Headlines

ಅಕ್ರಮ ಬಾಂಗ್ಲಾದೇಶಿಗರಿಗೆ ಇಲ್ಲ ಪರ್ಯಾಯ ವಸತಿ: ಪತ್ತೆಯಾದಲ್ಲಿ ತಕ್ಷಣ ಗಡಿಪಾರು – ಗೃಹ ಸಚಿವ ಡಾ. ಜಿ. ಪರಮೇಶ್ವರ್ ಎಚ್ಚರಿಕೆ

ಬೆಂಗಳೂರು: ರಾಜಧಾನಿಯ ಯಲಹಂಕದ ಕೋಗಿಲು ಕ್ರಾಸ್ ಬಳಿ ನಡೆದ ತೆರವು ಕಾರ್ಯಾಚರಣೆಯ ಬೆನ್ನಲ್ಲೇ ತೀವ್ರಗೊಂಡಿರುವ ‘ಅಕ್ರಮ ವಲಸಿಗರ’ ವಿವಾದಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ. ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ಪ್ರಜೆಗಳಿಗೆ ಯಾವುದೇ ಕಾರಣಕ್ಕೂ ಸರ್ಕಾರದಿಂದ ಪರ್ಯಾಯ ವಸತಿ ಸೌಲಭ್ಯ ನೀಡುವುದಿಲ್ಲ ಮತ್ತು ಪತ್ತೆಯಾದ ತಕ್ಷಣವೇ ಅವರನ್ನು ಗಡಿಪಾರು ಮಾಡಲಾಗುವುದು ಎಂದು ಅವರು ಕಡಕ್ ಸಂದೇಶ ರವಾನಿಸಿದ್ದಾರೆ. ​ಪೊಲೀಸ್ ತಪಾಸಣೆ ಮತ್ತು ಬಿಗುವಿನ ಕ್ರಮ ​ಯಲಹಂಕದ ಫಕೀರ್ ಬಡಾವಣೆಯಲ್ಲಿ ತೆರವುಗೊಂಡ ನಿರಾಶ್ರಿತರ ಪಟ್ಟಿಯನ್ನು…

Read More

ಚಾಮರಾಜನಗರ ಜಿಲ್ಲಾಧಿಕಾರಿ ಮತ್ತು ಎಸ್ಪಿ ವರ್ಗಾವಣೆ: ನೂತನ ಡಿಸಿಯಾಗಿ ಶ್ರೀರೂಪಾ, ಎಸ್ಪಿಯಾಗಿ ಮುತ್ತುರಾಜು ನೇಮಕ

ವರದಿ: ರಾಮಸಮುದ್ರ ಎಸ್‌.ವೀರಭದ್ರಸ್ವಾಮಿ ಚಾಮರಾಜನಗರ: ಪೊಲೀಸ್ ವರೀಷ್ಟಾದಿಕಾರಿ ಕವಿತಾ ಹಾಗೂ ಜಿಲ್ಲಾದಿಕಾರಿ ಶಿಲ್ಪನಾಗ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಚಾಮರಾಜನಗರ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ನೂತನ ಜಿಲ್ಲಾಧಿಕಾರಿಯಾಗಿ ಶ್ರೀರೂಪಾ ಅವರನ್ನು ಸರಕಾರ ನೇಮಿಸಿ ಆದೇಶ ಹೊರಡಿಸಿದೆ. ಶ್ರೀರೂಪಾ ಅವರು ಪ್ರಸ್ತುತ ಪಶುಪಾಲನಾ ಲಾಖೆಯ ಆಯುಕ್ತರಾಗಿ ಕರ್ತವ್ಯ ನಿರ್ವಹಿಸು ತ್ತಿದ್ದರು. ಇವರು 2018ನೇ ಕರ್ನಾಟಕ ಬ್ಯಾಚ್‌ನ ಐ ಎ ಎಸ್ ಅಧಿಕಾರಿಯಾಗಿದ್ದಾರೆ. ಚಾಮರಾಜ ನಗರ ಜಿಲ್ಲಾಧಿಕಾರಿಯಾಗಿದ್ದ ಸಿ.ಟಿ. ಶಿಲ್ಪಾ ನಾಗ್ ಅವರನ್ನು ಬೆಂಗಳೂರಿನ ಪಶುಪಾಲನಾ…

Read More

ಸಕ್ಕರೆ ನಾಡಿನ ಪೊಲೀಸ್ ಗದ್ದುಗೆಗೆ ಶೋಭಾರಾಣಿ ಎಂಟ್ರಿ: ಮೈಸೂರಿಗೆ ಮಲ್ಲಿಕಾರ್ಜುನ ಬಾಲದಂಡಿ ಶಿಫ್ಟ್

ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಮೈಸೂರು ಜಿಲ್ಲೆಯ ಜವಾಬ್ದಾರಿ ನೀಡಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಮಂಡ್ಯದಲ್ಲಿ ‘ಜನಸ್ನೇಹಿ ಪೊಲೀಸ್’ ಪರಿಕಲ್ಪನೆಯನ್ನು ಜಾರಿಗೆ ತಂದು ಮೆಚ್ಚುಗೆ ಗಳಿಸಿದ್ದ ಬಾಲದಂಡಿ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ, ಸದ್ಯ ಬಳ್ಳಾರಿ ಎಸ್ಪಿಯಾಗಿರುವ ಶೋಭಾರಾಣಿ ವಿ.ಜೆ. ಅವರನ್ನು ನೇಮಕ ಮಾಡಲಾಗಿದೆ. ​ನೂತನ ಎಸ್ಪಿಯಾಗಿ ಬರಲಿರುವ ಶೋಭಾರಾಣಿ ಅವರು 2016ರ ಬ್ಯಾಚ್‌ನ ಅಧಿಕಾರಿಯಾಗಿದ್ದು, ಮಂಡ್ಯ ಜಿಲ್ಲೆಯ ಭೌಗೋಳಿಕ ಮತ್ತು ಅಪರಾಧ ಹಿನ್ನೆಲೆಯ…

Read More

ಮಂಡ್ಯದಲ್ಲಿ “ಸಿರಿಧಾನ್ಯ ರೋಡ್ ಶೋ”: ಮುಂದಿನ ಪೀಳಿಗೆಗೆ ಪೌಷ್ಟಿಕತೆಯ ಅರಿವು ಮೂಡಿಸಲು ಜಿ.ಪಂ. ಸಿಇಒ ಕರೆ

ಮಂಡ್ಯ.ಡಿ.31.:- ಸಿರಿಧಾನ್ಯಗಳ ಕುರಿತು ಮುಂದಿನ ಪೀಳಿಗೆಗೆ ತಿಳಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ ಅವರು ಹೇಳಿದರು. ಇಂದು ಕೃಷಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಆಹಾರ ಮತ್ತು ಪೌಷ್ಠಿಕ ಭದ್ರತೆ (ನ್ಯೂಟ್ರಿ ಸಿರಿಧಾನ್ಯ) ಯೋಜನೆಯಡಿ “ಸಿರಿಧಾನ್ಯ ರೋಡ್ ಶೋ” ಮೂಲಕ ಮುಂದಿನ ಪೀಳಿಗೆಗೆ ಸಿರಿಧಾನ್ಯ ಬೆಳೆಗಳ ಬಗ್ಗೆ ಅರಿವು ಮೂಡಿಸುವ ಸಂಬAಧ ಆಯೋಜಿಸಲಾಗಿದ್ದ “ಸಿರಿಧಾನ್ಯ ರೋಡ್ ಶೋ” ಕಾರ್ಯಕ್ರಮವನ್ನು ಹಸಿರು ಬಾವುಟ ಹಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಎಲ್ಲಾ…

Read More

ಕೆಆರ್‌ಎಸ್‌ ನಾಲೆ ಆಧುನೀಕರಣ ‘ಅವೈಜ್ಞಾನಿಕ’: ಪ್ರಧಾನಿಗೆ ದೂರು

ವಿಶ್ವೇಶ್ವರಯ್ಯನವರ ಆಶಯಕ್ಕೆ ತಿಲಾಂಜಲಿ; ಅಂತರ್ಜಲ ಕುಸಿತದ ಆತಂಕ ವ್ಯಕ್ತಪಡಿಸಿದ ಡಾ. ಸಿದ್ದೇಗೌಡ ​ಮಂಡ್ಯ: ಜಿಲ್ಲೆಯ ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶದ ನಾಲೆಗಳ ಆಧುನೀಕರಣ ಕಾಮಗಾರಿ ತೀವ್ರ ವಿವಾದಕ್ಕೆ ಈಡಾಗಿದೆ. ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳು ಸಂಪೂರ್ಣ ‘ಅವೈಜ್ಞಾನಿಕ’ವಾಗಿದ್ದು, ಇದು ಸ್ಥಳೀಯ ಪರಿಸರ ಮತ್ತು ಜಲ ಸಂಪನ್ಮೂಲಗಳ ಮೇಲೆ ಮಾರಕ ಪರಿಣಾಮ ಬೀರಲಿದೆ ಎಂದು ಆರೋಪಿಸಿ ಚಿಕ್ಕಬಳ್ಳಾಪುರದ ಶಾ ಶಿಬ್ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರೂ ಆದ ಬೂದನೂರು ನಿವಾಸಿ ಡಾ. ಸಿದ್ದೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಿದ್ದಾರೆ….

Read More

ಮಹಾರಾಷ್ಟ್ರ ಪೊಲೀಸರ ಭರ್ಜರಿ ದಾಳಿ ಬೆನ್ನಲ್ಲೇ ಬೆಂಗಳೂರಿನ ಮೂವರು ಪೊಲೀಸ್ ಅಧಿಕಾರಿಗಳ ತಲೆದಂಡ!

ಬೆಂಗಳೂರು, ಡಿ.29 : ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ನಗರದ ಮೂರು ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕೊತ್ತನೂರು ಠಾಣೆಯ ಚೇತನ್ ಕುಮಾರ್, ಅವಲಹಳ್ಳಿ ಠಾಣೆಯ ರಾಮಕೃಷ್ಣಾರೆಡ್ಡಿ ಮತ್ತು ಬಾಗಲೂರು ಠಾಣೆಯ ಶಬರೀಶ್ ಅಮಾನತುಗೊಂಡ ಅಧಿಕಾರಿಗಳಾಗಿದ್ದಾರೆ. ಈ ಅಧಿಕಾರಿಗಳ ವ್ಯಾಪ್ತಿಯಲ್ಲಿ ಬೃಹತ್ ಡ್ರಗ್ಸ್ ತಯಾರಿಕಾ ಘಟಕಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ​ಬೆಂಗಳೂರು ಉತ್ತರ ಜಿಲ್ಲೆಯ ಬಾಗಲೂರಿನ ಸ್ಪಂದನಾ…

Read More

​”ನನ್ನ ಕೋಟೆ, ನನ್ನ ಆಟ”: ಹಾಸನದಲ್ಲಿ ಕೈ ನಾಯಕರ ವಿರುದ್ಧ ‘ದೊಡ್ಡ ಗೌಡರ’ ರಣಕಹಳೆ!

ಹಾಸನ: “ನನ್ನ ದೇಹದಲ್ಲಿ ಪ್ರಾಣ ಇರುವವರೆಗೂ ಜನರಿಗಾಗಿ ಹೋರಾಡುತ್ತೇನೆ, ನನ್ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ!” ಹೀಗೆಂದು ಗುಡುಗಿದ್ದು 93 ವರ್ಷದ ಇಳಿವಯಸ್ಸಿನಲ್ಲೂ ಯುವಕರನ್ನೂ ಮೀರಿಸುವ ಕೆಚ್ಚೆದೆಯ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು. ತಮ್ಮ ಹುಟ್ಟೂರಾದ ಹರದನಹಳ್ಳಿಯಲ್ಲಿ ಸೋಮವಾರ ಕಾಂಗ್ರೆಸ್ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದ ರೀತಿ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ​ಜಿಲ್ಲೆಯ ಮೇಲೆ ಕಾಂಗ್ರೆಸ್ ಕಣ್ಣೇಕೆ? ದೊಡ್ಡ ಗೌಡರ ಪ್ರಶ್ನೆ ​ಹಾಸನ ಜಿಲ್ಲೆಯನ್ನು ಟಾರ್ಗೆಟ್ ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರದ ನಡೆಗೆ ಗೌಡರು ಕೆಂಡಾಮಂಡಲರಾದರು….

Read More

ಡ್ರಗ್ಸ್ ದಂಧೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಗೃಹ ಸಚಿವರ ಖಡಕ್ ಸೂಚನೆ

ಬೆಂಗಳೂರು: ರಾಜಧಾನಿಯಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾನುವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿದ ಅವರು, ಕರ್ತವ್ಯ ಲೋಪ ಎಸಗುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು. ​ಪೊಲೀಸ್ ಅಧಿಕಾರಿಗಳಿಗೆ ಕ್ಲಾಸ್ ​”ನೂರಾರು ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದೇವೆ ಎಂದು ನಿಮ್ಮ ಬೆನ್ನು ನೀವೇ ತಟ್ಟಿಕೊಂಡರೆ ಸಾಲದು….

Read More

ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಖಂಡನೆ – ಮೈಸೂರು ನಗರದಲ್ಲಿ ಪಂಜಿನ ಮೆರವಣಿಗೆ

ಮೈಸೂರು, ಡಿಸೆಂಬರ್ 26:ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ಹತ್ಯೆ ಮತ್ತು ಹಿಂಸಾಚಾರವನ್ನು ಖಂಡಿಸಿ ಮೈಸೂರಿನ ಹಿಂದೂಪರ ಸಂಘಟನೆಗಳಿಂದ ಇಂದು ಪಂಜಿನ ಮೆರವಣಿಗೆ ನಡೆಯಿತು.ಮೆರವಣಿಗೆ ಪುರಭವನದಿಂದ ಪ್ರಾರಂಭವಾಗಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ದೊರಕಿತು. ಅಲ್ಲಿಂದ ಮೆಟ್ರೋಪೋಲ್ ವೃತ್ತದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆಯವರೆಗೆ ಮೆರವಣಿಗೆ ಸಾಗಿತು. ಈ ವೇಳೆ ಮೈಸೂರು‑ಕೊಡಗು ಸಂಸದ ಯಧುವೀರ್ ಕೃಷ್ಣದತ್ತ ಒಡೆಯರ್ ರವರು ಭಾಗವಹಿಸಿ ಮಾತನಾಡಿದರು. ಅವರು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿ,…

Read More

ರಾಜ್ಯದಲ್ಲಿ ಸದ್ಯಕ್ಕಿಲ್ಲ ನಾಯಕತ್ವ ಬದಲಾವಣೆ: ಹೈಕಮಾಂಡ್ ‘ತಟಸ್ಥ’ ನೀತಿಯಿಂದ ಡಿಕೆಶಿ ಬಣಕ್ಕೆ ಹಿನ್ನಡೆ?

ಬೆಂಗಳೂರು, ಡಿ.25 : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಿಯೇ ಆಗುತ್ತೆ ಎಂದು ಡಿಕೆಶಿ ಪರ ಶಾಸಕರು ವಿಶ್ವಾಸದಲ್ಲಿದ್ದರೂ, ಹೈಕಮಾಂಡ್ ನಾಯಕರು ಸಿಎಂ ಬದಲಾಯಿಸಿ ಕೈಸುಟ್ಟುಕೊಳ್ಳುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದಂತಿದೆ.‌ ಇದಕ್ಕೆ ಸಾಕ್ಷಿ ಎನ್ನುವಂತೆ, ಡಿಕೆಶಿ ಎಷ್ಟೇ ಪ್ರಯತ್ನಿಸಿದರೂ ರಾಹುಲ್ ಗಾಂಧಿ ಭೇಟಿಗೆ ಸಿಗಲಿಲ್ಲ. ‌ಇದಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ಗೊಂದಲ ನಾವು ಸೃಷ್ಟಿಸಿದ್ದಲ್ಲ, ನೀವೇ ಸರಿ ಮಾಡಿಕೊಳ್ಳಿ ಎಂದು ಹೇಳಿ ಅಂತರ ಕಾಯ್ದುಕೊಂಡಿದ್ದಾರೆ. ‌ ಹೀಗಾಗಿ ನಾಯಕತ್ವ ಬದಲಾವಣೆಗೆ ಎಷ್ಟೇ ಒತ್ತಡ ಹಾಕಿದರೂ, ಸ್ಪಷ್ಟ ತೀರ್ಮಾನ…

Read More
error: Content is protected !!