ಎಸ್ಐಟಿ ಮುಂದೆ ನನಗೆ ತಿಳಿದಿರುವುದೆನ್ನೆಲ್ಲಾ ಹೇಳಿದ್ದೇನೆ, ಇನ್ಮೇಲೆ ಈ ಕೂಪದಲ್ಲಿ ಇರಲ್ಲ: ವೃದ್ಧೆ ಸುಜಾತಾ
ಎಸ್‌ಐಟಿಯ ಮುಂದೆ ನನಗೆ ತಿಳಿದಿರುವ ಎಲ್ಲಾ ಅಂಶಗಳನ್ನು ಹೇಳಿ ಬಂದಿದ್ದೇನೆ. ಇನ್ನು ಮುಂದೆ ನಾನು ಈ ಕೂಪದಲ್ಲಿ ಇರುವುದಿಲ್ಲ ಎಂದು ವೃದ್ಧೆ ಸುಜಾತಾಭಟ್ ಹೇಳಿದ್ದಾರೆ. ಇಂದು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಾರ್ಯಾರು ಏನೇನು ಮಾಡಿದ್ದಾರೋ ಅದಕ್ಕೆ ತಕ್ಕಂತೆ ಅವರು ಅನುಭವಿಸುತ್ತಾರೆ. ನಾನು ಏಕಾಂಗಿಯಾಗಿಯೇ ಎಸ್‌ಐಟಿ ತನಿಖೆಯನ್ನು ಎದುರಿಸಿ ಬಂದಿದ್ದೇನೆ. ಇನ್ನು ನನಗೆ ಯಾರ ಸಹವಾಸವೂ ಬೇಡ. ಯಾವ ಕೂಪಗಳಲ್ಲೂ ನಾನು ಇರುವುದಿಲ್ಲ ಎಂದು ಹೇಳಿದ್ದಾರೆ. ಕೊಲೆಯಾಗಿದ್ದಾರೆ ಎಂದು ಹೇಳಲಾಗುವ ವಾಸಂತಿ ಇನ್ನು ಬದುಕಿದ್ದಾರೆ ಎಂದು ನನ್ನ…

