ದಲಿತ ದ್ರೋಹಿ ಹುಲಿಕೆರೆ ಗ್ರಾ.ಪಂ. ಪಿಡಿಒ ರವರ ಅಮಾನತು ಆದೇಶವಿದ್ದರೂ ಕಚೇರಿಗೆ ಬರುತ್ತಿರುವುದೇಕೆ!?
ಶ್ರೀರಂಗಪಟ್ಟಣ: ತಾಲ್ಲೂಕಿನ ಹುಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಂಗಹಳ್ಳಿ ಗ್ರಾಮದಲ್ಲಿ ನಿಯಮಬಾಹಿರವಾಗಿ ಅಂಬೇಡ್ಕರ್ ಭವನವನ್ನು ನೆಲಸಮಗೊಳಿಸಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಶ್ರೀನಿವಾಸ್ ಕೆ. ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (CEO) ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದರೆ, ಅಮಾನತು ಆದೇಶ ಹೊರಬಿದ್ದರೂ ಅಧಿಕಾರಿ ಇಂದಿಗೂ ಕರ್ತವ್ಯದಲ್ಲಿ ಮುಂದುವರಿದಿರುವುದು ಸಾರ್ವಜನಿಕರಲ್ಲಿ ತೀವ್ರ ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣದ ಹಿನ್ನೆಲೆ: ಹೊಂಗಹಳ್ಳಿ ಗ್ರಾಮದ ಅಂಬೇಡ್ಕರ್ ಭವನದ ದುರಸ್ತಿಗಾಗಿ 2025-26ನೇ ಸಾಲಿನ ಶೇ. 25ರ…

