ಅನಾರೋಗ್ಯ ಕಾರಣ ಹೇಳಿ ಉಪರಾಷ್ಟ್ರಪತಿ ರಾಜೀನಾಮೆ
ನವದೆಹಲಿ, ಜುಲೈ 21: ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು, ನಾನು ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ಇದು ತಕ್ಷಣವೇ ಜಾರಿಗೆ ಬರುತ್ತದೆ” ಎಂದು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಜಗದೀಪ್ ಧನ್‌ಕರ್ ಉಲ್ಲೇಖಿಸಿದ್ದಾರೆ. ಧನ್‌ಕರ್ ರಾಜೀನಾಮೆ ಭಾರತದ ರಾಜಕಾರಣದಲ್ಲಿ ಇದೀಗ ಭಾರೀ ಚರ್ಚೆಗೆ ಒಳಪಡುತ್ತಿದೆ. ಜಗದೀಪ್ ಧನ್‌ಕರ್ ಸಂಸತ್ತಿನ ಮಾನ್ಸೂನ್ ಅಧಿವೇಶನದ ಮೊದಲ ದಿನವೇ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತಮ್ಮ ರಾಜೀನಾಮೆಗೆ ಆರೋಗ್ಯದ ಕಾರಣಗಳನ್ನು ನೀಡಿದ್ದಾರೆ….

