ಲೋಕಾ ಬಲೆಗೆ ಬ್ರೋಕರ್ ಸಮೇತ ಬಿದ್ದ ಭ್ರಷ್ಟ ಅಧಿಕಾರಿಗಳು!
ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿಚಾಮರಾಜನಗರ: ಇ ಖಾತಾ ಮಾಡಿಕೊಡಲು ಸಾರ್ವಜನಿಕರಿಂದ ಬರೋಬ್ಬರಿ 25 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಚಾಮರಾಜನಗರ ನಗರಸಭೆಯ ಇಬ್ಬರು ಅಧಿಕಾರಿಗಳು ಹಾಗೂ ಓರ್ವ ಮಧ್ಯವರ್ತಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಚಾಮರಾಜನಗರದ ನಗರಸಭೆ ಕಚೇರಿಯಲ್ಲಿಯೇ ಈ ಹೈಡ್ರಾಮಾ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ನಗರಸಭೆಯ ಕಂದಾಯ ಅಧಿಕಾರಿ (RO) ಹೇಮಂತ್ ಕುಮಾರ್, ಕಂದಾಯ ನಿರೀಕ್ಷಕ (RI) ಶಕೀಲ್ ಅಹಮ್ಮದ್ ಹಾಗೂ ಲಂಚದ ಹಣ ವಸೂಲಿಗೆ ನಿಂತಿದ್ದ ದಲ್ಲಾಳಿ ಹಬೀಬ್ ಸಿಕ್ಕಿಬಿದ್ದ ಆರೋಪಿಗಳು….

