ಕನ್ನಂಬಾಡಿ ಅಣೆಕಟ್ಟೆಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನನೇ?
ವರದಿ: ಶ್ರೀಕಂಠ ಬಾಳಗಂಚಿ ಅಂದಿನ ಮೈಸೂರು ಸಂಸ್ಥಾನದ ನಾಡಿನ ಜನರ ಕುಡಿಯುವ ನೀರಿಗಾಗಿ, ಬರಗಾಲದಿಂದ ಪೀಡಿತರಾಗಿದ್ದ ಅಲ್ಲಿನ ರೈತರ ಕೃಷಿ ಚಟುವಟಿಕೆಗಳಿಗಾಗಿ, ಗಗನ ಚುಕ್ಕಿ ಬಳಿಯಲ್ಲಿ ಕಟ್ಟಲಾಗಿದ್ದ ಶಿಂಶಾ ಜಲ ವಿದ್ಯುತ್ ಯೋಜನೆಗೆ ನಿರಂತರವಾಗಿ ನೀರನ್ನು ಕೊಡುವ ಸಲುವಾಗಿ ಮೈಸೂರಿನ ಸಮೀಪ ಕಾವೇರಿ ನದಿಯ ಉಪನದಿಗಳಾದ ಹೇಮಾವತಿ ಮತ್ತು ಲಕ್ಷ್ಮಣ ತೀರ್ಥಗಳ ಸಂಗಮದ ಬಳಿಯ ಬೆಳಗೊಳದ ಬಳಿ ಕಟ್ಟಲಾಗಿರುವ ಕನ್ನಂಬಾಡಿ ಅಣೆಕಟ್ಟೆ ಅರ್ಥಾತ್ ಕೃಷ್ಣರಾಜಸಾಗರ (KRS) ಅಣೆಕಟ್ಟು ಎಂದೂ ಕರೆಯುವ ಈ ಜನೋಪಯೋಗಿ ಕಾರ್ಯಕ್ಕೆ 100 ವರ್ಷಗಳ ನಂತರವೂ, ನೈಜ…

