ಹಳೆಯ GST ಬಾಕಿ ಮನ್ನಾ: ಸಣ್ಣ ವ್ಯಾಪಾರಿಗಳ ಮುಷ್ಕರ ವಾಪಸ್!
ಬೆಂಗಳೂರು, ಜುಲೈ 23: ವಾಣಿಜ್ಯ ತೆರಿಗೆ ಇಲಾಖೆಯಿಂದ ಜಾರಿಯಾಗುತ್ತಿದ್ದ ನೋಟೀಸ್ ಗಳಿಂದ ಹೌಹಾರಿದ್ದ ರಾಜ್ಯದ ಸಣ್ಣ ಉದ್ದಿಮೆದಾರರು ಸಿಎಂ ಸಿದ್ದರಾಮಯ್ಯನವರು ನಡೆಸಿದ ಮೀಟಿಂಗ್ ನಂತರ ನಿರಾಳರಾಗಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯಿಂದ ಜಾರಿಯಾಗಿರುವ ತೆರಿಗೆ ನೋಟೀಸ್ ಗಳನ್ನು ವಾಪಸ್ಸು ಪಡೆಯುವ ಆಶ್ವಾಸನೆಯನ್ನು ಕಾಂಡಿಮೆಂಟ್ಸ್, ಬೇಕರಿ, ಟೀ ಸ್ಟಾಲ್ ನಡೆಸುವ ಮತ್ತು ಎಲ್ಲ ಸಣ್ಣ ಉದ್ದಿಮೆದಾರರಿಗೆ ಸಿಎಂ ಸಿದ್ದರಾಮಯ್ಯ ಇಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಇಂದು ಪ್ರತಿಭಟನೆ ಆರಂಭಿಸಿದ್ದ ಸಣ್ಣ ವ್ಯಾಪಾರಿಗಳು ಅದನ್ನು ಇಂದೇ ವಾಪಸ್ ಪಡೆದಿದ್ದಾರೆ. ಆದರೆ ಈ…

