Headlines

ಮಂಡ್ಯ : ಹಳೆ ಕಟ್ಟಡದ ಕಬ್ಬಿಣ ನುಂಗಿದ ಆರೋಪಿಗೆ ‘ಸರ್ವೋತ್ತಮ ಸೇವಾ ಪ್ರಶಸ್ತಿ’ ಭಾಗ್ಯ…!?

ಜಿಲ್ಲಾ ಪಂಚಾಯಿತಿಯಲ್ಲಿ ಕಳ್ಳತನವಾದ ಸಾವಿರಾರು ಕೆಜಿ ಕಬ್ಬಿಣದ ಕಳ್ಳತನದ ಆರೋಪಿ ಇದೀಗ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನ..!? ‘ಶಹಭಾಷ್’ ಮಂಡ್ಯ….!
ಜಿಲ್ಲಾಡಳಿತಕ್ಕೆ ಇಂತಹ ವಿಚಾರದಲ್ಲಿ ಅದೇನು ಜಾಣ ಕುರುಡೋ ಅಥವಾ ಭ್ರಷ್ಟರಿಗೆ ಮಣೆ ಹಾಕುವ ಮನಸ್ಥಿತಿಯೋ..!? ಯಾವುದು ತಿಳಿಯದಾಗಿದೆ ಅಥವಾ ಮಂಡ್ಯ ಜಿಲ್ಲೆಯಲ್ಲಿ ಪ್ರಶಸ್ತಿಯು ಮಾರಾಟವಾಗಿದೆಯೇ..! ಎಂಬ ಪ್ರಶ್ನೆ ಕಾಡುತ್ತಿದೆ.

ಸದ್ಯಕ್ಕೆ ಡಾ. ಶಿವಲಿಂಗಯ್ಯ ಎಂಬ ವ್ಯಕ್ತಿ ಮೂಲತಹ ಪಶು ಸಂಗೋಪನಾ ಇಲಾಖೆಗೆ ಸಂಬಂಧ ಪಟ್ಟವರು, ಮಂಡ್ಯ ಜಿಲ್ಲೆಯಲ್ಲಿ ಕೆಲಸ ಮಾಡಲು ಅಧಿಕಾರಿಗಳಿಗೆ ಬರವೇನೋ… ಎಂಬಂತೆ ಜಿಲ್ಲಾ ಪಂಚಾಯಿತಿ ಡಿಎಸ್-1(ಉಪಕಾರ್ಯದರ್ಶಿ-1) ಹುದ್ದೆ ಖಾಲಿಯಾಗಿ ಸರಿಸುಮಾರು ಒಂದು ವರ್ಷವಾಗಿದೆ ಆ ಜಾಗದಲ್ಲಿ ಇದ್ದ ಧನರಾಜ್ ಬೋರಳೆ ಎಂಬ ವ್ಯಕ್ತಿ ಆರೋಗ್ಯ ಸರಿಯಿಲ್ಲ ಎಂಬ ಕಾರಣಕ್ಕೆ ಕಳೆದ ಒಂದು ವರ್ಷದಿಂದ ಕಚೇರಿಗೆ ಬರುತ್ತಿಲ್ಲ ಎಂಬ ಸುದ್ದಿ, ಆದರೆ ಆ ಜಾಗಕ್ಕೆ ಅಧಿಕೃತವಾಗಿ ಬಂದವರೇ ಈ ಡಾ||ಶಿವಲಿಂಗಯ್ಯ ಈ ಮಹಾಪ್ರಚಂಡ ಅದಾಗಲೇ ಶ್ರೀರಂಗಪಟ್ಟಣದ ಉದ್ದಕ್ಕೂ ತಿಂದುಂಡು, ದುಂಡಗಾದವ. ಈ ಹಿಂದೆ ಶ್ರೀರಂಗಪಟ್ಟಣ ಪ್ರಭಾರಿ ತಾಲೂಕು ಪಂಚಾಯಿತಿ ಅಧಿಕಾರಿಯಾಗಿದ್ದಾಗ ಸಿಕ್ಕ 15 ದಿನದಲ್ಲಿ ತನ್ನ ಕರಾಮತ್ತನ್ನು ಇಡಿ ತಾಲೂಕಿಗೆ ಪಸರಿಸಿದ ಮಹಾಪ್ರಚಂಡ, ಹೀಗಿರುವಾಗ ಸಿಕ್ಕಸಿಕ್ಕ ಅಕ್ರಮ ಲೇಔಟ್ ಗಳಿಗೆ ಅನುಮೋದನೆ ನೀಡಿ ಕೊಳ್ಳೆ ಹೊಡೆದು ಮತ್ತೆ ತನ್ನ ಮೂಲ ಕಚೇರಿಗೆ ಹೋಗಿ ಕುಳಿತುಬಿಟ್ಟ. ಇದೀಗ ಮತ್ತೊಮ್ಮೆ ಅವಕಾಶ ಸಿಕ್ಕರೆ ಬಿಟ್ಟಾನೇ..? ಮತ್ತೊಮ್ಮೆ ಮೇಯಲು ಶುರುವಿಟ್ಟುಕೊಂಡಿದ್ದಾನೆ.!

ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೃಷಿ ಇಲಾಖೆಗೆ ಸಂಬಂಧಿಸಿದ ಹಳೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡವು ನಿರ್ಮಾಣ ಮಾಡಿರುತ್ತಾರೆ. ಆ ಕಟ್ಟಡದ ಹಳೆಯ ವಸ್ತುಗಳನ್ನು ಬಿಡದೆ ಗುಜರಿಗೆ ಹಾಕಿ, ಹಣ ನುಂಗಲು ಪ್ರಯತ್ನಿಸಿರುವ ಈ ಭೂಪತಿ ಸರಿಸುಮಾರು 60 ಟನ್ ಗಳಷ್ಟಿದ್ದ ಕಬ್ಬಿಣ, ಕಿಟಕಿ, ಬಾಗಿಲು ಇನ್ನಿತರ ಸಾಮಗ್ರಿಗಳು ಇತ್ತೆಂಬ ಮಾಹಿತಿ, ಆದರೆ ಆ ಸಾಮಗ್ರಿಗಳನ್ನು ಯಾವುದೇ ಟೆಂಡರ್ ಮಾಡದೆ ಸದ್ದಿಲ್ಲದೆ ಒಂದಷ್ಟನ್ನು ಗುಜರಿಗೆ ಹಾಕಿ ನುಂಗಿ ನೀರು ಕುಡಿಯಲು ಹಂತ ಹಂತವಾಗಿ ಸ್ಕೆಚ್ ರೂಪಿಸಿ, ಒಂದಷ್ಟನ್ನು ಅದಾಗಲೇ ಗುಜರಿ ಸೇರಿಸಿದ್ದ, ಒಂದಷ್ಟು ಸಾಮಾಜಿಕ ಕಾರ್ಯಕರ್ತರು ಅಲ್ಲಿನ ವಿಚಾರವನ್ನು ತಿಳಿದು ಆರ್ ಟಿ ಐ ಮುಖಾಂತರ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಲು ಹೋದಾಗ, ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿಕೊಂಡ ಎಂಬಂತೆ ಬೆದರಿದ ಈತ ಗುಜರಿಯವರ ಹತ್ತಿರ ಹಣವನ್ನು ಪಡೆದುಕೊಂಡಿಲ್ಲವಂತೆ, ಕಾನೂನಿನ ಪ್ರಕಾರ ಟೆಂಡರ್ ಮಾಡದೆ ಸರ್ಕಾರಿ ಆಸ್ತಿಯನ್ನು ಗುಜರಿಗೆ ಕಳಿಸಿದರೆ ಕಳ್ಳತನದ ಆರೋಪ ಯಾರ ಮೇಲೆ ಹೊರಿಸಬೇಕು..?
ಅಂತಹ ಆರೋಪ ಹೊತ್ತಿರುವ ವ್ಯಕ್ತಿ ಇದೀಗ ಜಿಲ್ಲಾಡಳಿತ ನೀಡುವ “ಸರ್ವೋತ್ತಮ ಸೇವಾ ಪ್ರಶಸ್ತಿ”ಗೆ ಭಾಜನರಂತೆ..!

ಇದೆಂತ ವಿಪರ್ಯಾಸ ಬಹುಶಃ ಅಲ್ಲಿನ ಜನ ಆಡಿಕೊಳ್ಳುತ್ತಿರುವುದು ಭ್ರಷ್ಟರ ಸರ್ವೋತ್ತಮ ಎಂಬ ಪ್ರಶಸ್ತಿ ಅಥವಾ ಮಹಾಪ್ರಚಂಡ ಕಳ್ಳ ಎಂಬ ಪ್ರಶಸ್ತಿ ಏನಾದರೂ ಇದ್ದಿದ್ದರೆ ಈತನಿಗೆ ಕೊಡಬಹುದಿತ್ತೇನೋ..? ಎಂಬಂತೆ ಕುಹಕವಾಡುತ್ತಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಗೌರವವನ್ನು ಉಳಿಸಿಕೊಳ್ಳುವ ಕಡೆಗೆ ತಮ್ಮ ನಡೆಯನ್ನು ಬದಲಿಸಿಕೊಳ್ಳಲಿ ಎಂಬುದಷ್ಟೇ ನಮ್ಮ ಆಶಯ.

Leave a Reply

Your email address will not be published. Required fields are marked *

error: Content is protected !!