿಖೆಯಲ್ಲಿ ಪೊಲೀಸರ ಮೊಬೈಲ್ ಹಾಗೂ ಡ್ರಗ್ ಪೆಡ್ಲರ್‌ಗಳ ನಡುವೆ ನೇರ ಸಂಪರ್ಕಗಳಿರುವುದು ಪತ್ತೆಯಾಗಿ, ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಕ್ರಮ ಕೈಗೊಂಡಿದ್ದಾರೆ….

