Headlines

ರಾಮ ಮಂದಿರ ಬ್ಲಾಸ್ಟ್‌ಗೆ ಪಾಕ್ ಜೊತೆ ಸ್ಕೆಚ್: ಹರಿಹರದಲ್ಲಿ ಪೇಂಟರ್ ಸೋಗಿನಲ್ಲಿದ್ದ ಉಗ್ರ ಸುಹೇಲ್ ಲಾಕ್!

ದಾವಣಗೆರೆಯ ಹರಿಹರದಲ್ಲಿ ಸಿಕ್ಕಿಬಿದ್ದ ಶಂಕಿತ ಉಗ್ರ ಸುಹೇಲ್ ಇಡೀ ದೇಶದ ಭದ್ರತಾ ಪಡೆಗಳ ನಿದ್ದೆಗೆಡಿಸಿದ್ದಾನೆ. ಈತನ ಮೊಬೈಲ್ ಅನ್‌ಲಾಕ್ ಮಾಡ್ತಿದ್ದಂತೆ ಪೊಲೀಸರೇ ಬೆಚ್ಚಿಬಿದ್ದಿದ್ದು, ಅಯೋಧ್ಯೆಯ ಭವ್ಯ ರಾಮ ಮಂದಿರವನ್ನು ಬಾಂಬ್ ಇಟ್ಟು ಉಡಾಯಿಸಲು ಸ್ಕೆಚ್ ಹಾಕಿದ್ದ ಭಯಾನಕ ಸತ್ಯ ಎಫ್‌ಐಆರ್‌ನಲ್ಲಿ ರಿವೀಲ್ ಆಗಿದೆ.

​ಪಾಕಿಸ್ತಾನದ ಹ್ಯಾಂಡ್ಲರ್‌ಗಳ ಜೊತೆ ನಿರಂತರ ಟಚ್‌ನಲ್ಲಿದ್ದ ಸುಹೇಲ್, ತನ್ನ ವಾಟ್ಸಾಪ್‌ನ ‘ಲಾಕ್‌ಡ್ ಚಾಟ್’ನಲ್ಲಿ ಪಾಕ್ ಮೂಲದ ನಂಬರ್ ಒಂದನ್ನು ‘ರಾಣಾ ಜೀ’ ಅಂತ ಸೇವ್ ಮಾಡಿಕೊಂಡಿದ್ದ. ಇವರಿಬ್ಬರ ನಡುವೆ ನಡೆದಿರೋ ಉರ್ದು ಮಿಶ್ರಿತ ಹಿಂದಿ ಆಡಿಯೋ ಕ್ಲಿಪ್‌ಗಳು ಈಗ ಪೊಲೀಸರ ಕೈಸೇರಿವೆ. ಅದರಲ್ಲಿ “ನಾನು ರಾಮ ಮಂದಿರವನ್ನು ಬಾಂಬ್‌ನಿಂದ ಸ್ಫೋಟಿಸಲು ಬಯಸುತ್ತೇನೆ” ಅಂತ ಸುಹೇಲ್ ಖುದ್ದಾಗಿ ಹೇಳಿರೋದು ಆತಂಕ ಹೆಚ್ಚಿಸಿದೆ. ಶಸ್ತ್ರಾಸ್ತ್ರಗಳು ಮತ್ತು ಉಗ್ರ ಚಟುವಟಿಕೆಗಳಿರೋ ಗ್ರೂಪ್‌ಗಳನ್ನು ಫಾಲೋ ಮಾಡ್ತಿದ್ದ ಈತ, ಕೇವಲ 15 ದಿನಗಳ ಹಿಂದಷ್ಟೇ ಹರಿಹರದ ಕಾರ್ಖಾನೆಯೊಂದಕ್ಕೆ ಕೆಲಸಕ್ಕೆ ಸೇರಿಕೊಂಡು ಬಾಡಿಗೆ ಮನೆಯಲ್ಲಿದ್ದ. ಈತನ ಅನುಮಾನಾಸ್ಪದ ಮೂವ್‌ಮೆಂಟ್ ನೋಡಿ ದಾವಣಗೆರೆ ಎಸ್ಪಿ ಡಾ. ಹೆಚ್.ಟಿ. ಶೇಖರ್ ನೇತೃತ್ವದ ಟೀಮ್ ಕಾರ್ಯಾಚರಣೆ ನಡೆಸಿ ಹೆಡೆಮುರಿ ಕಟ್ಟಿದೆ. ಸದ್ಯ ಭಾರತೀಯ ನ್ಯಾಯ ಸಂಹಿತೆಯ (BNS) ಕಠಿಣ ಸೆಕ್ಷನ್‌ಗಳಡಿ ಕೇಸ್ ದಾಖಲಾಗಿದ್ದು, ಈ ಇಂಟರ್ನ್ಯಾಷನಲ್ ಲಿಂಕ್ ಹಿಂದೆ ಇನ್ಯಾರೆಲ್ಲಾ ಇದ್ದಾರೆ ಅನ್ನೋದನ್ನ ತಿಳಿಯಲು ಕಸ್ಟಡಿಗೆ ಪಡೆದು ತೀವ್ರ ಗ್ರಿಲ್ ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!