ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾಗಿ ಹಿರಿಯ ವಕೀಲ ಪಿ.ಪಿ. ಹೆಗ್ಡೆ ಅವರು ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ. ಪರಿಷತ್ತಿನ ಒಟ್ಟು 23 ಸದಸ್ಯ ಸ್ಥಾನಗಳಿಗಾಗಿ ಮಾರ್ಚ್ 11 ರಂದು ಚುನಾವಣೆ ನಡೆದಿತ್ತು. ಮಾರ್ಚ್ 16 ರಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜೂನ್ 17ರ ಬುಧವಾರ ಹೊರಬಿದ್ದ ಫಲಿತಾಂಶದ ಅನ್ವಯ ಪಿ.ಪಿ. ಹೆಗ್ಡೆ ಅವರು ಭರ್ಜರಿ ಜಯ ದಾಖಲಿಸಿದ್ದಾರೆ. ಈ ಗೆಲುವಿನ ಮೂಲಕ ಸತತ ನಾಲ್ಕನೇ ಬಾರಿಗೆ ಅವರು ವಕೀಲರ ಪರಿಷತ್ತನ್ನು ಪ್ರವೇಶಿಸಿದಂತಾಗಿದೆ. ಹಿರಿಯ ನ್ಯಾಯವಾದಿಯಾಗಿರುವ ಪಿ.ಪಿ. ಹೆಗ್ಡೆ ಅವರು 2005ರಿಂದಲೂ ಸತತವಾಗಿ ರಾಜ್ಯ ವಕೀಲರ ಪರಿಷತ್ತಿನಲ್ಲಿ ವಕೀಲರ ಸಮುದಾಯವನ್ನು ಸಕ್ರಿಯವಾಗಿ ಪ್ರತಿನಿಧಿಸುತ್ತಾ ಬಂದಿದ್ದಾರೆ. ಸದ್ಯದ ಫಲಿತಾಂಶವು ವಕೀಲರ ವಲಯದಲ್ಲಿ ಅವರಿಗಿರುವ ಜನಪ್ರಿಯತೆ ಮತ್ತು ಬಲಿಷ್ಠ ನಾಯಕತ್ವಕ್ಕೆ ಸಾಕ್ಷಿಯಾಗಿದೆ.
ರಾಜ್ಯ ವಕೀಲರ ಪರಿಷತ್ತಿಗೆ ಪಿ.ಪಿ. ಹೆಗ್ಡೆ ಸತತ ನಾಲ್ಕನೇ ಬಾರಿಗೆ ಆಯ್ಕೆ

