ಕೆಆರ್‌ಎಸ್ ನಾಲೆ ಆಧುನೀಕರಣ ‘ಅವೈಜ್ಞಾನಿಕ’: ಪ್ರಧಾನಿಗೆ ದೂರು
ವಿಶ್ವೇಶ್ವರಯ್ಯನವರ ಆಶಯಕ್ಕೆ ತಿಲಾಂಜಲಿ; ಅಂತರ್ಜಲ ಕುಸಿತದ ಆತಂಕ ವ್ಯಕ್ತಪಡಿಸಿದ ಡಾ. ಸಿದ್ದೇಗೌಡ ಮಂಡ್ಯ: ಜಿಲ್ಲೆಯ ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳ ಆಧುನೀಕರಣ ಕಾಮಗಾರಿ ತೀವ್ರ ವಿವಾದಕ್ಕೆ ಈಡಾಗಿದೆ. ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳು ಸಂಪೂರ್ಣ ‘ಅವೈಜ್ಞಾನಿಕ’ವಾಗಿದ್ದು, ಇದು ಸ್ಥಳೀಯ ಪರಿಸರ ಮತ್ತು ಜಲ ಸಂಪನ್ಮೂಲಗಳ ಮೇಲೆ ಮಾರಕ ಪರಿಣಾಮ ಬೀರಲಿದೆ ಎಂದು ಆರೋಪಿಸಿ ಚಿಕ್ಕಬಳ್ಳಾಪುರದ ಶಾ ಶಿಬ್ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರೂ ಆದ ಬೂದನೂರು ನಿವಾಸಿ ಡಾ. ಸಿದ್ದೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಿದ್ದಾರೆ….

