Headlines

ಸಿಸಿಟಿವಿ ಫೂಟೇಜ್ ನೀಡದ PSIಗಳ ವಿರುದ್ಧ ಕಠಿಣ ಶಿಸ್ತುಕ್ರಮಕ್ಕೆ ಆಯೋಗ ಆದೇಶ

ಮಾಹಿತಿ ಹಕ್ಕು ಕಾಯ್ದೆಯಡಿ (RTI) ಕೋರಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸಲು ವಿಫಲವಾದ ಹಾಗೂ ಅವುಗಳನ್ನು ಸಂರಕ್ಷಿಸಿಡದ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳ (PSI) ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಕರ್ನಾಟಕ ಮಾಹಿತಿ ಆಯೋಗವು ಶಿಫಾರಸು ಮಾಡಿದೆ. ​ಪೊಲೀಸ್ ಠಾಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಅಥವಾ ಕಿರುಕುಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರೊಬ್ಬರು ಸಿಸಿಟಿವಿ ಫೂಟೇಜ್‌ ನೀಡುವಂತೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರು. ಆದರೆ, “ಸಿಸ್ಟಮ್‌ನಲ್ಲಿ ಡಾಟಾ ಆಟೋ-ಡಿಲೀಟ್ ಆಗಿದೆ”, “ವಿದ್ಯುತ್ ವ್ಯತ್ಯಯದಿಂದ ಧ್ವಂಸಗೊಂಡಿದೆ” ಅಥವಾ “ಸ್ಟೋರೇಜ್ ಸಮಸ್ಯೆಯಿಂದ ದೃಶ್ಯಾವಳಿ ಲಭ್ಯವಿಲ್ಲ” ಎಂಬಿತ್ಯಾದಿ…

Read More

ಶಿಕ್ಷಕರು – ನಿನ್ನೆಗೂ ಇಂದಿಗೂ ಎಂದೆಂದಿಗೂ…

ತಾಯಿ ಜನ್ಮ ನೀಡಿದರೆ, ಗುರು ಬದುಕನ್ನು ರೂಪಿಸುತ್ತಾನೆ. ತಂದೆ ಬೆರಳಿಡಿದು ನಡೆಯಲು ಕಲಿಸಿದರೆ, ಗುರು ಕೈಹಿಡಿದು ಬದುಕಲು ಕಲಿಸುತ್ತಾನೆ. ಈ ನುಡಿಗಳು ಮಾನವ ಜೀವನದ ಅತ್ಯುನ್ನತ ಮತ್ತು ಪವಿತ್ರವಾದ ಎರಡು ಶಕ್ತಿಗಳನ್ನು ಅತ್ಯಂತ ಅರ್ಥಪೂರ್ಣವಾಗಿ ಬಿಂಬಿಸುತ್ತವೆ. ನಮ್ಮ ಅಸ್ತಿತ್ವಕ್ಕೆ ತಾಯಿಯೇ ಮೊದಲ ಪ್ರೇರಣೆ. ಅವಳು ತನ್ನ ರಕ್ತ-ಮಾಂಸಗಳನ್ನು ಹಂಚಿ ನಮಗೆ ಈ ಸುಂದರ ಸೃಷ್ಟಿಯನ್ನು ನೋಡುವ ಭಾಗ್ಯ ಕರುಣಿಸುತ್ತಾಳೆ. ಕೇವಲ ಜನ್ಮ ನೀಡುವುದಷ್ಟೇ ಅಲ್ಲದೆ, ತನ್ನ ಮಮತೆಯ ಬೆರಳಿಡಿದು ನಮಗೆ ನೆಲದ ಮೇಲೆ ಮೊದಲ ಹೆಜ್ಜೆಯನ್ನಿಡಲು ಕಲಿಸುತ್ತಾಳೆ….

Read More

ಅಕ್ರಮ ತರಗತಿ, ಹಣ ದುರುಪಯೋಗ, ಬೆದರಿಕೆ ಆರೋಪ: ಅಮಾನತಾದ ಶೋಭರಾಣಿ ಪರ RTI ಕಾರ್ಯಕರ್ತನ ಕಸರತ್ತು!?

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಶಿಕ್ಷಣ ಕ್ಷೇತ್ರದ ಘಟನೆಯೊಂದರಲ್ಲಿ, ತೂಬಿನಕೆರೆಯ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಶೋಭರಾಣಿ ಸಿ. ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಡಿಡಿಪಿಐ) ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ​ಆಡಳಿತ ಉಪನಿರ್ದೇಶಕರು ಹೊರಡಿಸಿರುವ ಈ ಆದೇಶದ ಬೆನ್ನಲ್ಲೇ ಶಿಕ್ಷಕಿಯ ವಿರುದ್ಧ ಹಲವು ಗಂಭೀರ ಆರೋಪಗಳ ಪಟ್ಟಿ ಹೊರಬಿದ್ದಿದೆ. ಇಲಾಖೆಯ ಯಾವುದೇ ಪೂರ್ವಾನುಮತಿ ಪಡೆಯದೆ ಅಕ್ರಮವಾಗಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಆರಂಭಿಸಿ, ಸ್ಥಳೀಯ ಅಂಗನವಾಡಿ ಕೇಂದ್ರದ ಅಸ್ತಿತ್ವಕ್ಕೇ ಧಕ್ಕೆ ತಂದಿದ್ದಾರೆ…

Read More

ಮಂಡ್ಯ ಜಿ.ಪಂ ಸಿಇಒ ವಿರುದ್ಧ ಅಹೋರಾತ್ರಿ ಧರಣಿ: ‘ನಂದಿನಿ ಹಠಾವೋ’ ಹೋರಾಟಕ್ಕೆ ಕೆ.ಟಿ. ಶ್ರೀಕಂಠೇಗೌಡ ಬೆಂಬಲ!

ಮಂಡ್ಯ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಸಿಇಒ ಕೆ.ಆರ್. ನಂದಿನಿ ಅವರ ವಿರುದ್ಧ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಕೈಗೊಂಡಿರುವ ‘ಸಿಇಓ ನಂದಿನಿ ಕೆ. ಆರ್. ಹಠಾವೋ – ಮಂಡ್ಯ ಜಿಲ್ಲಾ ಪಂಚಾಯಿತಿ ಬಚಾವೋ’ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಇದೀಗ ಭಾರಿ ಬೆಂಬಲ ವ್ಯಕ್ತವಾಗಿದೆ. ಈ ಹಠಾತ್‌ ಹೋರಾಟದ ಅಂಗಳಕ್ಕೆ ಧುಮುಕಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅವರು ಪ್ರತಿಭಟನಾಕಾರರಿಗೆ ತಮ್ಮ ಮುಕ್ತ ಬೆಂಬಲ ಪ್ರಕಟಿಸಿ, ಆಡಳಿತದ…

Read More

ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು ರದ್ದು: 7 ದಿನಗಳಲ್ಲಿ ಮರುನೇಮಕಕ್ಕೆ ಹೈಕೋರ್ಟ್ ನಿರ್ದೇಶನ

ಇತ್ತೀಚಿನ ಪ್ರಮುಖ ಬೆಳವಣಿಗೆಯೊಂದರಲ್ಲಿ, ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಈ ಮಹತ್ವದ ತೀರ್ಪು ನೀಡಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು, ಶಿವಶಂಕರಪ್ಪ ಸಾಹುಕಾರ್ ಅವರನ್ನು ಮುಂದಿನ ಏಳು ದಿನಗಳ ಒಳಗಾಗಿ ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಯಲ್ಲಿ ಮರುನೇಮಕ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಖಡಕ್ ನಿರ್ದೇಶನ ನೀಡಿದೆ. ಜುಲೈ 10ರಂದು ರಾಜ್ಯಪಾಲರು ಹೊರಡಿಸಿದ್ದ…

Read More

ಮಂಡ್ಯ ಜಿ.ಪಂ ಸಿಇಒ ವಿರುದ್ಧ ಸಾರ್ವಜನಿಕರ ಆಕ್ರೋಶ: ‘ನಂದಿನಿ ಹಠಾವೋ’ ಅಹೋರಾತ್ರಿ ಧರಣಿ ಸತ್ಯಾಗ್ರಹ!

ಸಿಇಒ ಕೆ.ಆರ್. ನಂದಿನಿ ಅವರ ಕಾರ್ಯವೈಖರಿಯನ್ನು ಖಂಡಿಸಿ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಡ್ಯ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ. ಕೆ.ಆರ್.ಎಸ್. ಪಾರ್ಟಿ, ಭ್ರಷ್ಟಾಚಾರ ವಿರೋಧಿ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ‘ಸಿಇಒ ನಂದಿನಿ ಕೆ.ಆರ್. ಹಠಾವೋ–ಮಂಡ್ಯ ಜಿಲ್ಲಾ ಪಂಚಾಯಿತಿ ಬಚಾವೋ’ ಎಂಬ ಘೋಷಣೆಗಳೊಂದಿಗೆ ಪ್ರತಿಭಟನೆಯನ್ನು ಪ್ರಾರಂಭಿಸಿದ್ದಾರೆ. ​ಜಿಲ್ಲಾ ಪಂಚಾಯಿತಿ ಆವರಣದಿಂದಲೇ ಲಕ್ಷಾಂತರ ರೂಪಾಯಿ ಮೌಲ್ಯದ ಸುಮಾರು 60 ಟನ್…

Read More

KRS ಮಂಡ್ಯ ಜಿಲ್ಲಾ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವ: ಧ್ವಜಾರೋಹಣ ನೆರವೇರಿಸಿದ ಬಿ.ಟಿ. ವಿಶ್ವನಾಥ್, ಅಣ್ಣಯ್ಯ ಗೌಡ

ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮಂಡ್ಯ ನಗರದಲ್ಲಿರುವ ಸುಭಾಷ್ ನಗರ 6 ನೇ ಕ್ರಾಸ್, ಶಿವಾನಂಜಪ್ಪ ಪಾರ್ಕ್ ಮುಂಭಾಗದಲ್ಲಿರುವ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಹಿರಿಯ ನ್ಯಾಯವಾದಿ ಬಿ.ಟಿ. ವಿಶ್ವನಾಥ್ ಅವರು ಹಾಗೂ ರೈತ ಸಂಘದ ಮುಖಂಡರಾದ ಅಣ್ಣಯ್ಯ ಗೌಡರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ನ್ಯಾಯವಾದಿ ಬಿ.ಟಿ. ವಿಶ್ವನಾಥ್ ಅವರು ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆ, ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ,…

Read More

ಕಾವೇರಿ ವನ್ಯಜೀವಿಧಾಮದಲ್ಲಿ ಎನ್‌ಕೌಂಟರ್: ಮೂವರು ಬೇಟೆಗಾರರ ಸಾವು; ಅರಣ್ಯ ಕಚೇರಿ ಧ್ವಂಸಗೊಳಿಸಿ ಸಾರ್ವಜನಿಕರ ಆಕ್ರೋಶ

ಚಾಮರಾಜನಗರ,ಆ.15: ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಶಾಗ್ಯ ಸಮೀಪದ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ಗೆ ಮೂವರು ಬಲಿಯಾಗಿದ್ದಾರೆ. ಘಟನೆಯ ನಂತರ ಆಕ್ರೋಶಗೊಂಡ ಮೃತರ ಸಂಬಂಧಿಕರು ಅರಣ್ಯ ಇಲಾಖೆಯ ಕಚೇರಿಯನ್ನು ಧ್ವಂಸಗೊಳಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಶಾಗ್ಯ ವ್ಯಾಪ್ತಿಯ ದಟ್ಟಿ ಅರಣ್ಯ ಪ್ರದೇಶದಲ್ಲಿ ಕಾಡಿಗೆ ನುಗ್ಗಿ ಬೇಟೆಗಾರರು ಕಾಡುಪ್ರಾಣಿಯನ್ನು ಬೇಟೆಯಾಡಿ ಅದರ ಮಾಂಸವನ್ನು ಬೇರ್ಪಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಗಸ್ತಿನಲ್ಲಿದ್ದ ಕಾವೇರಿ ವನ್ಯಜೀವಿಧಾಮದ ಅರಣ್ಯ ಸಿಬ್ಬಂದಿ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು…

Read More

ಆಗಸ್ಟ್ 15, ಜನವರಿ 26 ರಂದು ರಾಯಣ್ಣ ಭಾವಚಿತ್ರ ಇಡುವುದು ಕಡ್ಡಾಯಗೊಳಿಸಿ ಅಧಿಕೃತ ಆದೇಶ ಹೊರಡಿಸಲು ಬಿ.ಎಸ್. ಶಶಿಕುಮಾರ್ ಆಗ್ರಹ

ಚಾಮರಾಜನಗರ / ಕೊಳ್ಳೇಗಾಲ: ಕರ್ನಾಟಕ ಸರ್ಕಾರವು ೨೦೨೧ ರಲ್ಲೇ ಅಧಿಕೃತ ಸುತ್ತೋಲೆ / ಆದೇಶ ಹೊರಡಿಸಿದ್ದರೂ ಸಹ, ಚಾಮರಾಜನಗರ ಜಿಲ್ಲೆಯಾದ್ಯಂತ ಜನವರಿ ೨೬ (ಗಣರಾಜ್ಯೋತ್ಸವ) ಮತ್ತು ಆಗಸ್ಟ್ ೧೫ (ಸ್ವಾತಂತ್ರ್ಯ ದಿನಾಚರಣೆ) ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರವನ್ನು ಇಟ್ಟು ಕನಿಷ್ಠ ಗೌರವ ಸಮರ್ಪಣೆ ಮಾಡದಿರುವುದು ತೀವ್ರ ವಿಷಾದನೀಯ ಸಂಗತಿಯಾಗಿದೆ. ​ಈ ಹಿನ್ನೆಲೆಯಲ್ಲಿ, ಚಾಮರಾಜನಗರ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಹಾಗೂ ಕೆಪಿಸಿಸಿ ಸಂವಹನ ಮತ್ತು ಮಾಧ್ಯಮ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಶಿಕುಮಾರ್ .ಬಿ.ಎಸ್…

Read More

ಸಾಲದ ಸುಳಿಯಲ್ಲಿ ಪೋಷಕರು: ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ರಸ್ತೆಗಿಳಿದ KRS ಯುವಪಡೆ!

ಮಂಡ್ಯ ವಿಶ್ವವಿದ್ಯಾಲಯದ ಅಧೀನದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಸೇವೆ ಮತ್ತು ಸೌಲಭ್ಯಗಳಿಗೆ ಹೊಂದಿಕೆಯಾಗದ ಅನಗತ್ಯ ಹಾಗೂ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ, ಕರ್ನಾಟಕ ರಾಷ್ಟ್ರ ಸಮಿತಿ (KRS) ರಾಜ್ಯ ಯುವ ಘಟಕದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ.​ಜುಲೈ 27ರಂದು ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಂಡ್ಯ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅದರ ಪರಿಣಾಮವಾಗಿ ಪ್ರವೇಶದಾತಿಯ ಅಂತಿಮ ದಿನಾಂಕವನ್ನು ವಿಸ್ತರಿಸಿ ಕಾಲಾವಕಾಶ ನೀಡಲಾಗಿದೆಯಾದರೂ, ಅನಗತ್ಯವಾಗಿ ವಿಧಿಸಲಾಗಿರುವ ಹಾಗೂ ಹೆಚ್ಚಿಸಲಾಗಿರುವ ಶುಲ್ಕದಲ್ಲಿ ಯಾವುದೇ…

Read More
error: Content is protected !!