ರಮೇಶ್ ಬಂಡಿಸಿದ್ದೇಗೌಡ್ರ ಅಧ್ಯಕ್ಷತೆಯಲ್ಲಿ ಭಾರಿ ಭ್ರಷ್ಟಾಚಾರವಂತೆ..!?
ಬೂದನೂರು ಪಂಚಾಯತ್ ‘ಪವರ್’ ಹಗರಣ: ಜನರ ತೆರಿಗೆ ಹಣದಲ್ಲಿ ಅಧಿಕಾರಿಗಳ ಅಕ್ರಮಕ್ಕೆ ದಂಡ! ಮಂಡ್ಯ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಸಾರ್ವಜನಿಕರ ಹಣ ‘ದೋಚಲು’ ಭ್ರಷ್ಟ ಅಧಿಕಾರಿಗಳು ಹೊಸ ದಾರಿ ಕಂಡುಕೊಂಡಿದ್ದಾರೆ!ಅಕ್ರಮವಾಗಿ ವಿದ್ಯುತ್ ಕಳ್ಳತನ ಮಾಡುವುದು, ಸಿಕ್ಕಿಬಿದ್ದಾಗ ಲಕ್ಷಾಂತರ ರೂಪಾಯಿ ದಂಡವನ್ನು ಜನರ ತೆರಿಗೆ ಹಣದಲ್ಲೇ ಕಟ್ಟುವುದು. ಇಷ್ಟೇ ಆಗಿದ್ದರೆ ಇದು ಕೇವಲ ಆರ್ಥಿಕ ಹಗರಣವಾಗುತ್ತಿತ್ತು. ಆದರೆ, ಈ ಅಕ್ರಮವನ್ನು ಪ್ರಶ್ನಿಸಿದ ಹೋರಾಟಗಾರರಿಗೆ ‘ಸುಳ್ಳು ದೂರು ದಾಖಲಿಸುವ ಬೆದರಿಕೆ’ ಹಾಕುವ ಮೂಲಕ ಬೂದನೂರು ಪಂಚಾಯತ್ ಆಡಳಿತ ಮಂಡಳಿ ಈಗ…

