ಇವರ ಹೆಸರು: K R ನಂದಿನಿ.
ಊರು: ಮೂಲತಃ ಕೋಲಾರ ಜಿಲ್ಲೆಯವರಾಗಿದ್ದು ಪ್ರಸ್ತುತ ಮಂಡ್ಯ ಜಿಲ್ಲೆಗೆ ಸೊಸೆಯಾಗಿದ್ದಾರೆ.
ವಿದ್ಯಾರ್ಹತೆ : ಇದೇ ನಮ್ಮ ಬೆಂಗಳೂರಿನ ಎಂ.ಎಸ್ ರಾಮಯ್ಯ ಇನ್ಸ್ಟಿಟ್ಯೂಟ್ ನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದು 2014ನೇ ಬ್ಯಾಚ್ನ UPSC ಯಲ್ಲಿ 849ನೇ ರಾಂಕ್ ಪಡೆದು IRS ಅಧಿಕಾರಿಯಾಗಿ 2016 ರ ವರೆಗೂ ಕಾರ್ಯನಿರ್ವಹಿಸಿದ್ದು ತಮ್ಮ ನಾಲ್ಕನೇ ಅಟೆಂಪ್ಟ್ ನಲ್ಲಿ ಇಡೀ ದೇಶಕ್ಕೇ ಒಂದನೇ ರಾಂಕ್ ಪಡೆದು IAS ಅಧಿಕಾರಿಗಳಾಗಿರುತ್ತಾರೆ ಮತ್ತು ಒಂದು ಹೆಣ್ಣು ದೇಶಕ್ಕೇ ಟಾಪರ್ ಆಗಿ ಬಂದದ್ದು ಒಂದು ಹೆಮ್ಮೆಯ ವಿಷಯ ಕೂಡಾ ಆಗಿರುತ್ತದೆ ಮತ್ತು ಪ್ರಸ್ತುತ ಮಂಡ್ಯ ಜಿಲ್ಲೆಯ CEO, ಅಂದರೆ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ ಮುಂದುವರೆದು,
ದಿನಾಂಕ: 4.07.2025 ರಂದು ಇದೇ ಮಂಡ್ಯ ಜಿಲ್ಲೆಯ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ ದಿಶಾ ಸಮಿತಿ ಸಭೆ ಆಯೋಜನೆಗೊಂಡಿದ್ದು ಅಂದು ಜಿಲ್ಲೆಯ ನರೇಗಾ ಕಾರ್ಮಿಕರು ಹಲವು ಬೇಡಿಕೆ ಈಡೇರಿಕೆಗಾಗಿ (ಸುಮಾರು ಸಾವಿರ ಮಂದಿ) ಪ್ರತಿಭಟನೆ ಹಮ್ಮಿಕೊಂಡಿದ್ದು, ಸದರಿ CEO ನಂದಿನಿ ಮೇಡಂ ರವರಿಗೆ ಅಹವಾಲು ಸಲ್ಲಿಸುವ ವೇಳೆ ಪ್ರತಿಭಟನೆಯಲ್ಲಿ ನಿರತರಾಗಿದ್ದ ಸ್ಥಳೀಯ ಸಂಘಟನೆ ಕಾರರಾದ ಪುಟ್ಟಮಾದು ಎಂಬುವವರು CEO ರವರನ್ನು ಉದ್ದೇಶಿಸಿ ಅಶ್ಲೀಲ, ಅವಹೇಳನ ಮತ್ತು ಅಸಂವಿಧಾನಿಕ ಪದ ಬಳಸಿ ಅವಮಾನಕರ ರೀತಿಯಲ್ಲಿ ಮಾತನಾಡಿರುತ್ತಾರೆಂಬ ವಿಷಯವೊಂದು ಹಲ್ಚಲ್ ಆಗಿರುತ್ತದೆ ಮತ್ತು ಅಂದಿನ ಸಭೆ ಮುಕ್ತಾಯಗೊಂಡು ಅವರವರ ಮನೆಗೆ ಅವರವರು ಸೇರಿಕೊಂಡಿರುತ್ತಾರೆ ಆದರೆ ಅಲ್ಲಿ ಅವರು ಬಳಸಿದ ಪದಗಳು ಅದೆಂಥ ಅಶ್ಲೀಲತೆಯಿಂದ ಕೂಡಿದ್ದವು ಮತ್ತು ಅದೆಂತ ಅಸಂವಿಧಾನಿಕ, ಅವಮಾನಕರ ಪದಗಳನ್ನು ಬಳಸಿದ್ದಾರೆ ಎಂಬುದಂತೂ ಗೊತ್ತಾಗಲಿಲ್ಲ ಆದರೆ IAS ನಂದಿನಿ ಯವರು ರಾತ್ರಿಯೆಲ್ಲಾ ನಿದ್ದೆಗೆಟ್ಟರೋ ಅಥವಾ ಪ್ಲಾನ್ ಮಾಡಿದ್ರೋ ಗೊತ್ತಿಲ್ಲ.
ದಿ :7-7-2025 ರಂದು ಇಡೀ ಮಂಡ್ಯ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಪುಟ್ಟಮಾದು ಮತ್ತು ಸಂಘಟನಕಾರರ ವಿರುದ್ಧ ಪ್ರತಿಭಟನೆಗೆ ಇಳಿದರು. ಪ್ರತಿಭಟನೆಯ ನಂತರ ಮೆರವಣಿಗೆ ಮೂಲಕ ತೆರಳಿ ಸದರಿ ರವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೊಂದು ದೂರಿನ ಪತ್ರ ನೀಡಿದರು ಪುನಃ ಅವರವರ ಮನೆಗೆ ಅವರವರು ತೆರಳಿದರು. ಇತ್ತ CEO ಮೇಡಂ ನವರು ಎಂತದೋ ತರಬೇತಿಗೆಂದು ಹೊಸೂರಿನತ್ತ ತೆರಳಿದರು. ಆದರೆ ಅಲ್ಲಿ ನಡೆದಿದ್ದ ಅನಾಹುತ ಮತ್ತು ಎಡವಟ್ಟುಗಳು ಎಂಥವಾಗಿದ್ದವೆಂದರೆ,
ಸಂಘಟನಾ ಕಾರ್ಯದ ಜೊತೆ ಇದ್ದ ಪುಟ್ಟ ಮಾಧುರವರು ಅಂದು ಹೇಳಿದ್ದ ಮಾತು ಎಂತಹದಾಗಿತ್ತೆಂದರೆ, ಸಿಇಓ ಮೇಡಂ ರವರನ್ನು ಉದ್ದೇಶಿಸಿ ‘ಸಿಇಓ ಬಂದ್ಮೇಲೆ ಮಂಡ್ಯ ವ್ಯವಸ್ಥೆ ಹಾಳಾಯ್ತು ‘ ಎಂದಷ್ಟೇ ಹೇಳಿದ್ದರು. ಅಂತಹ ಮಾತನ್ನು ಇವರು ಸುಖಾಸುಮ್ಮನೆ ಅಶ್ಲೀಲ ಪದ ಬಳಕೆ, ಅವಹೇಳನಕಾರಿ, ಅಸಂವಿಧಾನಿಕ ಪದಗಳ ಬಳಕೆ ಎಂದೆಲ್ಲ ಬಿಂಬಿಸಿಬಿಟ್ಟಿದ್ದರು ಆ ಮೂಲಕ ಇದೆಲ್ಲಾ ಸೂಕ್ಷ್ಮವಾಗಿ ಅವಲೋಕಿಸಿದರೆ ಈ ಎಲ್ಲಾ ಸಿಬ್ಬಂದಿ ಅಧಿಕಾರಿ ವರ್ಗದವರು ತಾವಾಗೆ ಐಎಎಸ್ ಮೇಡಂ ರವರಿಗೆ ಮಸಿ ಬಳಿದರೆಂಬುದು ಮೇಲ್ನೋಟಕ್ಕೆ ಕಾಣಿಸುತ್ತೆ.
ಇನ್ನು ಮೇಡಂ ನವರ ಹಿನ್ನೆಲೆ ಮತ್ತು ಅವರ ನಡವಳಿಕೆ ನೋಡಿದರೆ ಅಹಂ ಅನ್ನೇ ಮೈವೇತ್ತು ನಿಂತವರ ಹಾಗೆ ಕಾಣಿಸುತ್ತಾರೆ. ಯಾರಿಗೂ ಡೋಂಟ್ ಕೇರ್ ಎಂದು ನಿಂತುಕೊಳ್ಳುವ ಗತ್ತು ಒಂದು ಐಎಎಸ್ ಅಧಿಕಾರಿಗೆ ಇರಲೇಬೇಕಾದರೂ ಸಮಸ್ತ ನಾಗರಿಕ ಹಕ್ಕುಗಳಲ್ಲಿ ಒಂದಾದ ಹೋರಾಟ ಪ್ರತಿಭಟನೆಗಳಂತಹ ಸೂಕ್ಷ್ಮ ಸನ್ನಿವೇಶಗಳಲ್ಲಿ ಪ್ರತಿಭಟನಾಕಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತನಾಡುವುದು ಅಧಿಕಾರಿಗಳ ಪ್ರಬುದ್ಧತೆಯನ್ನು ತೋರಿಸುತ್ತದೆ. ಆದರೆ ಇಲ್ಲಿ ಇವರು ಎಂತಹ ಎಡವಟ್ಟು ಮಾಡಿಕೊಂಡಿದ್ದಾರೆ ಎಂದರೆ ಇವರೇ ಸ್ವತಹ ಎಲ್ಲಾ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ಎತ್ತಿ ಕಟ್ಟಿ ಅಥವಾ ಪುಸಲಾಯಿಸಿ ತನ್ನ ಪರವಾಗಿ ಹೋರಾಟ ಮಾಡುವಂತೆ ಪ್ರಚೋದಿಸಿರುವುದು ಕಂಡು ಬರುತ್ತದೆ ಒಂದು ವೇಳೆ ಇದೇ ನಿಜವಾಗಿದ್ದರೆ ಇವರು ಅಧಿಕಾರ ದುರುಪಯೋಗಪಡಿಸಿಕೊಂಡಿರುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಒಂದು ವೇಳೆ ಹಾಗೆ ಮಾಡದೆ ಇದ್ದಲ್ಲಿ ಈ ಪ್ರತಿಭಟನೆಯನ್ನು ಅವರೇ ಖಂಡಿಸಿ ಸದರಿ ಅಧಿಕಾರಿ ಸಿಬ್ಬಂದಿ ವರ್ಗದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿತ್ತು. ಒಂದು ಪತ್ರಿಕಾಗೋಷ್ಠಿಯನ್ನು ನಡೆಸಿ ತಮ್ಮಿಂದ ಆದ ಈ ಅನಾಹುತಕ್ಕೆ ಕ್ಷಮೆ ಕೇಳಬೇಕಾಗಿತ್ತು. ಆದರೆ ಇದ್ಯಾವುವು ಮಾಡದೆ ಒಂದೇ ಒಂದು ಪತ್ರಿಕಾ ಹೇಳಿಕೆ ಕೂಡಾ ನೀಡದೆ ಯಾರ ಸಂಪರ್ಕಕ್ಕೂ ಸಿಗದೇ ಎಲ್ಲಿಗೋ ಹೊರಟು ಹೋದರು ಮತ್ತು ಇಂದಿನವರೆಗೂ ದೂರವಾಣಿ ಸಂಪರ್ಕಕ್ಕೂ ಕೂಡ ಸಿಗುತ್ತಿಲ್ಲ.

ಒಂದು ಕಡೆ ಸರ್ಕಾರಿ ಆದೇಶವನ್ನೇ ಧಿಕ್ಕರಿಸಿ ಅನಧಿಕೃತವಾಗಿ ನೇಮಕಗೊಂಡು ಸರ್ಕಾರದಿಂದ ವಜಾಗೊಳಿಸಲು ಆದೇಶ ಬಂದರೂ ಕದಲದೆ ಕೂತಿರುವ ಬಿಲ್ ಕಲೆಕ್ಟರ್ಗಳು , ಅಂತಹ ಆದೇಶಗಳನ್ನೆಲ್ಲ ಅಂಡಿನ ಕೆಳಗೆ ಹಾಕಿಕೊಂಡು ಮಂಡು ಬಿದ್ದಿರುವ EO ಗಳು, ಇನ್ನೊಂದು ಕಡೆ ಸರ್ಕಾರಿ ಆದೇಶಗಳನ್ನೇ ಗಾಳಿಗೆ ತೂರಿ ಸೆಡ್ಡು ಹೊಡೆಯುವoತ ಭ್ರಷ್ಟ ಪಿಡಿಒಗಳು, ಇವರನ್ನೆಲ್ಲ ಬಯಲಿಗೆಳೆಯೋಣವೆಂದು ಮಾಹಿತಿ ಮತ್ತು ಸಾಕ್ಷಾಧಾರಗಳಿಗಾಗಿ ಜಿಲ್ಲಾ ಪಂಚಾಯತ್ ಗೆ ಅಲೆದಾಡುವ ಪತ್ರಕರ್ತರ ಮೇಲೆ ಅಟ್ರಾಸಿಟಿ ದೂರನ್ನು ದಾಖಲಿಸಲು ಮುಂದಾಗುವ ಮಾನಗೆಟ್ಟ DS ಇರಲಾಗಿ ಮಂಡ್ಯ ಜಿಲ್ಲೆಗೆ ಉಳಿಗಾಲವಿದೆಯೇ?
ಪ್ರಿಯ ಓದುಗರೇ, ಮಂಡ್ಯ ಜಿಲ್ಲೆಯ ಜನತೆಯ ಬಗ್ಗೆ, ಅವರ ಸ್ವಾಭಿಮಾನದ ಬಗ್ಗೆ ತಿಳಿಯದವರು ಇಡೀ ಇಂಡಿಯಾದಲ್ಲೇ ಇರಲಿಕ್ಕಿಲ್ಲ. ಇಲ್ಲಿನವರು ಮಾಡುವ ಒಂದೊಂದು ಹೋರಾಟದ ಹಿಂದೆಯೂ ಒಂದು ಪ್ರಬಲವಾದ ಕಾರಣ ಇದ್ದೇ ಇರುತ್ತೆ ಹಾಗೆ ಈ ಹೋರಾಟವೂ ಕೂಡ ನ್ಯಾಯಯುತವಾಗಿ ಇತ್ತು ಇದನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಭಾಯಿಸಲು ಸಾಧ್ಯವಾಗದ ಮೇಡಂ ರವರು ಇದನ್ನು ಇನ್ನಷ್ಟು ಬೆಳೆಸಿಕೊಂಡು ಅವರ ಮುಖಕ್ಕೆ ಅವರೇ ಮಸಿ ಬಳಸಿಕೊಂಡಂತಾಗಿದೆ. ಪರಿಣಾಮ, ಇಡೀ ಜಿಲ್ಲೆಯಲ್ಲಿರುವುದು 233 ಗ್ರಾಮ ಪಂಚಾಯಿತಿಗಳು ಅಂದು ಯಾವುದೇ ಅನುಮತಿ ಇಲ್ಲದೆ ಯಾವುದೇ ಅನಿವಾರ್ಯವಾದಂತಹ ಪ್ರತಿಭಟನೆ ಅಥವಾ ಹೋರಾಟವಲ್ಲದ ಸಂಗತಿಗೆ ಅಷ್ಟೂ ಗ್ರಾಮ ಪಂಚಾಯಿತಿಗಳ ಪಿಡಿಓ, ಸೆಕ್ರೆಟರಿ, ಸಿಬ್ಬಂದಿ ವರ್ಗದವರು ಪಾಲ್ಗೊಂಡರೆಂದರೆ, ಅದಕ್ಕೆ ಇವರು ಕುಮ್ಮಕ್ಕು ನೀಡಿದರೆಂದರೆ, ಅಂದಿನ ಅಷ್ಟೂ ಅಧಿಕಾರಿ ಸಿಬ್ಬಂದಿ ವರ್ಗದವರ ಸಂಬಳ ಎಷ್ಟು? ಆ ನಷ್ಟ ತುಂಬಿ ಕೊಡುವವರು ಯಾರು? ಅಂದಿನ ಸೇವಾ ರಹಿತ ದಿನಕ್ಕೆ ಹೊಣೆಗಾರರು ಯಾರು? ಅಂದಿನ ನಾಗರಿಕ ಸೇವಾ ನಷ್ಟಕ್ಕೆ ಕಾರಣ ಯಾರು? ಖಂಡಿತ ಇಂತಹ ಜಿಲ್ಲೆಗೆ ಅಂತಹ ಅಧಿಕಾರಿಗಳು ಲಾಯಕ್ಕೆ ಇಲ್ಲ ಮತ್ತು ಅಂಥವರ ಅವಶ್ಯಕತೆ ಅಸಲೆ ಇಲ್ಲ. ಅದಕ್ಕೇ ಈ ಘಟನೆಗೆ ಸಂಭಂದಿಸಿ ‘ನಂದಿನಿ GO BACK’ ಎಂಬ ಹ್ಯಾಶ್ ಟ್ಯಾಗ್ ಜಿಲ್ಲೆಯಾದ್ಯಂತ ಸಾಮಾಜಿಕ ತಾಣಗಳಲ್ಲಿ ಕಾವೇರಿ ನದಿಯಂತೆ ಭೋರ್ಗರೆದು ಹರಿದಾಡುತ್ತಿದೆ. ಅಷ್ಟೇ ಅಲ್ಲದೆ ಇನ್ನಷ್ಟು ಕಾರ್ಮಿಕ ಸಂಘಟನೆಗಳು ಮತ್ತು ಸಿಪಿಐ (ಎಂ) ನಂತಹ ಹೋರಾಟ ಪಕ್ಷಗಳು ಕೈಜೋಡಿಸಿ ಆ ಹ್ಯಾಶ್ ಟ್ಯಾಗ್ ಗೆ ಬೆಂಬಲ ನೀಡುತ್ತಿವೆ ಇವರ ಹೋರಾಟಕ್ಕೆ ಅವರು WENT BACK ಆಗ್ತಾರಾ……?



