ಶ್ರೀರಂಗಪಟ್ಟಣ ಪಂಚಾಯತ್ ಇಲಾಖೆಯಲ್ಲಿ ಇ-ಖಾತಾ ತಿದ್ದುಪಡಿಯಲ್ಲಿ ಭಾರಿ ಭ್ರಷ್ಟಾಚಾರದ ಶಂಕೆ!
ಮಂಡ್ಯ/ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆ ಗ್ರಾಮ ಪಂಚಾಯಿತಿಯಲ್ಲಿ ಇ-ಖಾತಾ ತಿದ್ದುಪಡಿಯಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪ್ರಾಪರ್ಟಿ ದಾಖಲೆ ತಿದ್ದುಪಡಿ ಹೆಸರಿನಲ್ಲಿ ಅನಧಿಕೃತ ವರ್ಗಾವಣೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಪಂಚಾಯತ್ ಆಡಳಿತದ ನೌಕರರ ಪಾತ್ರದ ಮೇಲೆ ಗಂಭೀರ ಅನುಮಾನಗಳು ಉದ್ಭವಿಸಿವೆ. ಗ್ರಾಮ ಪಂಚಾಯಿತಿಯ ಇತ್ತೀಚಿನ ಸಾಮಾನ್ಯ ಸಭೆ ನಡವಳಿಕೆಯಲ್ಲಿ, ಹಿಂದಿನ ತಿಂಗಳಲ್ಲಿ ನಡೆದಿದ್ದ ಕೆಲವು ಇ-ಖಾತಾ ತಿದ್ದುಪಡಿ ಪ್ರಕ್ರಿಯೆಗಳಲ್ಲಿ ಹಳೆ ಸಭಾ ನಿರ್ಣಯಗಳನ್ನು ಸುಳ್ಳಾಗಿ ದಾಖಲಿಸಿಕೊಂಡಿರುವುದು, ಮಾಲೀಕರ ಫೋಟೋ ಬದಲಾವಣೆ, ಪೂರಕ ದಾಖಲೆಗಳಿಲ್ಲದೇ ತಿದ್ದುಪಡಿ ಹಾಗೂ ಎಂಆರ್…

