ಸಾರ್ವಜನಿಕ ಸೇವಾ ಕಾಯ್ದೆ ಗಾಳಿಗೆ ತೂರಿದ ಪಿಡಿಒ ಶೋಭಾರಾಣಿ: ಮೇಲಾಧಿಕಾರಿಗಳ ಮೌನದ ವಿರುದ್ಧ ಸಾರ್ವಜನಿಕರ ತೀವ್ರ ಅಸಮಾಧಾನ.!?
ಶ್ರೀರಂಗಪಟ್ಟಣ ತಾಲ್ಲೂಕಿನ ಕೆ. ಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಸಾರ್ವಜನಿಕ ಸೇವೆ ಸಂಪೂರ್ಣ ಹದಗೆಟ್ಟಿದ್ದು, ಕಚೇರಿ ವೇಳೆಯಲ್ಲೇ ಬೀಗ ಹಾಕಿ ಸಿಬ್ಬಂದಿ ನಾಪತ್ತೆಯಾಗಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸೋಮವಾರದ ಬಿರುಬಿಸಿಲಿನ ನಡುವೆಯೂ ವಿವಿಧ ಪ್ರಮಾಣಪತ್ರಗಳು, ತುರ್ತು ದಾಖಲಾತಿಗಳು ಹಾಗೂ ಸರ್ಕಾರದ ಸೌಲಭ್ಯಗಳಿಗಾಗಿ ದೂರದ ಗ್ರಾಮಗಳಿಂದ ಬಂದಿದ್ದ ಬಡ ಜನತೆ ಪಂಚಾಯತಿ ಕಚೇರಿ ಎದುರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಸಾರ್ವಜನಿಕರನ್ನು ಸ್ವಾಗತಿಸಿದ್ದು ಮಾತ್ರ ಕಚೇರಿಯ ಮುಖ್ಯ ದ್ವಾರಕ್ಕೆ ಹಾಕಿದ್ದ ಬೀಗವೇ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಯಿತು.ದಿನಾಂಕ…

