Headlines

ಕರ್ನಾಟಕ ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ಎಫ್‌ಐಆರ್ ದಾಖಲು

​ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆಯ ಘನತೆಗೆ ಕುಂದು ತರುವಂತಹ ಘಟನೆಯೊಂದು ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್‌ನ ರಿಜಿಸ್ಟ್ರಾರ್ ಮಲ್ಲು ಎಂಬುವವರು ತಮ್ಮದೇ ಕಚೇರಿಯ ಮಹಿಳಾ ಸಿಬ್ಬಂದಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ​ಘಟನೆಯ ಹಿನ್ನೆಲೆ: ​ಗಾಂಧೀನಗರದಲ್ಲಿರುವ ನರ್ಸಿಂಗ್ ಕೌನ್ಸಿಲ್ ಕಚೇರಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕೆಲಸದ ನೆಪದಲ್ಲಿ ಸಂತ್ರಸ್ತೆಯ ಬಳಿ ಬಂದ ಆರೋಪಿ, ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ….

Read More

ಇಂದಿರಾ ಕ್ಯಾಂಟಿನ್ ಆವರಿಸಿದ ಒಳಚರಂಡಿ ನೀರು.!

ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿಚಾಮರಾಜನಗರ : ಜಿಲ್ಲಾಡಳಿತ ಸಮೀಪವಿರುವ ಇಂದಿರಾ ಕ್ಯಾಂಟಿನ್ ಗೆ ಮಳೆ ನೀರು, ಒಳಚರಂಡಿ ನೀರಿನಿಂದ ಜಲಾವೃತಗೊಂಡ ಪರಿಣಾಮ: ೨-೩ ದಿನ‌‌‌ ಕ್ಯಾಂಟಿನ್ ಬಂದ್‌ ಮಾಡಲಾಗಿದೆ. ಕೂಲಿಕಾರ್ಮಿಕರು, ಸಾರ್ವಜನಿಕರು. ವಿದ್ಯಾರ್ಥಿಗಳಿಗೆ ಕಡಿಮೆದರದಲ್ಲಿ‌ ಉಪಹಾರ ಒದಗಿಸುವ ಕಾಂಗ್ರೆಸ್ ಸರ್ಕಾರದ‌ ಮಹತ್ವದ ಯೋಜನೆ ಇಂದಿರಾ ಕ್ಯಾಂಟೀನ್ ಸಿಎಂ ಸಿದ್ದರಾಮಯ್ಯ 2013 ರಲ್ಲಿ ಸಿಎಂ ಆಗಿದ್ದಾಗ ಚಾಮರಾಜನಗರ ಸೇರಿದಂತೆ ರಾಜ್ಯದ ಹಲಜಿಲ್ಲೆಗಳಲ್ಲಿ ಆರಂಭಿಸಿದ್ಷರು. ದುರಂತ ಎಂದರೆ‌ ಸಿಎಂ‌ ತವರು ಜಿಲ್ಲೆಯಿಂದ 60 ಕಿಮೀ‌ ಗಡಿಜಿಲ್ಲಾ ಕೇಂದ್ರದಲ್ಲಿನ ಇಂದಿರಾ ಕ್ಯಾಂಟಿನ್…

Read More

ರಾತ್ರಿ ಆದ್ರೆ ಸಾಕು ಪೊಲೀಸ್ ಠಾಣೆಗಳು ಕ್ಲೋಸ್: ಡಿಜಿಪಿ ಸಲೀಂ ಅವ್ರೇ ಇದನ್ನೊಮ್ಮೆ ನೋಡಿ!

ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ ಗಡಿ ಜಿಲ್ಲೆ ಚಾಮರಾಜನಗರದ ಪೊಲೀಸ್ ಇಲಾಖೆಯಲ್ಲಿ ವಿಚಿತ್ರವೊಂದು ಜಾರಿಯಲ್ಲಿದೆ. “ಜನಸ್ನೇಹಿ ಪೊಲೀಸ್” ಎಂಬ ಘೋಷವಾಕ್ಯಕ್ಕೆ ಇಲ್ಲಿನ ಕೆಲವು ಠಾಣೆಗಳು ಅಕ್ಷರಶಃ ಬೀಗ ಜಡಿಯುತ್ತಿವೆ. ಜಿಲ್ಲೆಯ ಸೆನ್ (CEN) ಮತ್ತು ಮಹಿಳಾ ಪೊಲೀಸ್ ಠಾಣೆಗಳು ರಾತ್ರಿ ಹೊತ್ತಾದರೆ ಸಾಕು, ದೂರುದಾರರಿಗಾಗಿ ಕಾಯುವ ಬದಲು ಬಾಗಿಲಿಗೆ ಬೀಗ ಹಾಕಿಕೊಂಡು ವಿಶ್ರಮಿಸುತ್ತಿರುವ ಗಂಭೀರ ಆರೋಪಗಳು ಕೇಳಿಬರುತ್ತಿವೆ. ​ವರದಿಯ ಪ್ರಕಾರ, ಮಾರ್ಚ್ 26ರ ರಾತ್ರಿ 9 ಗಂಟೆ ಹಾಗೂ 27ರ ಬೆಳಗಿನ ಜಾವ 8 ಗಂಟೆಯ ಸಮಯದಲ್ಲೂ…

Read More

ಮಂಡ್ಯದ ಬೆನ್ನಲ್ಲೇ ಚಾಮರಾಜನಗರದಲ್ಲೂ ಫ್ಲೆಕ್ಸ್ ವಿವಾದ: ಅಧಿಕಾರಿಗಳ ಪ್ರಚಾರಕ್ಕೆ ಖಾಸಗಿ ಸಂಘಟನೆಗಳ ಸಾಥ್?

ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ ಮಂಡ್ಯ ಜಿಲ್ಲೆಯಲ್ಲಿ ಹಬ್ಬದ ಶುಭಕೋರುವ ಫ್ಲೆಕ್ಸ್‌ಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಫೋಟೋ ಬಳಕೆಯಾಗಿ ದೊಡ್ಡಮಟ್ಟದ ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಈಗ ಗಡಿ ಜಿಲ್ಲೆ ಚಾಮರಾಜನಗರದಲ್ಲೂ ಅಂತಹದ್ದೇ ಬೆಳವಣಿಗೆಯೊಂದು ಮುನ್ನೆಲೆಗೆ ಬಂದಿದೆ. ಖಾಸಗಿ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳ ಭಾವಚಿತ್ರಗಳನ್ನು ಫ್ಲೆಕ್ಸ್‌ಗಳಲ್ಲಿ ಬಳಸಿರುವುದು ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ​ಚಾಮರಾಜನಗರ ವಿಶ್ವವಿದ್ಯಾನಿಲಯ ಹಾಗೂ ಮೈಸೂರಿನ ಶ್ರೀ ಯೋಗಿನಾರಾಯಣ ಯತೀಂದ್ರರ ಪ್ರಚಾರ ಸಭಾ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಕೈವಾರ ತಾತಯ್ಯನವರ…

Read More

ನಿವೃತ್ತಿ ಹೊತ್ತಲ್ಲಿ ಡಿಜಿಪಿಗೆ ವಿಡಿಯೋ ಶಾಕ್: ಕಚೇರಿಯಲ್ಲೇ ಸೆರೆಯಾಗಿದ್ದ ಶೃಂಗಾರ ದೃಶ್ಯಗಳು ನೂರಕ್ಕೆ ನೂರು ಸತ್ಯ!

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ, ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ವೈರಲ್ ವಿಡಿಯೋ ಪ್ರಕರಣವೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ದೃಶ್ಯಗಳು ಎಡಿಟ್ ಮಾಡಿದ್ದಲ್ಲ, ಬದಲಾಗಿ ನೂರಕ್ಕೆ ನೂರರಷ್ಟು ಅಸಲಿ ಎಂಬುದು ಎಸ್‌ಐಟಿ (SIT) ತನಿಖೆಯಲ್ಲಿ ಬಯಲಾಗಿದೆ! ​ಎಡಿಟಿಂಗ್ ಅಲ್ಲ, ಇದು ಎಐ ಕಾಲದ ಡೀಪ್‌ಫೇಕ್ ಕೂಡ ಅಲ್ಲ! ​ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದು ತನ್ನ ಚಾರಿತ್ರ್ಯ ಹರಣಕ್ಕೆ ಮಾಡಿರುವ ಪಿತೂರಿ, ದೃಶ್ಯಗಳನ್ನು ಎಡಿಟ್…

Read More

ಮಂಡ್ಯ : ಕಳೆದುಕೊಂಡಿದ್ದ ಮೊಬೈಲ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ

ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ತೆರಳುವ ಸಂದರ್ಭದಲ್ಲಿ ಮೊಬೈಲ್ ಕಳೆದು ಕೊಂಡಿದ್ದ ಪ್ರಯಾಣಿಕರೊಬ್ಬರ ಮೊಬೈಲನ್ನು ಹಿಂದಿರುಗಿಸುವ ಮೂಲಕ ಬಸ್ಸಿನ ನಿರ್ವಾಹಕರೊಬ್ಬರು ಪ್ರಾಮಾಣಿಕತೆ ಮೆರೆದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಮಂಡ್ಯ – ಆದಿಚುಂಚನಗಿರಿ ನಡುವೆ ಸಂಚರಿಸುವ ನಾಗಮಂಗಲ ಡಿಪೋಗೆ ಬಸ್ಸಿನ ನಿರ್ವಾಹಕ ಸತೀಶ್ ಬಿ.ಎಸ್.ಮೊಬೈಲನ್ನು ಹಿಂದಿರುಗಿಸಿ ಮಾನವೀಯತೆ ಮರೆದಿದ್ದಾರೆ. ಏನಿದು ಘಟನೆ ? ಮಂಡ್ಯ ತಾಲ್ಲೂಕಿನ ಹನಿಯಂಬಾಡಿ ಗ್ರಾಮದ ಮಂಜುಳ ಹಾಗೂ ಅವರ ಪತಿ ಎನ್.ಶೇಖರ್ ಅವರು ಭಾನುವಾರ ಬೆಳಿಗ್ಗೆ ಮಂಡ್ಯದಿಂದ ಆದಿಚುಂಚನಗಿರಿಗೆ ಬಸ್ಸಿನಲ್ಲಿ ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಮಂಜುಳ…

Read More

ಕೆ.ಆರ್.ಪೇಟೆ: ಪತ್ನಿ ಬೆನ್ನಲ್ಲೇ ಪತಿಯೂ ಬಲಿ; ಕತ್ತು ಹಿಸುಕಿದರೂ ಬದುಕುಳಿದ ಎರಡು ವರ್ಷದ ಕಂದಮ್ಮ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. ಹೊಸಕೋಟೆ ಗ್ರಾಮದ ಮೂಲದ ದರ್ಶನ್ (29) ಮತ್ತು ಪತ್ನಿ ದಿವ್ಯಶ್ರೀ (25) ಮೃತಪಟ್ಟವರು. ಮೃತ ದಂಪತಿ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು, ಕೆ.ಆರ್. ಪೇಟೆಯ ಜಯನಗರ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ದರ್ಶನ್ ಕಾರು ಚಾಲಕನಾಗಿ ಕೆಲಸ ಮಾಡುತ್ತಾ ಕೃಷಿಯಲ್ಲೂ ತೊಡಗಿಸಿಕೊಂಡಿದ್ದರೆ, ದಿವ್ಯಶ್ರೀ ಪ್ಯಾರಾ ಮೆಡಿಕಲ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ​ಇಂದು ಬೆಳಗ್ಗೆ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ ಎನ್ನಲಾಗಿದ್ದು,…

Read More

​ದೂರು ನೀಡಲು ಹೋದವರ ಮೇಲೆಯೇ ಪೊಲೀಸ್ ಪ್ರತಾಪ: ಹಲ್ಲೆ ನಡೆಸಿದರೇ ಎಸ್‌ಐ ಮತ್ತು ಕಾನ್ಸ್‌ಟೇಬಲ್!?

ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ ಚಾಮರಾಜನಗರ ಜಿಲ್ಲೆಯ ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದ ಅಮಾಯಕ ಯುವಕರ ಮೇಲೆ ಖಾಕಿ ಪಡೆ ದರ್ಪ ಮೆರೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಂದಹಳ್ಳಿ ಗ್ರಾಮದ ಶಿವರಾಜು ಹಾಗೂ ಕುಮಾರ್ ಎಂಬುವವರು ತಮ್ಮ ಮೊಬೈಲ್ ಕಳ್ಳತನವಾಗಿರುವ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳ ಸಮೇತ ದೂರು ನೀಡಲು ಠಾಣೆಗೆ ತೆರಳಿದ್ದರು. ಆದರೆ, ಅಲ್ಲಿ ನ್ಯಾಯ ಸಿಗುವ ಬದಲು ಪೊಲೀಸರ ಹಲ್ಲೆ ಮತ್ತು ಅವಾಚ್ಯ ಶಬ್ದಗಳ ನಿಂದನೆ ಎದುರಾಗಿದೆ ಎಂದು ಸಂತ್ರಸ್ತರು ಅಳಲು…

Read More

​”ಸಾವಯವ ಕೃಷಿ – ಸುಸ್ಥಿರ ಬದುಕು: ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಮಂಡ್ಯದ ರೈತರಿಗಾಗಿ ವಿಶೇಷ ತರಬೇತಿ.”

ಮಂಡ್ಯ ಜಿಲ್ಲೆಯ ಕೃಷಿಕರ ಜೀವನಾಡಿಯಾದ ಕೃಷಿ ಚಟುವಟಿಕೆಗಳಿಗೆ ಹೊಸ ಆಯಾಮ ನೀಡುವ ಉದ್ದೇಶದಿಂದ, ಅತೀ ಕಡಿಮೆ ನೀರನ್ನು ಬಳಸಿ ನೈಸರ್ಗಿಕವಾಗಿ ಸಾವಯವ ಕೃಷಿ ಮಾಡುವ ಕುರಿತು ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಗೌರವಾನ್ವಿತ ಶ್ರೀ ಶ್ರೀ ಕಾಡು ಸಿದ್ದೇಶ್ವರ ಸ್ವಾಮೀಜಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ರೈತರಿಗೆ ಉಪಯುಕ್ತ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ. ​ಕಾರ್ಯಕ್ರಮದ ವಿವರಗಳು: ​ಈ ಒಂದು ದಿನದ ಕಾರ್ಯಾಗಾರಕ್ಕೆ ಬರುವ ಆಸಕ್ತ ರೈತ ಬಾಂಧವರಿಗೆ ಪ್ರವೇಶ ಉಚಿತವಾಗಿರುತ್ತದೆ. ಆದರೆ, ಸೀಮಿತ ಅವಕಾಶಗಳಿರುವುದರಿಂದ ರೈತರು ಕಡ್ಡಾಯವಾಗಿ ತಮ್ಮ…

Read More

ಲಂಚದ ಆಮಿಷ: ಚಾಮರಾಜನಗರ ಸಂಚಾರ ಮುಖ್ಯ ಪೇದೆ ‘ಔಟ್’!

ವರದಿ : ರಾಮಸಮುದ್ರ ಎಸ್. ವೀರಭದ್ರಸ್ವಾಮಿ ಚಾಮರಾಜನಗರ: ಖಾಕಿ ಅಂಗಿಯ ಅಹಂಕಾರ ಹಾಗೂ ಕೈಬಿಸಿ ಮಾಡುವ ಚಾಳಿ ಕೊನೆಗೂ ಒಬ್ಬ ಮುಖ್ಯ ಪೇದೆಯ ಕೆಲಸಕ್ಕೆ ಕುತ್ತು ತಂದಿದೆ! ಬಡ ಸವಾರನಿಗೆ ಕಿರುಕುಳ ನೀಡಿ, ಲಂಚಕ್ಕಾಗಿ ಆಮಿಷವೊಡ್ಡಿದ ಆರೋಪದ ಮೇಲೆ ಚಾಮರಾಜನಗರ ನಗರ ಸಂಚಾರ ಠಾಣೆಯ ಮುಖ್ಯ ಪೇದೆ ಮಲ್ಲು ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಅಮಾನತುಗೊಳಿಸಿ ಆದೇಶಿಸಿದ್ದಾರೆ. ​ಏನಿದು ಘಟನೆ? ​ಸಂಚಾರ ನಿಯಮ ಉಲ್ಲಂಘನೆ ಹೆಸರಲ್ಲಿ ವಶಪಡಿಸಿಕೊಂಡಿದ್ದ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಲು ಮಲ್ಲು…

Read More
error: Content is protected !!