ಬೆಂಗಳೂರಿನಲ್ಲಿ ಭಾರತದ ಪ್ರಥಮ ಯುಪಿಐ ಆಧಾರಿತ ಬ್ಯಾಂಕ್ ಆರಂಭ!
ಬೆಂಗಳೂರು, ಜುಲೈ 8: ಅಂತೂ ಇಂತೂ ಬೆಂಗಳೂರಿನಲ್ಲಿ ಭಾರತದ ಪ್ರಪ್ರಥಮ ಪೂರ್ಣ ಪ್ರಮಾಣದ ಯುಪಿಐ (UPI) ಬ್ಯಾಂಕ್ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ.ಈ ಯುಪಿಐ ಬ್ಯಾಂಕ್ ನಲ್ಲಿ ಎಲ್ಲವೂ ಡಿಜಿಟಲ್ ಮಯವಾಗಿದ್ದು, ನಿಮ್ಮ ನೆರವಿಗೆ ಅಥವಾ ಕೆಲಸ ಮಾಡಲು ಯಾವುದೇ ಉದ್ಯೋಗಿಗಳು ಇಲ್ಲ! ಫಿನ್‌ಟೆಕ್ ಕಂಪನಿಯಾದ ಸ್ಲೈಸ್ ಬೆಂಗಳೂರಿನ ಕೋರಮಂಗಲದಲ್ಲಿ ಯುಪಿಐ ಬ್ಯಾಂಕನ್ನು ಪ್ರಾಯೋಗಿಕವಾಗಿ ಆರಂಭಿಸಿದೆ. ಇಲ್ಲಿ ನೀವು ಯಾವುದೇ ಕಾಗದ ಪತ್ರಗಳು ಅಥವಾ ಕಾರ್ಡ್‌ಗಳ ಅಗತ್ಯವಿಲ್ಲದೇ ಸಂಪೂರ್ಣವಾಗಿ ಡಿಜಿಟಲ್ ಬ್ಯಾಂಕಿಂಗ್ ಬಳಸಬಹುದು. ಖಾತೆ ತೆರೆಯುವಿಕೆಯಿಂದ ಹಿಡಿದು ನಗದು ಠೇವಣಿ,…

