ದೂರುದಾರನೇ ಅಸಲಿ ಕಳ್ಳ: ತೆರಕಣಾಂಬಿ ಪೊಲೀಸರ ಚಾಣಾಕ್ಷ ತನಿಖೆ!
ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ ಚಾಮರಾಜನಗರ: ತೆರಕಣಾಂಬಿ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡಗೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದಿದ್ದ ಬೃಹತ್ ಕಳವು ಪ್ರಕರಣವನ್ನು ಪೊಲೀಸರು ಕೇವಲ ಕೆಲವೇ ದಿನಗಳಲ್ಲಿ ಭೇದಿಸಿದ್ದಾರೆ. ವಿಶೇಷವೆಂದರೆ, ಪ್ರಕರಣದ ದೂರುದಾರನೇ ಅಸಲಿ ಕಳ್ಳ ಎಂಬ ಬೆಚ್ಚಿಬೀಳಿಸುವ ಸತ್ಯ ತನಿಖೆಯಿಂದ ಬಯಲಾಗಿದೆ. ಘಟನೆಯ ಹಿನ್ನೆಲೆದಿನಾಂಕ 16/12/2025 ರಂದು ರಾತ್ರಿ ವೇಳೆ ಮೂಡಗೂರು ಸಹಕಾರ ಸಂಘದ ಕಚೇರಿಯ ಬೀಗ ಮುರಿದು ಸುಮಾರು ರೂ. 14,12,000/- ನಗದು ಹಣವನ್ನು ಕಳವು ಮಾಡಲಾಗಿತ್ತು….

