Headlines

newsfilemagazine

ನನ್ನ ಇಲಾಖೆಯಲ್ಲಿ ಅನುದಾನ ಬಿಡುಗಡೆಯಾಗದ ಬಗ್ಗೆ ಸುರ್ಜೇವಾಲ ಚರ್ಚಿಸಿದರು: ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು, ಜುಲೈ 15: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾರನ್ನು ಭೇಟಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹೀಗೆ ಮಾತಾಡಿದರು: “ನಿರ್ದಿಷ್ಟವಾಗಿ ಅವರೇನೂ ತನಗೆ ಹೇಳಲಿಲ್ಲ, ತಮ್ಮ ಇಲಾಖೆಯಿಂದ ಏನೆಲ್ಲ ಕೆಲಸಗಳಾಗಿವೆ ಅಂತ ಅವರಿಗೆ ಹೇಳಿದ್ದೇನೆ, ಕ್ಷೇತ್ರಾವಾರು ಅನುದಾನಗಳನ್ನು ಬಿಡುಗಡೆ ಮಾಡಿರುವ ಬಗ್ಗೆಯೂ ಅವರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು. ಕೆಲ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕೆಲಸವಾಗಿಲ್ಲ, ಅನುದಾನ ಬಿಡುಗಡೆ ಮಾಡಿಲ್ಲ ಅಂತ ಸುರ್ಜೇವಾಲಾ ಅವರಿಗೆ ಹೇಳಿದ್ದಾರೆ, ಅದರ ಬಗ್ಗೆ ಚರ್ಚೆಯಾಯಿತು,…

Read More

ಸುರ್ಜೇವಾಲ ತಮ್ಮ ಪಕ್ಷದ ಶಾಸಕರನ್ನು ಬಂದೋಬಸ್ತ್‌ ಮಾಡಿಕೊಳ್ಳಲು ಪ್ರತ್ಯೇಕ ಸಮಾಲೋಚನೆ

ಬೆಂಗಳೂರು,ಜು.14- ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಇಂದು ಬೆಂಗಳೂರಿಗೆ ಆಗಮಿಸಿ ಶಾಸಕರು ಹಾಗೂ ಸಚಿವರ ಜೊತೆ ಮೂರನೇ ಸುತ್ತಿನ ಸಮಾಲೋಚನಾ ಸಭೆಯನ್ನು ಮುಂದುವರೆಸಿದ್ದಾರೆ.ಈಗಾಗಲೇ ಎರಡು ಹಂತದಲ್ಲಿ ಶಾಸಕರ ಜೊತೆ ಪ್ರತ್ಯೇಕ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಿಸಿರುವ ಸುರ್ಜೇವಾಲ, ಮೂರನೇ ಹಂತದಲ್ಲಿ ಹದಿನೈದಕ್ಕೂ ಹೆಚ್ಚು ಮಂದಿ ಶಾಸಕರು ಹಾಗೂ ಮೊದಲ ದಿನ 10ಕ್ಕೂ ಹೆಚ್ಚು ಮಂದಿ ಸಚಿವರ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆ. ಈ ಮೊದಲು ಶಾಸಕರ ಜೊತೆಗಿನ ಸಮಾಲೋಚನೆ ವೇಳೆ ಬಹಳಷ್ಟು ಮಂದಿ ತಮ್ಮ…

Read More

ಶಕ್ತಿ ಯೋಜನೆಗೆ 12 ಸಾವಿರದ 800 ಕೋಟಿ ಅನುದಾನ: ಪಿ. ರವಿಕುಮಾರ್

ಮಂಡ್ಯ.ಜು.14:- ರಾಜ್ಯಾದ್ಯಂತ ಪಂಚ ಗ್ಯಾರಂಟಿಗಳು ಎರಡೂ ವರ್ಷಗಳನ್ನು ಪೂರೈಸಿದೆ. ಶಕ್ತಿ ಯೋಜನೆ ಒಂದಕ್ಕೆ 12 ಸಾವಿರದ 800 ಕೋಟಿ ಅನುದಾನವನ್ನು ನೀಡಲಾಗಿದೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್ ಅವರು ತಿಳಿಸಿದರು. ಇಂದು (ಜು.14) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರದ ಎರಡು ವರ್ಷಗಳ ಅಭಿವೃದ್ದಿ ಕಾರ್ಯಕ್ರಮಗಳ ಸಾಧನೆ ಹಾಗೂ ಪಂಚ ಗ್ಯಾರಂಟಿ ಯೋಜನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಶಕ್ತಿ ಯೋಜನೆ…

Read More

ನಾಳೆ ಮೇರು ನಟಿ ಬಿ. ಸರೋಜಾದೇವಿ ಅಂತ್ಯಸಂಸ್ಕಾರ

ಬೆಂಗಳೂರು, ಜುಲೈ 14: ಕನ್ನಡ ಚಿತ್ರರಂಗದ ಮೇರು ನಟಿ ಬಿ.ಸರೋಜಾದೇವಿ ಅವರ ಅಂತ್ಯಸಂಸ್ಕಾರ ನಾಳೆ (ಜುಲೈ 15)ರಂದು ಮಂಡ್ಯ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದಶಾವರದಲ್ಲಿ ನೆರವೇರಲಿದೆ. ಸೋಮವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದ ಸರೋಜಾದೇವಿ ಅವರ ಅಂತಿಮ ದರ್ಶನಕ್ಕೆ ಮಂಗಳವಾರ ಬೆಳಿಗ್ಗೆ 11.30ರ ವರೆಗೆ ಏರ್ಪಡಿಸಲಾಗಿದ್ದು, ನಂತರ ದಶಾವರದಲ್ಲಿ ತಾಯಿ ಸಮಾಧಿ ಪಕ್ಕದಲ್ಲಿ ನೆರವೇರಲಿದೆ. ಸರೋಜಾದೇವಿ ಪುತ್ರ ಗೌತಮ್ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದು, ನಾಳೆ ಬೆಳಿಗ್ಗೆ 11.30ರ ನಂತರ ಪಾರ್ಥಿವ ಶರೀರವನ್ನು ಚನ್ನಪಟ್ಟಣಕ್ಕೆ ಕರೆದೊಯ್ಯಲಾಗುವುದು. ಅಲ್ಲಿ ದಶಾವರದ…

Read More

ರಾಜಕಾರಣಿಗಳು 75 ವರ್ಷಕ್ಕೆ ನಿವೃತ್ತಿಯಾಗಬೇಕೆಂದ ಆರೆಸ್ಸೆಸ್ ಮುಖ್ಯಸ್ಥ!

ದೇಶದಲ್ಲಿ ಎಲ್ಲಾ ಪ್ರಮುಖ ಹುದ್ದೆಗಳಲ್ಲಿರುವ ರಾಜಕೀಯ ನಾಯಕರು 75 ವರ್ಷ ತುಂಬಿದ ನಂತರ ಸ್ವಯಂ ನಿವೃತ್ತಿಯಾಗಿ ಇತರರಿಗೆ ಅವಕಾಶ ನೀಡಬೇಕು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಮತ್ತೊಮ್ಮೆ ಹೇಳಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು ಹೀಗೆ ಭಾಷಣ ಮಾಡಿದರು: “ಯಾರಾದರೂ ನಿಮಗೆ 75 ವರ್ಷ ತುಂಬಿದ್ದಕ್ಕೆ ಅಭಿನಂದನೆ ಸಲ್ಲಿಸಿದರೆ, ನೀವು ಕೆಲಸ ಮಾಡುವುದನ್ನು ನಿಲ್ಲಿಸಬೇಕು ಎಂದರ್ಥ. ಇತರರಿಗೆ ಕೆಲಸ ಮಾಡಲು ಅವಕಾಶ ನೀಡಬೇಕು” ಎಂದು ಒತ್ತಿ ಹೇಳಿದ್ದಾರೆ. ಮೋಹನ್…

Read More

ರಾಜಕೀಯ ಕುತೂಹಲ ಕೆರಳಿಸಿದ ಡಿಕೆಶಿ ದೆಹಲಿ ಪ್ರವಾಸ!

ಬೆಂಗಳೂರು, ಜುಲೈ 14: ರಾಜ್ಯ ಕಾಂಗ್ರೆಸ್ ಸರ್ಕಾರದಪವರ್ ಶೇರಿಂಗ್ ಫೈಟ್​ನಲ್ಲಿ ದಿನಕ್ಕೊಂದು ಟರ್ನ್. ಕ್ಷಣಕ್ಕೊಂದು ಟ್ವಿಸ್ಟ್ ಕಾಣಸಿಗ್ತಿದೆ. ಸಿಎಂ ಸಿದ್ದರಾಮಯ್ಯ ಇದೀಗ 5 ವರ್ಷದ ಜಪ ಮಾಡ್ತಿದ್ರೆ, ಡಿಸಿಎಂ-ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೌನಕ್ಕೆ ಜಾರಿದ್ರು. ಈ ಬೆನ್ನಲ್ಲೇ ಶಿರಡಿ ಸಾಯಿಬಾಬಾನ ದರ್ಶನಕ್ಕೆ ಮುಂದಾಗಿದ್ರು. ಈ ಹೊತ್ತಲ್ಲೇ ಮತ್ತೆ ಡಿಕೆಶಿ ದೆಹಲಿಗೆ ಹಾರಿದ್ದಾರೆ. ಪತ್ನಿ ಸಮೇತ ಶಿರಡಿ ಸಾಯಿಬಾಬಾ ದರ್ಶನ ಮಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಶ್ರದ್ಧೆ ನಂಬಿಕೆ ಮತ್ತು ತಾಳ್ಮೆ ಇದ್ದರೆ ಎಲ್ಲವೂ ಸಾಧ್ಯ ಅಂತ ಸಾಮಾಜಿಕ…

Read More

ಬಿಹಾರ ಅಸೆಂಬ್ಲಿ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಗೆದ್ದರೆ ಮಾತ್ರ ಸಿದ್ದರಾಮಯ್ಯ ಕುರ್ಚಿ ಭದ್ರ!

ನವದೆಹಲಿ, ಜುಲೈ 13: ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಕಾಂಗ್ರೆಸ್‌‍ ಹೈಕಮಾಂಡ್‌ನ ಬಲಾ-ಬಲವನ್ನು ಪರೀಕ್ಷೆ ಒಳಪಡಿಸಲಿದ್ದು, ಸಹಜವಾಗಿಯೇ ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರುವ ನಿರೀಕ್ಷೆಗಳಿವೆ. ಈ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸುರ್ಜೇವಾಲ ನಡೆಸುತ್ತಿರುವ ಸರಣಿ ಸಭೆಗಳು ತೀವ್ರ ಕುತೂಹಲ ಕೆರಳಿಸಿವೆ. ಸಚಿವ ಸಂಪುಟ ಪುನರ್‌ ರಚನೆ, ನಿಗಮ ಮಂಡಳಿಗಳ ನೇಮಕಾತಿ ಸೇರಿದಂತೆ ಹಲವಾರು ವಿಚಾರಗಳಲ್ಲಿ ಈವರೆಗೂ ಹೈಕಮಾಂಡ್‌ನ ಪ್ರಭಾವ ಎದ್ದುಕಾಣುತ್ತಿದೆ. ಒಂದು ವೇಳೆ ಬಿಹಾರದ ಚುನಾವಣೆಯಲ್ಲಿ ಕಾಂಗ್ರೆಸ್‌‍ ಅಧಿಕಾರಕ್ಕೆ ಬಂದಿದ್ದಾದರೆ ಸಿದ್ದರಾಮಯ್ಯ ಅವರು ಹೆಚ್ಚು…

Read More

ಹಮಾಸ್ ಜೊತೆ ಕದನ ವಿರಾಮ ಮಾತುಕತೆ ವಿಫಲ: ಗಾಜಾ ಮೇಲೆ ಇಸ್ರೇಲ್ ದಾಳಿ,110 ಸಾವು

ಹಮಾಸ್ ಭಯೋತ್ಪಾದಕರೊಂದಿಗಿನ ಗಾಜಾ ಕದನ ವಿರಾಮ ಮಾತುಕತೆ ವಿಫಲವಾದ ಕಾರಣ ಇಸ್ರೇಲ್ ಆಕ್ರೋಶಗೊಂಡಿದೆ. ಇಸ್ರೇಲ್ ಸೇನೆಯು ಗಾಜಾದ ಮೇಲೆ ವಿನಾಶಕಾರಿ ದಾಳಿಯನ್ನು ಪ್ರಾರಂಭಿಸಿದೆ. ಶನಿವಾರ ಗಾಜಾದಲ್ಲಿ ಇಸ್ರೇಲಿ ದಾಳಿಯಲ್ಲಿ ಕನಿಷ್ಠ 110 ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ವೈದ್ಯಕೀಯ ಮೂಲಗಳ ವರದಿ ಮಾಹಿತಿ ನೀಡಿದೆ. ಅದರಲ್ಲಿ 34 ಜನರು ದಕ್ಷಿಣ ರಫಾದಲ್ಲಿ ಸಾವನ್ನಪ್ಪಿದ್ದಾರೆ. ಅವರೆಲ್ಲರೂ ಗಾಜಾ ಹ್ಯುಮನಿಟೇರಿಯನ್ ಫೌಂಡೇಷನ್ ಹೊರಗೆ ಆಹಾರ ಸಹಾಯಕ್ಕಾಗಿ ಕಾಯುತ್ತಿದ್ದರು. ಇಸ್ರೇಲ್ ಸೈನ್ಯವು ಯಾವುದೇ ಎಚ್ಚರಿಕೆ ನೀಡದೆ ಜನರ ಮೇಲೆ ಗುಂಡು ಹಾರಿಸಲು…

Read More

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿದ ಎಐಸಿಸಿ ಅಧ್ಯಕ್ಷ!

ನವದೆಹಲಿ, ಜುಲೈ 12: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯದ ಚೆಸ್ ಗೇಮ್ ಭರ್ಜರಿಯಾಗಿ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲೇ ಕೂತು ‘ನಾನೇ 5 ವರ್ಷ ಸಿಎಂ’ ಎಂಬ ಸಂದೇಶವನ್ನು ರಾಜಾರೋಷವಾಗಿ ಸಾರಿದರು. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಗೆ ಸಚಿವರು ಪಟ್ಟು ಹಿಡಿದಿದ್ದಾರೆ. ಇದನ್ನೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಮುಂದೆ ಹೇಳಿದ್ದಾರೆ. ಒಬ್ಬರಿಗೆ ಒಂದೇ ಹುದ್ದೆ ನಿಯಮ ಇದ್ದು ಅದನ್ನು ಅನುಷ್ಠಾನಕ್ಕೆ ತನ್ನಿ ಎಂದು ಸಚಿವರು ಆಗ್ರಹಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ….

Read More

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಮರಣಮೃದಂಗ: ನ್ಯಾಯಾಂಗ ತನಿಖಾ ವರದಿಯಲ್ಲಿ ಸತ್ಯ ಬಯಲು!

ಬೆಂಗಳೂರು, ಜುಲೈ 12: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಬಾರಿ 2025ನೇ ವರ್ಷದ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆ ವೇಳೆ ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಈ‌ ದುರಂತದ ತನಿಖಾ ವರದಿ ಬಹಿರಂಗವಾಗಿದೆ. ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ. ತನಿಖಾ ವರದಿಯಲ್ಲಿ ಸ್ಫೋಟಕ ಅಂಶಗಳು ಬಯಲಾಗಿವೆ. ಕಾಲ್ತುಳಿತ ದುರಂತಕ್ಕೆ ಆರ್​​ಸಿಬಿ, ಡಿಎನ್​ಎ ಮತ್ತು ಕೆಎಸ್​ಸಿಎ ಕಾರಣ ಎಂದು…

Read More
error: Content is protected !!