ಹಾಸನ ಬಳಿ ಟ್ರಕ್ ಹರಿದು ದುರಂತ: ಸಾವಿನ ಸಂಖ್ಯೆ 10 ಕ್ಕೆ ಏರಿಕೆ!
ಹಾಸನ, ಸೆ.13: ಹಾಸನ ಜಿಲ್ಲೆಯ ಮೊಸಳೆ ಹೊಸಹಳ್ಳಿ ಗ್ರಾಮದ ಬಳಿ ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಟ್ರಕ್ ಹರಿದು ನಡೆದಿದ್ದ ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ. ಇಂದು ಶನಿವಾರ ಈ ದುರಂತದಲ್ಲಿ ಬೆಳಿಗ್ಗೆಯವರೆಗೂ 9 ಮಂದಿ ಸಾವನ್ನಪ್ಪಿದ್ದರು.ಇದೇ ದುರಂತದಲ್ಲಿ ಹಾಸನ ತಾಲ್ಲೂಕಿನ ಶಿವಯ್ಯನ ಕೊಪ್ಪಲು ಗ್ರಾಮದ ಯುವಕ 26 ವರ್ಷದ ಚಂದನ್ ಗಂಭೀರ ಸ್ಥಿತಿಯಲ್ಲಿ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ. ದುರಾದೃಷ್ಟವಶಾತ್ ಟ್ರಕ್ ಹರಿದಿದ್ದರಿಂದ ಚಂದನ್ ಬ್ರೇನ್ ಡೆಡ್ ಸ್ಥಿತಿಯಲ್ಲಿತ್ತು. ಹೀಗಾಗಿ ಚಂದನ್ ನನ್ನು…

