ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ.
ಚಾಮರಾಜನಗರ: ಪಟ್ಟಣದಲ್ಲಿ ದಿನೆ ದಿನೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಅಪ್ರಾಪ್ತರಿಂದ ವಾಹನ ಚಾಲನೆ ಕೂಡ ಹೆಚ್ಚುತ್ತಿದೆ. ಅದರಲ್ಲೂ ಹೆಲ್ಮೆಟ್ ರಹಿತ ಚಾಲನೆ ಹೇಳತೀರದಂತಾಗಿದೆ. ಕಾನೂನು ಪಾಲೀಸಬೇಕಾದ ಪೊಲೀಸರೂ ಸಮವಸ್ತ್ರದಲ್ಲಿದ್ದರೂ ಹೆಲ್ಮೆಟ್ ಧರಿಸದೆ ಓಡಾಡೋದು ಸಾಮಾನ್ಯವಾಗಿದೆ.
ಚಾಮರಾಜನಗರ ಅದೇಷ್ಪೊ ಪೊಲೀಸ್ ವರೀಷ್ಟಾದಿಕಾರಿಗಳು ಈಗಾಗಲೇ ಆದೇಶ ಹೊರಡಿಸಿದ್ದು ಕರ್ತವ್ಯ ಅವದಿಯಲ್ಲಿ ಹಾಗೂ ಖಾಸಗೀ ಅವದಿಯಲ್ಲೂ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದು.ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಇಲಾಖಾವಾರು ನಿಯಮ ತೆಗೆದುಕೊಳ್ಳಲಾಗುವುದು ಎಂದು ಆದೇಶ ಹೊರಡಿಸುತ್ತಲೆ ಇರ್ತಾರೆ ಆದರೆ ಕೆಲವರು ಆದೇಶಗಳು ಪತ್ರಕ್ಕೆ ಸೀಮಿತವಾಗಿರ್ತಾವೆ..ಹಿಂದಿನ ಎಸ್ಪಿ ಕವಿತಾ ಅವರು ಯಾವ್ದೆ ಆದೇಶ ಮಾಡದೆ ಖಡಕ್ ಇಲಾಖಾವಾರು ಕ್ರಮ ಕೈಗೊಳ್ಳೊ ಮೂಲಕ ಇಲಾಕಾ ಸಿಬ್ಬಂದಿಗೆ ಪಾಠ ಕಲಿಸುತ್ತಿದ್ದರು.
ದೀಪದ ಕೆಳಗೆ ಕತ್ತಲು ಎಂಬಂತೆ ಎಸ್ಪಿ ಕಚೇರಿ ಸಿಬ್ಬಂದಿಗಳು ,ಡಿವೈಸ್ಪಿ ಕಚೇರಿ ಸಿಬ್ಬಂದಿಗಳು, ಸಶಸ್ತ್ರ ಮೀಸಲು ಪಡೆಯ ಕೆಲವು ಸಿಬ್ಬಂದಿಗಳು ಎಗ್ಗಿಲ್ಲದೆ ನಿಯಮ ರಾಜಾರೋಷವಾಗಿ ಉಲ್ಲಂಘಿಸುತ್ತಿದ್ದು ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ.
ನಿಯಮ ಪಾಲಿಸಬೇಕಾದ ಪೊಲೀಸ್ ಸಿಬ್ಬಂದಿಗಳೆ ಪಾಲಿಸದಿರುವಾಗ ಜನಸಾಮಾನ್ಯರ ಮೇಲೆ ಯಾಕೆ ಬರೆ ಎಂಬಂತಾಗಿದೆ.
ಚಾಮರಾಜನಗರ ಪಟ್ಟಣದಲ್ಲಿ ಪಾರ್ಕಿಂಗ್ ಅವ್ಯವಸ್ಥೆ, ಶಾಲಾ ಮಕ್ಕಳಿಂದ ವಾಹನ ಚಾಲನೆ, ಅತಿ ಹೆಚ್ಚು ಹೆಲ್ಮೆಟ್ ರಹಿತ ವಾಹನ ಚಾಲನೆ ಯಥೇಚ್ಚವಾಗಿದೆ. ಪೊಲೀಸರು ಹಾಗೂ ಗೃಹರಕ್ಷಕ ಸಿಬ್ಬಂದಿಗಳು ಇಬ್ಬರು ಶಿರಸ್ತ್ರಾಣ ಧರಿಸುವ ಹಿಂದಿನ ಎಸ್ಪಿ ಕವಿತಾ ಅವರ ವರ್ಗಾವಣೆ ನಂತರ ಈಗ ಪಿಲಿಯನ್ ರೈಡರ್ ಗೆ ಮುಕ್ತಿ ಕಾಣಿಸಲಾಗಿದೆ.
ವಾಹನ ಹಿಡಿದಾಗ ಪೊಲೀಸರಿಂದ ವಾಹನ ಬಿಡುಗಡೆಗೆ ಹೆಚ್ಚು ಕರೆ: ತಪಾಸಣೆ ಸಂದರ್ಭದಲ್ಲಿ ವಾಹನ ಜಪ್ತಿ ಮಾಡಿದಾಗ ದಂಡ ಕಟ್ಟುವ ಬದಲು ಅವರು ಸಂಬಂದಿಕರು/ಪೊಷಕರಿಂದ ಕೆಲ ಪರಿಚಯಸ್ಥ ಪೊಲೀಸರಿಂದ ಕರೆ ಮಾಡಿಸಿ ಪುಕ್ಕಟ್ಟೆಯಾಗಿ ವಾಹನ ಬಿಡಿಸುವುದರಿಂದ ಸಂಚಾರಿ ಪೊಲೀಸರಿಗೂ ಡೋಂಟ್ ಕೇರ್ ಎನ್ನುತ್ತಿದ್ದಾರೆ ತಪ್ಪೆಸಗಿದ ವಾಹನ ಚಾಲಕರು. ಇದರಿಂದ ಬಡ ಜನರಿಗೊಂದು ಪರಿಚಯಸ್ಥ ಜನರಿಗೊಂದು ಕಾನೂನು ಎಂಬಂತಾಗಿದೆ.
ಸಿ.ಸಿ.ಕ್ಯಾಮೆರಾ ಆದರಿಸಿ ದಂಡ: ಮಹಾನಗರಗಳಲ್ಲಿ ಸಿ.ಸಿ.ಕ್ಯಾಮರಾ ಆಧರಿಸಿ ದಂಡ ಹಾಕುವುದು ಒಂದೆಡೆಯಾದರೆ ಇಲ್ಲಿ ಟಿ.ಎಮ್‌ಸಿ.ಯೋಜನೆ ಇಲ್ಲದೆ ಇರುವುದರಿಂದ ಪೊಲೀಸರೆ ಬೀದಿಯಲ್ಲಿ ನಿಂತು ದಂಡ ಹಾಕುತ್ತಿದ್ದಾರೆ. ಬಹುತೇಕ ಕಡೆ ನಿಯಮ ಉಲ್ಲಂಘಿಸಿ ಪೊಲೀಸರನ್ನೆ ಯಾಮಾರಿಸೊ ಪ್ರಸಂಗ ಕೂಡ ನಡೆದಿದೆ.
ಗೃಹ ರಕ್ಷಕ ಸಿಬ್ಬಂದಿ ಬಳಕೆ ಸರಿಯೆ;?
ವಾಹನ ತಪಾಸಣೆ ನೆಪದಲ್ಲಿ ಗೃಹರಕ್ಷಕ ಸಿಬ್ಬಂದಿ ಬಳಸಿ ವಾಹನ ತಡೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದರೆ ಪೊಲೀಸರೆ ಗಲಾಟೆ ಪ್ರಕರಣ ದಾಖಲಿಸುವ ಪರಿಕಲ್ಪನೆಗೆ ಬರುತ್ತಾರೆ ಈಗಾಗಲೆ ದೂರು ರಾಜ್ಯ ಪ್ರಾದಿಕಾರ ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರು ಅಪ್ರಾಪ್ತ ಮಕ್ಜಳ ಚಾಲನೆ ಹಾಗೂ ಗೃಹರಕ್ಷಕ ಸಿಬ್ಬಂದಿ ಬಳಕೆ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆ ಡಿಜಿಪಿಗೆ ಪತ್ರ ಬರೆದಿದ್ದು ಎಲ್ಲೆಡೆ ಗೃಹರಕ್ಷಕ ಸಿಬ್ಬಂದಿಗಳದ್ದೆ ದರ್ಬಾರಾಗಿದೆ ಎಂದರೆ ತಪ್ಪಾಗಲಾರದು.

